ಬಯಲು ಆಲಯ

ಬಯಲು ಆಲಯ

ಕ್ಷಣ ಕ್ಷಣಕ್ಕೂ
ನಡೆಯುವ
ದಣಿವಿರದ ಕಾಲುಗಳು
ಒಮ್ಮೊಮ್ಮೆ ಎಡುವಿ
ಬೀಳುತ್ತವೆ
ಆಗಸದಿ ರೆಕ್ಕೆ ಬಿಚ್ಚಿ
ಮುಕ್ತವಾಗಿ ಹಾರುವ
ಹಕ್ಕಿಗಳು ನೆಲಕ್ಕೆ
ಉರುಳುತ್ತವೆ
ಮಿನುಗುವ ತಾರೆಗಳು
ಪತನವಾಗುತ್ತವೆ
ಬಿಟ್ಟಿಲ್ಲ ಸೂರ್ಯ ಚಂದ್ರರಿಗೆ
ಗ್ರಹಣದ ಕಾಟ
ಸೃಷ್ಟಿ ದೃಷ್ಟಿ ಶಿವನ ಆಟ
ಬದುಕುವ ಛಲ
ಮನುಜನ ಮಾಟ
ನಡೆದಷ್ಟು ದಾರಿ
ಪಡೆದಷ್ಟು ಭಾಗ್ಯ
ನಕ್ಕು ನಗಿಸಿ
ಬಾಳುವುದೇ
ಬಯಲು ಆಲಯದ
ದೈವ ಕೂಟ

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!