ಸವಿತಾ ಮಾಟೂರು ಕನ್ನಡ ಜಾನಪದ ಪರಿಷತ್ತ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಇಂದು ಪದಗ್ರಹಣ
e-ಸುದ್ದಿ ಇಳಕಲ್ಲ
ಇಳಕಲ್ಲ ಪಟ್ಟಣದ ಸಾಹಿತಿ, ಅಕ್ಕನ ಬಳಗದ ಮಾಜಿ ಕಾರ್ಯದರ್ಶಿ , ಶ್ರೀವಿಜಯ ಮಹಾಂತೇಶ ಗುರುಕುಲದ ಅಧ್ಯಕ್ಷೆ, e-ಸುದ್ದಿ ಬಳಗದ ಲೇಖಕಿ, ಸವಿತಾ ಮಾಟೂರು ಅವರು ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಾ.೧೭ ಭಾನುವಾರ ಸಂಜೆ ೫ ಗಂಟೆಗೆ ಶ್ರೀ ವಿಜಯ ಮಾಹಾಂತೇಶ್ವರ ಸಂಸ್ಥಾನ ಮಠದ ದಾಸೋಹ ಭವನದಲ್ಲಿ ಅಧಿಕಾರ ಸ್ವಿಕರಿಸಲಿದ್ದಾರೆ.
ಕನ್ನಡ ಜಾನಪದ ಪರಿಷತ್ತು ಬೆಂಗಳೂರು, ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲ್ಲೂಕು ಘಟಕ ಇಳಕಲ್ಲ ಇವರ ಸಹಯೋಗದಲ್ಲಿ ಜಾನಪದ ಸಂಭ್ರಮ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ.ಮ.ನಿ.ಪ್ರ ಗುರುಮಹಾಂತ ಮಹಾಸ್ವಾಮಿಗಳು ಇಳಕಲ್ಲ ವಹಿಸುವರು. ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ.ಎಸ್.ಬಾಲಾಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಡಾ.ಅರುಣಾತಾಯಿ ಕೆ.ಅಕ್ಕಿ ಖ್ಯಾತ ವೈದ್ಯರು, ಇಳಕಲ್ಲ, ಡಿ.ಎಂ.ಸಾವಕಾರ ಜಿಲ್ಲಾ ಅಧ್ಯಕ್ಷರು ಕನ್ನಡ ಜಾನಪದ ಪರಿಷತ್ತ ಬಾಗಲಕೋಟೆ, ಚನ್ನಬಸಪ್ಪ ಎಸ್ ಲೆಕ್ಕಿಹಾಳ ತಾಲ್ಲೂಕು ಅಧ್ಯಕ್ಷರು ಇಳಕಲ್ಲ , ಹಿರಿಯ ಸಹಾಯಕ ಪ್ರಾದ್ಯಪಕರಾದ ಡಾ.ಅನ್ನಪೂರ್ಣ ಎಸ್.ಮಠ, ಸಮಾಜ ಸೇವಕರಾದ ಹಂಪಕ್ಕ ಗುರಣ್ಣ ಮರಟದ, ಡಾ.ರಾಖಿ ಜಿ.ಪೆಡ್ನೇಕರ್, ಕೆ.ಸಿ. ಕಾಂತಪ್ಪ ರಾಮನಗರ, ವಿಜಯ ಕೊಪ್ಪ ಮಂಡ್ಯ ಆಗಮಿಸಲಿದ್ದಾರೆ ಎಂದು ಕಾರ್ಯದರ್ಶಿ ಸುಜಾತ ಅಂಗಡಿ ತಿಳಿಸಿದ್ದಾರೆ.
ಅಭಿನಂದನೆಗಳು
ಶರಣೆ ಸವಿತಾ ಮಾಟೂರು ಕನ್ನಡ ಜಾನಪದ ಪರಿಷತ್ತ ಅಧ್ಯಕ್ಷೆಯಾಗಿರುವದಕ್ಕೆ e-ಸುದ್ದಿ ಅಂತರಜಾಲ ಪತ್ರಿಕೆಯ ಸಂಪಾದಕ ವೀರೇಶ ಸೌದ್ರಿ ಮಸ್ಕಿ, ವಚನ ಮಂದಾರ ವೇದಿಕೆ ಸಂಚಾಲಕ ವಿಜಯಕುಮಾರ ಕಮ್ಮಾರ ತುಮಕೂರು, ಸರ್ವಮಂಗಳ ಸಕ್ರಿ ರಾಯಚೂರು, ಸುನಿತಾ ಅಂಗಡಿ ಇಳಕಲ್ಲ, ಜಯಶ್ರಿ ಶಟ್ಟರ್ ಇಳಕಲ್ಲ, ಶಶಿಕಾಂತ ಕಾಡ್ಲೂರು ಲಿಂಗಸುಗೂರು, ಗಿರಿಜಮ್ಮ ಶಿವಬಲ್ಲ ಇಳಕಲ್ಲ ಇವರೆಲ್ಲ ಅಭಿನಂದಿಸಿದ್ದಾರೆ.