ಸ್ವಯಂ ಘೋಷಿತ ದೇವಮಾನವರು

ಸ್ವಯಂ ಘೋಷಿತ ದೇವಮಾನವರು

ಬಸವ ಬುದ್ಧ ಅಂಬೇಡ್ಕರರು ಬದುಕಿನ ಕಷ್ಟ ಸಿದ್ಧಾಂತಗಳನು ಬೋಧಿಸಿದರು ಶಿಕ್ಷಣದ ಮಹತ್ವ ಹೇಳಿಕೊಟ್ಟರು.

ಬದಲಾಗದ ನಮ್ಮ ಜನ ಇನ್ನೂ ಅಂಧಕಾದಲ್ಲಿಯೇ ತೊಳಲಾಡುತ್ತಾ ಮಾನವರನ್ನು ದೇವರನ್ನಾಗಿಸುವ ಕ್ರಿಯೆ ಪ್ರತಿದಿನ ನಡೆಯುತ್ತಲೇ ಇದೆ.

ಶಿಕ್ಷಣ ಕಲಿತ ಜಾಣರು
ಸ್ವಯಂ ಘೋಷಿತ ದೇವ ಮಾನವರನ್ನು ಪೂಜಿಸಲು ಅಣಿಯಾಗಿದ್ದರು,ಅಣಿಯಾಗುತ್ತಿದ್ದಾರೆ ಇದಕ್ಕೇನನ್ನಬೇಕು?

ಪ್ರಳಯವಾಗಿ ಸಾವಿರಾರು ಜನ ಇನ್ನಿಲ್ಲದಂತೆ ಇಹಲೋಕ ಬಿಟ್ಟು ಸಾಗುತ್ತಿದ್ದಾರೆ,ದೇವಮಾನವರು ಇಂತಹ ನೈಸರ್ಗಿಕ ವಿಕೋಪಗಳನು ತಡೆದು ಜನರನ್ನು ರಕ್ಷಿಸಬಹುದಿತ್ತಲ್ಲ?
ಸಾವಿರಾರು ಜನ ರೋಗ ರುಜಿನಗಳಿಂದ ನೋವು ಅನುಭವಿಸುತ್ತಾ ಜೀವನ ಸಾಗಿಸುತ್ತಿದ್ದಾರೆ ಅವರ ರೋಗ ವಾಸಿ ಮಾಡಬಹುದಿತ್ತಲ್ಲ? ಯಾಕೆ ಇದನ್ನೆಲ್ಲಾ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ?ಯಾಕೆಂದರೆ….

ಅವರೂ ಸಹ ನಮ್ಮಂತೆ ಮಾನವರು,ಆದರೆ ಸ್ವಯಂ ಘೋಷಿತ ದೇವಮಾನವರು ಯಾಮಾರಬೇಡಿ ಇಂತಹ ಮೋಸಗಾರರ ಮೋಡಿಗೆ,ಮಾತಿನ ವರಸೆಗೆ ಮರುಳಾಗದಿರಿ
ಎಚ್ಚರ,ಎಚ್ಚರ ಇಂತಹ ಜನರನ್ನು ಬೆಂಬಲಿಸುವ ಮನದವರು ನಮ್ಮ ನಡುವೆ ಇದ್ದಾರೆ.

ಅವರರಿವರ ಒತ್ತಾಯಕ್ಕೆ ಮಣಿದು ದೇವಮಾನವರೆಂದು ಕರೆಯಿಸಿಕೊಳ್ಳುವವರ ಹಿಂದೆ ಹೋಗಿ ಸಮಯ ಹಣ ವ್ಯರ್ಥ ಮಾಡಿಕೊಂಡು ನಂತರ ಪಶ್ಚಾತಾಪ ಪಡಬೇಡಿ.

ಗುರುವೇ ಶ್ರೇಷ್ಠ.

 

 

 

 

 

 

 

 

 

ಶಂಕರ್.ಜಿ.ಬೆಟಗೇರಿ.

Don`t copy text!