ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ

ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು
ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ
ಬೆಂಗಳೂರು ಇವರಿಗೆ

ವಿಷಯ – ವಚನ ಪಿತಾಮಹ ಡಾ ಫ ಗು ಹಳಕಟ್ಟಿವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು

ಸನ್ಮಾನ್ಯರೇ, 
ಬಸವ ಭಕ್ತರ ಬಸವವಾದಿಗಳ ಬಹುದಿನಗಳ ಆಗ್ರಹದಂತೆ ಬಸವಣ್ಣನವರು ಮತ್ತು ಶರಣರು ಕೊಟ್ಟ ವಚನಗಳನ್ನು ಸಂಸ್ಕರಿಸಿ ಪರಿಷ್ಕರಿಸಿ ಕನ್ನಡ ನಾಡಿಗೆ ವಚನ ಪಿತಾಮಹ ಡಾ ಫ ಗು ಹಳಕಟ್ಟಿಅವರು ಕೊಟ್ಟು ಈಗ 100 ವರುಷ ಸಂದಿವೆ . ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರ ಹೆಸರಿನಲ್ಲಿ ಅವರ ಹುಟ್ಟೂರಾದ ಧಾರವಾಡದಲ್ಲಿ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ವಚನ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಬೇಕು.
ಹದಿನಾರನೆಯ ಶತಮಾನದಲ್ಲಿ ನಡೆದ ವಚನಗಳ ಸಂಕಲನ ಕಾರ್ಯದ ಸಂದರ್ಭದಲ್ಲಿ ಮತ್ತು ಶೂನ್ಯ ಸಂಪಾದನೆಯ ರಚನಾ ಕಾಲ ಘಟ್ಟದಲ್ಲಿ ಕೆಲ ಪ್ರಕ್ಷಿಪ್ತ ವಚನಗಳು ಖೋಟಾ ವಚನಗಳು ವಚನಗಳ ಕಟ್ಟಿನಲ್ಲಿ ಸೇರಿಕೊಂಡಿವೆ ಮತ್ತು ಅವುಗಳ ಪುನರಾವೃತ್ತಿಯಾಗಿ ಇತ್ತೀಚಿಗೆ ಕಳೆದ ಒಂದು ದಶಕದಿಂದ ನಡೆದ ಸಮಗ್ರ ವಚನಗಳ ಸಂಪುಟದ ಸಂಪಾದನೆಯಲ್ಲಿಯೂ ಕೂಡ ಅನೇಕ ಪ್ರಮಾದಗಳು ನಡೆದಿವೆ. ಇಂತಹ ದೋಷಪೂರಿತ ವಚನಗಳನ್ನು ತೆಗೆದು ಹಾಕಲು ಮತ್ತು ವಚನ ಚಳುವಳಿಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಕಾರ್ಯ ಅತ್ಯಗತ್ಯವಾಗಿ ನಡೆಯಬೇಕಿದೆ.

ಬಸವ ಕಾಲಿನ ಶರಣರ ಬಗ್ಗೆ ಅನೇಕ ಸಂಶೋಧನೆಗಳು ನಡೆಯಬೇಕಿದೆ . ಇಂದು ತಮ್ಮ ಸರಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದು ಸ್ತುತ್ಯಾರ್ಹವಾಗಿದೆ ಅದಕ್ಕೆ ಮನಃಪೂರ್ವಕವಾಗಿ ಅಭಿನಂದಿಸುತ್ತೇವೆ. ಬರುವ ಶೈಕ್ಷಣಿಕ ವರ್ಷದಿಂದಲೇ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ವಚನ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತೇನೆ.

ಅನಂತ ಭಕ್ತಿ ಪೂರ್ವಕ ಶರಣಾರ್ಥಿ

 

 

 

 

 

 

 

 

 

ಡಾ ಶಶಿಕಾಂತ ಪಟ್ಟಣ
ಅಧ್ಯಕ್ಷರು ಬಸವ ತತ್ವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ
ಪುಣೆ (ರೆಜಿಸ್ಟರ್ಡ್ )
ಕರ್ನಾಟಕಟ ಘಟಕ ಬೆಳಗಾವಿ

2 thoughts on “ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ

  1. ವಚನಗಳ ಪರಿಷ್ಕರಣೆ ಅಗತ್ಯ, ಅದಕ್ಕಾಗಿಯೇ ವಿಶೇಷವಾಗಿ ಒಂದು ಪ್ರಮುಖ ಸ್ಥಳ ಆಗಬೇಕು.

Comments are closed.

Don`t copy text!