ರಾಜ್ಯ ಮಟ್ಟದ ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಗೆ ಬಾರಿಗಿಡದ ದೊಡ್ಡಿ ಶಾಲೆ ಆಯ್ಕೆ

ರಾಜ್ಯ ಮಟ್ಟದ ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಗೆ ಬಾರಿಗಿಡದ ದೊಡ್ಡಿ ಶಾಲೆ ಆಯ್ಕೆ

 

ಲಿಂಗಸಗೂರು ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಗಿಡದ ದೊಡ್ಡಿ ಶಾಲೆಯು 2024 – 25ನೇ ಸಾಲಿನ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೆನಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆ, ಇವರು ಪ್ರತಿ ವರ್ಷ ರಾಜ್ಯಾದಂತ ಸರಕಾರಿ ಶಾಲೆಗಳ ಕಟ್ಟಡ ಸ್ವಚ್ಛತೆ ಅತ್ಯುತ್ತಮ ಸಾಧನೆಯನ್ನು ಪ್ರೋತ್ಸಾಹಿಸಿ ನೀಡುವ ಪ್ರಶಸ್ತಿ ಇದಾಗಿದೆ.

ಈ ಶಾಲೆಯು 2001 ರಲ್ಲಿ 1 ರಿಂದ 5ನೇ ತರಗತಿವರೆಗೆ ಆರಂಭವಾಗಿದ್ದು, ಒಟ್ಟು 46 ವಿದ್ಯಾರ್ಥಿಗಳು ಇಲ್ಲಿ ಕಲಿಯುತಿದ್ದಾರೆ. ಇಲ್ಲಿನ ಮುಖ್ಯ ಶಿಕ್ಷಕರಾದ ಚಂದ್ರು ಕಬ್ಬಲಿಗರ ಅವರ ಅವಿರತ ಪರಿಶ್ರಮದಿಂದ ಗುಡ್ಡಗಾಡು ಪ್ರದೇಶದ ಮದ್ಯ ಇರುವ ಈ ಶಾಲೆ ಹೊರಗಿನಿಂದ ನೋಡಲು ಒಂದು ಸುಂದರ ಉದ್ಯಾನವನಾಗಿ ಕಾಣುತ್ತದೆ.
ಬಾದಾಮಿ ,ತೆಂಗು ,ಕರಿಬೇವು ಹೆಬ್ಬೆವು, ಹೊಂಗೆ ,ದಾಸವಾಳ , ಸಾಗುವಾನಿ ,ಮಲ್ಲಿಗೆ ಹೂ ಸೇರಿದಂತೆ ಮುಂತಾದ ಹಲವು ಬಗೆಯ ವಿವಿಧ ತಳಿಯ 150 ಕ್ಕೂ ಹೆಚ್ಚು ಬಗೆ ಬಗೆಯ ಗಿಡಗಳಿವೆ.

ಶಾಲೆಯ ಆವರಣದಲ್ಲಿ ಮಕ್ಕಳ ಕಲಿಕೆಗೆ ಸರಳವಾಗಿ ಅರ್ಥೈಸುವ ರೀತಿಯಲ್ಲಿ ತ್ರಿಭುಜ, ಆಯತ ,ವೃತ್ತ, ತ್ರಿಕೋನ, ಹೀಗೆ ಮುಂತಾದವುಗಳನ್ನು ಸಸಿಗಳಲ್ಲಿಯೇ ಬಿಡಿಸಲಾಗಿದೆ. ಇವೆಲ್ಲವಕ್ಕೂ ಚುಮ್ಮವ ಕಾರಂಜಿಯಂತೆ ನೀರನ್ನು ಸ್ಪರ್ಶಿಸಲಾಗುತ್ತದೆ. ದಿನದ 24 ಗಂಟೆಯೂ ನೀರಿನ ಸೌಲಭ್ಯದ ವ್ಯವಸ್ಥೆ ಇದೆ.

ಈ ಹಿಂದೆ ಈ ಶಾಲೆಯು ಹಲವಾರು ಪ್ರಶಸ್ತಿಗೆ ಭಾಜನವಾಗಿದೆ. 2015 ರಲ್ಲಿ
ಜಿಲ್ಲಾಧಿಕಾರಿಗಳಿಂದ ಉತ್ತಮ ಶಾಲೆ ಪ್ರಶಸ್ತಿ, 2017ರಲ್ಲಿ ಹಸಿರು ಶಾಲೆ ಪ್ರಶಸ್ತಿ, 2021 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿದ್ದು ಈ ಸಾಲಿಗೆ ರಾಜ್ಯಮಟ್ಟದ ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಯೂ ಕೂಡ ಸೇರಿದೆ.

ಇದೇ ತಿಂಗಳು 27 ರಂದು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಇವರ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀ ಸದ್ಗುರು ಮಧುಸೂದನ್ ಸಾಯಿ ಅವರ 45 ನೇ ವರ್ಷದ ಜನ್ಮದಿನದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರು ಕಬ್ಬಲಿಗರ್ ಅವರಿಗೆ ಶ್ರೀಗಳ ನೇತೃತ್ವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

 

 

 

 

 

ನಮ್ಮ ಶಾಲೆಯನ್ನು ಈ ಪ್ರಶಸ್ತಿಗೆ ಆಯ್ಕೆಮಾಡಿಲು ಕಾರಣರಾದ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ನ ಸರ್ವರಿಗೂ ಶಾಲೆಯ ಎಸ್.ಡಿ.ಎಂ.ಎಸಿ ಅಧ್ಯಕ್ಷರು ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿ. ಆರ್. ಪಿ ಇವರೆಲ್ಲರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದು ಶಿಕ್ಷಕರಾದ ಚಂದ್ರು ಕಬ್ಬಲಿಗೇರ ಅವರು ಮಾಹಿತಿ ನೀಡಿದ್ದಾರೆ .

 

 

 

 

 

 

 

 

-ವರದಿ ವೀರೇಶ ಅಂಗಡಿ ಗೌಡೂರು

Don`t copy text!