ಸಹಾಯಕ ಆಯುಕ್ತ ಬಸವಣ್ಣಪ್ಪ ಅದ್ಯಕ್ಷತೆಯಲ್ಲಿ ಮಸ್ಕಿ ನಾಲಾ ಜಲಾಶಯದ ಸಲಹಾ ಸಮಿತಿ ಸಭೆ. ಇಂದಿನಿಂದ ಕಾಲುವೆ ನೀರು
e-ಸುದ್ದಿ ಮಸ್ಕಿ:
ತಾಲೂಕಿನಲ್ಲಿ ಮಳೆಯ ಕೊರೆತೆಯಿಂದ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕುಂತಾಗುತ್ತಿದೆ. ಆದ್ದರಿಂದ ಮಸ್ಕಿ ನಾಲಾ ಜಲಾಶಯ ಬಾಗದ ರೈತರು ನೀರಿನ ಲಭ್ಯತೆ ಆಧರಿಸಿ ಬೆಳೆಗಳನ್ನು ಬೆಳೆಯಿರಿ ಎಂದು ಖಾಧಿ ಗ್ರಾಮೋದ್ಯೋಗ ನಿಗಮದ ಅದ್ಯಕ್ಷ ಶಾಸಕ ಆರ್.ಬಸನಗೌಡ ಮನವಿ ಮಾಡಿದರು.
ಮಸ್ಕಿ ತಾಲೂಕಿನ ಮಾರಲದಿನ್ನಿಯಲ್ಲಿ ಸಹಾಯಕ ಆಯುಕ್ತ ಬಸವಣ್ಣಪ್ಪ ಅದ್ಯಕ್ಷತೆಯಲ್ಲಿ ನಡೆದ ಮಸ್ಕಿ ನಾಲಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು. ಈ ಬಾರಿ ಮುಂಗಾರು ಹಂಗಾಮಿಗೆ ಜೂನ್ ತಿಗಳು ಮಾತ್ರ ಮಳೆಯಾಗಿದ್ದು ಬಿಟ್ಟರೆ ಮತ್ತೆ ಮಳೆಯಾಗದೇ ಇರುವುದರಿಂದ ಜಲಾಶಯ ಭತಿರ್ಧಯಾಗಿಲ್ಲ ಇದರಿಂದ ಈ ಬಾಗದ ರೈತರು ತೊಂದರೆ ಅನುಭವಿಸುವಂತಾಗುತ್ತಿದ್ದೆ. ಮುಂದೆ ಮಳೆ ಬರುವ ಎಲ್ಲಾ ಲಕ್ಷಣಗಳಿಗೆ ಮಳೆ ಬಂದರೆ ಜಲಾಶಯ ಭರ್ತಿಯಾಗಿ ನೀರಿ ಕೊರತೆ ನಿವಾರಣೆಯಾಗಿ ರೈತರು ಸಂತಸದಿAದ ಬೆಳೆಗಳನ್ನು ಬೆಳೆದುಕೊಳ್ಳಬಹುದು. ಆದರೆ ಈಗ ಇರುವ ನೀರಿನ ಪ್ರಮಾಣದ ಆದ್ಯತೆ ಮೇರೆಗೆ ರೈತರು ಬೆಳೆ ಬೇಳೆದುಕೊಳ್ಳಿ ಎಂದರು. ಆಗಸ್ಟ್ ೬ರ ಬೆಳಿಗ್ಗೆಯಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದರಿಂದ ರೈತರು ನೀರು ಪೋಲಾಗದಂತೆ ನೋಡಿಕೊಳ್ಳಿ ಎಂದು ರೈತರಲ್ಲಿ ಮನವಿ ಮಾಡಿದರು.
ಲಿಂಗಸಗೂರು ಸಹಾಯಕ ಆಯುಕ್ತ ಬಸವಣ್ಣಪ್ಪ ಮಾತನಾಡಿ ಮಸ್ಕಿ ನಾಲಾ ಜಲಾ ಶಯದ ಮೇಲ್ಬಾಗದಲ್ಲಿ ಕಳೆದ ಜೂನ ತಿಂಗಳು ಮಳೆಯಾಗದೇ ಇರುವುದರಿಂದ ಜಲಾಶಯ ಇನ್ನು ಭರ್ತಿಯಾಗಲು ೬ ಅಡಿಗಳಷ್ಟು ಬಾಕಿ ಇದೆ. ರೈತರಿಗೆ ಅನೂಕೂಲವಾಗಲೆಂದು ಸಲಹಾ ಸಇತಿಯ ತಿರ್ಮಾನದಂತೆ ಆಗಸ್ಟ್ ೬ರ ಬೆಳಿಗ್ಗೆಯಿಂದಲೇ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು ಎಂದರು. ಅಲ್ಲದೇ ಈಗಿರುವ ನೀರನ್ನು ಬೆಳೆಗಳಿಗೆ ಸಮರ್ಪಕವಾಗಿ ಕೊಡುವುದಕ್ಕಾಗಿ ಶನಿವಾರ ಮತ್ತು ಭಾನುವಾರ ನೀರನ್ನು ನಿಲ್ಲಿಸಲಾಗುವುದು ಇದರಿಂದ ೮೨ ದಿನಗಳವರೆಗೆ ರೈತರ ಜಮೀನುಗಳಿಗೆ ನೀರು ಹರಿಸಲು ಅನೂಕೀಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸತ್ಯನಾರಾಯಣ, ಗುರುನಾಥ, ತಹಸೀಲ್ದಾರ್ ಮಲ್ಲಪ್ಪ.ಕೆ. ಯರಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಮಾಜಿ ತಾಪಂ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪೂರು, ಮಾರಲದಿನ್ನಿ ಗ್ರಾಪಂ ಅರ್ಧಯಕ್ಷ ಬೀರಪ್ಪ, ಶಾಸಕರ ಪುತ್ರ ಸತೀಶಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಇದ್ದರು.
ಮಸ್ಕಿ ನಾಲಾಜಲಾಶಯದ ವ್ಯಾಪ್ತಿಯ ಮೂರು ಗ್ರಾಮ ಪಂಚಾಯತಿಗಳ ವತಿಯಿಂದ ಜಲಾಶಯದ ನಾಲೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಆದ್ದರಿಂದ ಪ್ರತಿವರ್ಷ ಮೂರು ತಿಂಗಳಲ್ಲಿ ಮುಗಿಸುವ ಕೆಲಸ ಮಾಡಬೇಕು, ಗ್ರಾಪಂ ಅವರಿಗೆ ಒಂದು ತಿಂಗಳು ಮುಂಚೆಯೇ ಎಸ್ಟಿಮೆಂಟ್ ಮಾಡಿ ನೀರಾವರಿ ಇಲಾಖೆಯಿಂದ ಕಳಿಸಿ ಎಂದರು. ಮುಂದಿನ ವರ್ಷದಿಂದ ಕಾಲುವೆಗೆ ನೀರು ಬಿಡುವ ಮುನ್ನ ಕಾಲುವೆಗೆ ಸ್ವಚ್ಚ ಮಾಡಿ ಇದರಿಂದ ರೈತರ ಜಮೀನುಗಳಿಗೆ ನೀರು ತಲುಪುತ್ತದೆ ಎಂದರು.
೫೨ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮಸ್ಕಿ ನಾಲಾ ಜಲಾಶಯದ ಕಾಲುವೆಗಳ ಆಧುನಿಕರಣ ಕಾಮಗಾರಿ ಈಗಾಗಲೇ ಗುತ್ತಿಗೆದಾರರಿಗೆ ಕೊಟ್ಟಿರುವ ಅವಧಿ ಮುಗಿದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ನೀವು ಏನೂ ಮಾಡುತ್ತಿದ್ದಿರೀ ಎಂದು ನೀರಾವರಿ ಇಲಾಖೆಯ ಅಧಿಖಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಇನ್ನು ಒಂದು ತಿಂಗಳು ಒಳಗೆ ಕಾಲುವೆ ಬದಿಯ ಸರ್ವಿಸ್ ರಸ್ತೆ ಸೇರಿದಂತೆ ಎಲ್ಲಾ ಕಾಮಗಾರಿ ಮಾಡಿ ಮುಗಿಸಬೇಕು ಇಲ್ಲದಿದ್ದರೆ ರೀಟೆಂಡರ್ ಮಾಡಿಸಿ ಎಂದು ನೀರಾವರಿ ಇಲಾಖೆಯ ಸತ್ಯನಾರಾಯಣ ಅವರಿಗೆ ಸೂಚಿಸಿದರು. ಕಾಮಗಾರಿ ಮುಗಿದರೆ ಕೂಡಲೇ ನನಗೆ ಮಾಹಿತಿ ನೀಡಬೇಕು ನಾನು ರೈತರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ನಂತರವೇ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಬಿಲ್ ಮಾಡಬೇಡಿ ಎಂದು ಅಧಿಕಾರಿಗಳಿಗೆ ಶಾಸಕ ಆರ್.ಬಸನಗೌಡ ಸೂಚನೆ ನೀಡಿದರು.