ಪ್ರಕಾಶನ ಸಂಸ್ಥೆಗೆ ಪಾಲುದಾರರಾಗಿ, ಹಣ ಗಳಿಸಿ

ದೇವನಾಂಪ್ರಿಯ ಪ್ರಕಾಶನ ಮಸ್ಕಿ

 

ಪುಸ್ತಕ ಪ್ರಿಯರಲ್ಲಿ ವಿನಂತಿ

ಪ್ರಪಂಚವನ್ನು ಮನುಷ್ಯರು ಆಳುವದಿಲ್ಲ. ಅವರ ವಿಚಾರಗಳು ಆಳುತ್ತಿರುತ್ತವೆ. ಮನುಷ್ಯನ ಮನಸ್ಸಿನಲ್ಲಿ ಮೂಡುವ ವಿಚಾರಗಳ ಉತ್ಪತ್ತಿಗೆ ಜ್ಞಾನ ಮೂಲ. ಜ್ಞಾನ ದಾರ್ಶನಿಕರ ಅನುಭವದ ನುಡಿಗಳಿಂದ, ಇತಿಹಾಸದ ಘಟನೆಗಳಿಂದ ಭವಿಷ್ಯತ್ತಿಗಾಗಿ ಚಿಂತನೆ ಮಾಡಿದ ಪರಿಣಾಮ ವಿಚಾರಗಳ ಉಗಮವಾಗುತ್ತವೆ.

ಇತಿಹಾಸದ ಘಟನೆಗಳು, ದಾರ್ಶನಿಕರ ಅನುಭಾವದ ನುಡಿಗಳು, ಜೀವನ ಚರಿತ್ರೆ, ಜ್ಞಾನದ ಅವತರಣಿಕೆಗಳು ಪುಸ್ತಕ ರೂಪದಲ್ಲಿವೆ.

ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಶರಣರು, ಸಂತರು, ಸೂಫಿಗಳು, ದಾಸರು ಆಗಿಹೋಗಿದ್ದಾರೆ. ಅವರ ಜ್ಞಾನ‌ ಅಖಂಡವಾಗಿದೆ. ಅವುಗಳ ಓದುವಿಕೆ ಬಹಳ ಅಗತ್ಯವಾಗಿದೆ.
ಇತ್ತೀಚಿಗೆ ಪುಸ್ತಕ ಓದುವ ಸಂಸ್ಕ್ರತಿ ನಶಿಸುತ್ತದೆ ಎಂಬ ಭಾವನೆ ಬಂದಿದೆ. ಈ ಭಾವನೆ ಹೋಗಲಾಡಿಸಬೇಕಾಗಿದೆ. ನಾವು ಮತ್ತು ನಮ್ಮ ಮಕ್ಕಳು ಓದುವ ಸಂಸ್ಕ್ರತಿಯತ್ತ ಮುಖ ಮಾಡಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ಉತ್ತಮ‌ ಪುಸ್ತಗಳು ಎಲ್ಲಿ ಸಿಗುತ್ತವೆ ಎಂಬ ಪ್ರಶ್ನೆ ಸಹಜ.
ಉತ್ತಮ ಪುಸ್ತಗಳನ್ನು ನಿಮ್ಮ ಮನೆ ಬಾಗಿಲಿಗೆ ಮುಟ್ಟಿಸುವ ಯೋಜನೆ ರೂಪಿಸಿದ್ದೇವೆ.
ವಾಸ್ತವದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪುಸ್ತಕ ಪ್ರಕಾಶನ ಸಂಸ್ಥೆಗಳು ವಿರಳ. ಮೈಸೂರು, ಬೆಂಗಳೂರು, ಮಂಗಳೂರು ಭಾಗದಲ್ಲಿ ಪುಸ್ತಕ ಪ್ರಕಾಶನ ಉದ್ಯಮದ ಸ್ವರೂಪ ಪಡೆದುಕೊಂಡಿದೆ. ಅಂತದೆ ಪ್ರಯತ್ನವನ್ನು ನಮ್ಮ ಭಾಗದಿಂದ ಸಹಕಾರ ತತ್ವದ ಆಧಾರದ ಮೇಲೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸ್ವಪ್ನ ಬುಕ್ ಹೌಸ್ ಮಾದರಿಯಲ್ಲಿ ಬಹು ದೊಡ್ಡಮಟ್ಟದ ಪುಸ್ತಕ ಬಂಡಾರ ಮಳಿಗೆ ಆರಂಭಿಸುತ್ತಿದ್ದೇವೆ. ಕರ್ನಾಟಕದ ಪ್ರತಿಯೊಬ್ಬ ಲೇಖಕರ ಪುಸ್ತಕಗಳನ್ನು ಮಾರಾಟ ಮಾಡುವ ವ್ಯವಸ್ಥೆ ರೂಪಿತವಾಗಿದೆ.

ನೀವು ಪಾಲುದಾರರಾಗಿ
ದೇವನಾಂಪ್ರಿಯ ಪ್ರಕಾಶನ ಸಂಸ್ಥೆಗೆ ಸದಸ್ಯತ್ವ ಪಡೆಯುವ ಮೂಲಕ ನೀವು ಪಾಲುದಾರರಾಗಿ.
ಸದಸ್ಯತ್ವ -1000 ರೂ.
ಪೊಷಕರು- 5000 ರೂ
ಮಹಾಪೋಷಕರು-10000 ರೂ

ಪಾಲುದಾರರಿಗೆ ಪ್ರತಿವರ್ಷ ಶೇ.20 ರಷ್ಟು ನಿಮಗಿಷ್ಟವಾದ ಪುಸ್ತಕ ಪಡೆಯಬಹುದು.
ಅಥವಾ ಪುಸ್ತಕ ಬೇಡವಾದರೆ ಶೇ.15 ರಷ್ಟು ಹಣವನ್ನು ಲಾಭದ ರೂಪದಲ್ಲಿ ಪಾವತಿಸಲಾಗುತ್ತದೆ.

ಲೇಖಕರಿಗೆ , ಓದುಗರಿಗೆ ವೇದಿಕೆ
ಲೇಖಕರ ಪುಸ್ತಕ ಪ್ರಕಟಿಸುವ ಓದುಗರಿಗೆ ಪುಸ್ತಕ ಮುಟ್ಟಿಸುವ ಹೊಣೆ ನಮ್ಮದು. ಸಹಕರಿಸಿ, ಪ್ರೋತ್ಸಾಹಿಸಿ.

 

 

 

ಸಂಚಾಲಕ
ವೀರೇಶ ಸೌದ್ರಿ
ದೇವನಾಂಪ್ರಿಯ ಪ್ರಕಾಶನ, ಮಸ್ಕಿ-584124
ರಾಯಚೂರು ಜಿಲ್ಲೆ
ಸಂಪರ್ಕಿಸಿ
9448805067
63618 11156

Don`t copy text!