ಹೈಕೊರ್ಟ ಆದೇಶ ಪಾಲಿಸಿ ಮುಖ್ಯಮಂತ್ರಿ ರಾಜಿನಾಮೆ ನೀಡಲಿ- ಪ್ರತಾಪಗೌಡ ಪಾಟೀಲ
e- ಸುದ್ದಿ ಮಸ್ಕಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ರಾಜಕಾರಣಿಯಾಗಿದ್ದು ಹೈಕೊರ್ಟ ಆದೇಶಕ್ಕೆ ಮನ್ನಣೆ ನೀಡಿ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಿಂದ ಹಳೇ ಬಸ್ ನಿಲ್ದಾಣದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿವರೆಗೆ ಬುಧವಾರ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಮೂಡ ಹಗರಣ ಈಗಗಾಲೇ ಜಗಜ್ಜಾಹಿರವಾಗಿದೆ. ಎಸ್.ಟಿ.ನಿಗಮದ ಹಗರಣದಲ್ಲಿ ಮಂತ್ರಿ ನಾಗೇಂದ್ರ ಅವರ ರಾಜಿನಾಮೆ ಪಡೆದಿರುವ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡುವ ಮೂಲಕ ಮೇಲ್ಪಂಕ್ತಿ ಹಾಕಲಿ. ಸಾರ್ವಜನಿಕ ಬದುಕಿನಲ್ಲಿ ಆರೋಪಗಳು ಬಂದಾಗ ನಿರಾಕರಿಸುವುದು, ಸ್ವಪ್ರತಿಷ್ಠೆ ಮಾಡಿಕೊಳ್ಳುವದಕ್ಕಿಂತ ಕೊರ್ಟ ತೀರ್ಪನ್ನು ಜನಪ್ರತಿನಿಧಿಗಳಾದವರು ಗೌರವಿಸಿ ಪಾಲಿಸಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಮತಾನಾಡಿ ಮುಖ್ಯಮಂತ್ರಿಗಳು ಖುರ್ಚಿಗೆ ಅಂಟಿಕೊಳ್ಳುವುದು ಶೋಭೆ ತರುವುದಿಲ್ಲ. ನಾನು ತಪ್ಪು ಮಾಡಿಲ್ಲ ಎನ್ನುವ ಮುಖ್ಯಮಂತ್ರಿಗಳು ತನಿಖೆಯಿಂದ ಮುಕ್ತರಾಗುವವರೆಗೂ ಮುಖ್ಯಮಂತ್ರಿ ಸ್ಥಾನ ತ್ಯಾಜಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಅಪ್ಪಾಜಿಗೌಡ ಪಾಟೀಲ, ಡಾ.ಬಿ.ಎಚ್.ದಿವಟರ್, ಮಲ್ಲಪ್ಪ ಅಂಕುಶದೊಡ್ಡಿ, ಅಮರೇಶ ಅಡವಿಬಾವಿ ತಾಂಡ, ಶಿವಪುತ್ರಪ್ಪ ಅರಳಹಳ್ಳಿ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬ್ಯಾಳಿ, ಚೇತನ ಪಾಟೀಲ, ವೀರೇಶ ಕಮತರ್, ಸುಗಣ್ಣ ಬಾಳೆಕಾಯಿ, ಜಿ.ವೆಂಕಟೇಶ ಹಾಗೂ ಇತರರು ಭಾಗವಹಿಸಿದ್ದರು.