ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

 

ಭಾರತ ಇತಿಹಾಸದಲ್ಲಿ ರಾಮದುರ್ಗ ಸಂಸ್ಥಾನ ವಿಮೋಚನೆ ನಡೆದ ರಕ್ತ ಸಿಕ್ತ ಹೋರಾಟ ರಾಮದುರ್ಗ ದುರಂತ ಇದರ ಕ್ಯಾಪ್ಟನ್ ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬ ಇಂದು ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ 1911 ಸೆಪ್ಟೆಂಬರ್ 26 ರಂದು ಶ್ರೀ ಶಿವ ಬಸಪ್ಪ ಸೌ ಸಾವಂತರೆಮ್ಮ ಅವರ ಮಗನಾಗಿ ಜನ್ಮ ತಾಳಿದ ಡಾ ಮಹದೇವಪ್ಪ ಶಿ ಪಟ್ಟಣ ಅವರು ಹುಟ್ಟು ಹೋರಾಟಗಾರರು.
ರಾಮದುರ್ಗ ಸಂಸ್ಥಾನದ ರಾಜ ಭಾವೆ ಮನೆತನದವರ ನಿರಂತರ ಉಪಟಳ ಶೋಷಣೆ ,ರೈತ ಕಾರ್ಮಿಕರ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿ
ರಾಜನ ವಿರುದ್ಧ ಮತ್ತು ಬ್ರಿಟಿಷರ ಅರಸೊತ್ತಿಗೆ ವಿರುದ್ಧ ಹೋರಾಟನಡೆಸಿ , 1939 ರಲ್ಲಿಯೇ ಭಾರತ ಗಣರಾಜ್ಯದಲ್ಲಿ ರಾಮದುರ್ಗ ಸಂಸ್ಥೆಯನ್ನು ವಿಲೀನೀಕರಿಸಿದ ಅಪೂರ್ವ ಕ್ರಾಂತಿಯ ಕಿಡಿ ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ.

ಬಳ್ಳಾರಿ ಮರ್ಜರ್ ಮೂವ್ಮೆಂಟ್ ವಿರುದ್ಧ ಹೋರಾಟ
ಚಲೇ ಜಾವ ಚಳುವಳಿ ,
ರಾಮದುರ್ಗ ಸಂಸ್ಥಾನ ವಿಮೋಚನೆ
ಕರ್ನಾಟಕ ಏಕೀಕರಣ
ಸ್ವಾತಂತ್ರ ಹೋರಾಟ
ಹೀಗೆ ಆಳರಸರ ಮತ್ತು ಬ್ರಿಟಿಷರ ಕೋಪಕ್ಕೆ ಗುರಿಯಾಗಿ ಅಂದಿನ ಆಡಳಿತ ವ್ಯವಸ್ಥೆಯಿಂದ ಗಲ್ಲು ಶಿಕ್ಷೆಗೆ ಗುರಿಯಾಗಿ
ಮತ್ತೆ ತಪ್ಪಿಸಿ ಕೊಂಡು ಭೂಗತ ಚಳುವಳಿ ಮಾಡಿ ಸ್ವತಂತ್ರ ಸಿಗುವವವರೆಗೆ ನಿರಂತರ ಸಮರ ಸಾರಿದ ಶ್ರೇಷ್ಠ ಜನನಾಯಕ ರಾಮದುರ್ಗ ಸಂಸ್ಥಾನ ವಿಮೋಚನೆ
ಇವರ ಮೇಲೆ ಅಂದೇ ಲಾವಣಿ ಗೀಗಿ ಪದಗಳು ರಚಿತಗೊಂಡಿವೆ.
ಇವರು 1956 ರಿಂದ 1962 ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು.

 


ಇವರ ಧರ್ಮ ಪತ್ನಿ ಶ್ರೀ ಮತಿ ಶಾರದಮ್ಮ ಪಟ್ಟಣ ಅವರು 1967 ರಿಂದ 1972 ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು.
ಇವರ ದ್ವಿತೀಯ ಮಗ ಶ್ರೀ ಅಶೋಕ್ ಪಟ್ಟಣ ಇವರು ಕರ್ನಾಟಕ ಸರಕಾರದ ಮುಖ್ಯ ಸಚೇತಕರು ಈಗ ಮೂರನೇಯ ಅವಧಿಗೆ ಶಾಸಕರಾಗಿ ಜನಾನುರಾಗಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
5 ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು
ಇವರನ್ನು ಪೋಷಿಸುತ್ತಿರುವ ಯುವ ಮುಖಂಡ ಶ್ರೀ ಪ್ರದೀಪ ಪಟ್ಟಣ ಮತ್ತು ಶರಣೆ ಜಮುನಕ್ಕ ಆಧುನಿಕ ಶ್ರಾವಣ ಕುಮಾರ ಎಂದೇ ಹೇಳಬಹುದು
ಪ್ರದೀಪ ಪಟ್ಟಣ ಶರಣೆ ಜಮುನಕ್ಕ ಮತ್ತು ಅವರು ನಮ್ಮ ಗುಂಪಿನ ಸಕ್ರಿಯ ಸದಸ್ಯರು.
ಪಟ್ಟಣ ಮನೆತನ ಮೊದಲಿನಿಂದಲೂ ಅಪ್ಪಟ ಬಸವ ತತ್ವದಲ್ಲಿ ನಂಬಿಕೆ ಇಟ್ಟವರು

 

 

 

 

 

 

 

 

 

-ಡಾ.ಶಶಿಕಾಂತ.ಪಟ್ಟಣ -ಪೂನಾ

Don`t copy text!