ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಶಾಂತಮ್ಮ ಅಸಮಕಲ್ ಆಯ್ಕೆ
e- ಸುದ್ದಿ ಮಸ್ಕಿ
೨೦೨೩ ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯಿಂದ ನೀಡಲಾಗುವ ಜಾನಪದ ಪ್ರಶಸ್ತಿಗೆ ತಾಲ್ಲೂಕಿನ ಹಸಮಕಲ್ ಗ್ರಾಮದ ಬುರ್ರಾ ಕಥಾ ಕಲಾವಿದೆ ಶಾಂತಮ್ಮ ಹಸಮಕಲ್ ಆಯ್ಕೆಯಾಗಿದ್ದಾರೆ
ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದವರಾದ ಶಾಂತಮ್ಮ ಗಂಡ ಜಂಬಣ್ಣನವರು ೧೯೬೧ ರಲ್ಲಿ ಮಾನ್ವಿ ತಾಲೂಕಿನ ಆಕಳಕುಂಪಿ ಗ್ರಾಮದಲ್ಲಿ ಜನಿಸಿ ನಂತರ ಮದುವೆಯಾಗಿ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಇವರಿಗೆ ಜಿಲ್ಲಾ ತಾಲೂಕು ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಇವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಜಾನಪದ ಕ್ಷೇತ್ರದಲ್ಲಿ ಬುರ್ರ ಕಥೆಯಲ್ಲಿ ಹಾಗೂ ಆಕಾಶವಾಣಿ ರಾಯಚೂರಿನಲ್ಲಿ ಕಾರ್ಯಕ್ರಮ ಹಾಗೂ ಅಸಮಕಲ್ ಗ್ರಾಮದಲ್ಲಿ ಜಾನಪದ ಸಾಂಸ್ಕೃತಿಕ ಟ್ರಸ್ಟನ್ನು ಮುನ್ನಡೆಸುತ್ತಿದ್ದಾರೆ.
ವಾದ್ಯ ಪರಿಕರದಲ್ಲಿ ತಂಬೂರಿ, ಗುಮ್ಮಟೇ, ಕೈಗನ್ನಡಿಯಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಬುರ್ರ ಕಥೆಯನ್ನು ಮನೆ ಮನೆಗಳಿಗೆ ಹೋಗಿ ಹಾಡುತ್ತಾರೆ. ಇದೀಗ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ೨೦೨೩ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿದೆ