ಪತ್ರಿಕೆ ಹಂಚುವ ಹುಡಗರಿಗೆ ಬಣಜಿಗ ಸಂಘದಿಂದ ಸ್ವೆಟರ್ ವಿತರಣೆ

ಪತ್ರಿಕೆ ಹಂಚುವ ಹುಡಗರಿಗೆ ಬಣಜಿಗ ಸಂಘದಿಂದ ಸ್ವೆಟರ್ ವಿತರಣೆ


e- ಸುದ್ದಿಜಾಲ ಮಸ್ಕಿ

ಪ್ರತಿನಿತ್ಯ ಮನೆ ಮನೆಗೆ ಪತ್ರಿಕೆ ವಿತರಿಸುವ ಹುಡಗರಿಗೆ ಮಂಗಳವಾರ ಬಣಜಿಗ ಸಮಾಜದಿಂದ ಸ್ವೆಟರ್ ವಿತರಣೆ ಮಾಡಲಾಯಿತು.
ಪಟ್ಟಣದ ಪತ್ರಿಕಾ ಭವನದಲ್ಲಿ ಬಣಜಿಗ ಸಮಾಜದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುಗಣ್ಣ ಬಾಳೆಕಾಯಿ ತಮ್ಮ ಸ್ವಂತ ಹಣದಿಂದ ಇಪ್ಪತ್ತು ವಿದ್ಯಾರ್ಥಿಗಳಿಗೆ ಸ್ವೇಟರ್ ದಾನ ಮಾಡಿದರು.

ಮಸ್ಕಿ ತಾಲ್ಲೂಕು ಬಣಜಿಗ ಸಮಾಜದ ಅಧ್ಯಕ್ಷ ವೀರೇಶ ಸೌದ್ರಿ ಮಾತನಾಡಿ ಬೆಳಗಿನ ಜಾವ ಮಲಗಬೇಕಾದ ವಿದ್ಯಾರ್ಥಿಗಳು ಎಲ್ಲರೂ ಎದ್ದೆಳುವದಕ್ಕಿಂತ ಮೊದಲು ಪತ್ರಿಕೆ ವಿತರಿಸುವ ಮಾಹಾ ಕಾರ್ಯ ಮಾಡುತ್ತವೆ. ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕು ಎಂದರು.
ಸಮಾಜದ ಪ್ರಮುಖರಾದ ಪಂಪಣ್ಣ ಗುಂಡಳ್ಳಿ, ಬಣಜಿಗ ಸಮಾಜದ ತಾಲ್ಲೂಕು ಅಧ್ಯಕ್ಷ ವೀರೇಶ ಸೌದ್ರಿ, ನಗರ ಘಟಕದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಇತ್ಲಿ, ಕಾರ್ಯದರ್ಶಿ ಬಸವಲಿಂಗಪ್ಪ ಶಟ್ಟಿ, ಮಂಜುನಾಥ ಮಾಟೂರು,ಬಸವರಾಜ ಕುಡತನಿ, ನಾಗರಾಜ ಯಂಬಲದ, ಶಿವು ಬ್ಯಾಳಿ, ಮಾಹಂತೇಶ ಬ್ಯಾಳಿ ಹಾಗೂ ಇತರರು ಇದ್ದರು.

Don`t copy text!