ರಂಗಭೂಮಿ ಸಮಾಜ ತಿದ್ದುವ ಕೆಲಸ ಮಾಡಿದೆ – ಶರಣು ಪಾ.ಹಿರೇಮಠ
e- ಸುದ್ದಿ ಸಿಂಧನೂರು
ರಾಜರ ಕಾಲದಿಂದಲೂ ರಂಗಭೂಮಿಗೆ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಯಾರು ಕೂಡ ಬ್ರಿಟಿಷರ ವಿರುದ್ಧ ಭಾಷಣ ಮಾಡುವಂತಿರಲಿಲ್ಲ. ಅಕಸ್ಮಾತ್ ಮಾಡಿದರೆ, ಅವರನ್ನ ಅರೆಸ್ಟ್ ಮಾಡಿಸುತ್ತಿದ್ದರು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರಂಗಭೂಮಿ ಚಳುವಳಿ ಸ್ವರೂಪ ಪಡೆದುಕೊಂಡು ಸಮಾಜವನ್ನು ತಿದ್ದುವಂತಹ ಕೆಲಸ ಆಗಿನ ಕಾಲದಲ್ಲಿ ರಂಗಭೂಮಿ ಮಾಡಿದೆ ಎಂದು ಹಿರಿಯ ಪತ್ರಕರ್ತರಾದ ಶರಣು ಪಾ ಹಿರೇಮಠ ಹೇಳಿದರು.
ನಗರದ ವಿಜಡಮ್ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 2024-25 ನೇ ಸಾಲಿನ ದತ್ತಿ ಉಪನ್ಯಾಸ, ಕವಿಗೋಷ್ಠಿ, ಹಾಗೂ ರಂಗಗೀತೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯ ಪಾಠದ ಜೊತೆಗೆ ಇತರೆ ಸಾಮಾಜಿಕ ಚಟುವಟಿಕೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.
ನಂತರ ನಿವೃತ್ತ ಪ್ರಾಂಶುಪಾಲ್ ವೀರನಗೌಡ ಗುಮಗೇರಿ ಮಾತನಾಡಿ, ರಿಟೇಕ್ ಬಳಸದೆ ಪಾತ್ರದಾರಿಗಳು ನಾಟಕದಲ್ಲಿ ಅಭಿನಯಿಸುತ್ತಾರೆ. ಆದರೆ ಸಿನಿಮಾ, ಧಾರಾವಾಹಿಯಲ್ಲಿ ರಿಟೇಕ್ ಬಳಸುತ್ತಾರೆ. ಇದೆ ರಂಗಭೂಮಿಗೂ, ಮತ್ತು ಸಿನಿಮಾ ದಾರಾವಾಹಿಗಳಿಗೆ ಇರುವ ವ್ಯತ್ಯಾಸ, ಡಾ.ರಾಜಕುಮಾರ, ಕಲ್ಪನಾ, ವಜ್ರಮುನಿ, ಶಂಕರನಾಗ್, ಅನಂತನಾಗ್, ಹೀಗೆ ಅನೇಕ ಹಿರಿಯ ನಟರು ರಂಗಭೂಮಿ ನೆಲೆಯಿಂದ ಬಂದವರು, ಗುಬ್ಬಿ ವೀರಣ್ಣ ನಾಟಕ ಕಂಪನಿ, ಚಿಂದೋಡಿ ಲೀಲಾ ನಾಟಕ ಕಂಪನಿ, ಸಿಂಧನೂರಿನಲ್ಲಿ ಅಮರೇಶ್ಚರ ನಾಟಕ ಕಂಪನಿ ಇತ್ತು. ಈ ನಾಟಕ ಕಂಪನಿ ಮೃಢದೇವರ ನೇತೃತ್ವದಲ್ಲಿ ಶಿವಮೊಗ್ಗ, ಮೈಸೂರು, ಬೆಂಗಳೂರಿನಲ್ಲಿ ಪ್ರದರ್ಶನ ಮಾಡಿ ಸಹಬ್ಬಾಸ್ ಗಿರಿ ಪಡೆಯತಿತ್ತು.
ಮೃಢದೇವರು ಜನಿಸಿದ್ದು 1922, ಮೃತರಾಗಿದ್ದು 1967 ಅವರು ಪದ್ಮಭೂಷಣ ಡಾ.ರಾಜಕುಮಾರ ಅವರಿಂದ ಬೆನ್ನುತಟ್ಟಿಸಿಕೊಂಡ ಕಲಾವಿದರು, ಅನೇಕ ನಾಟಕದ ಕತೆ ಬರೆಯುವವರು ಅವರನ್ನ ಮನಸ್ಸಿನಲ್ಲಿಟ್ಟುಕೊಂಡು ನಾಟಕ ಬರೆಯುತ್ತಿದ್ದರೆಂದು ರಂಗಭೂಮಿ ಹಾಗೂ ವೃತ್ತಿ ರಂಗಭೂಮಿಗೆ ರಂಗನಟ ಮೃಡದೇವ ಗವಾಯಿಗಳವರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಕಸಾಪ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಾವಿದರಾದ ಹನುಮೇಶ ಬೇರ್ಗಿ, ಮ್ಯಾದಾರಹಾಳದ ಸಣ್ಣಹನುಮನಗೌಡ ದೇವರಮನಿ, ಮಲ್ಲಪ್ಪ ಪೂಜಾರಿ ಹಸ್ಮಕಲ್, ಭಕ್ಷಿ ಧರವೇಶ್ ರಂಗಗೀತೆಗಳನ್ನ ಹಾಗೂ ತತ್ವಪದದ ಹಾಡುಗಳನ್ನು ಹಾಡಿದರೆ, ರಂಗಭೂಮಿ ಹಿರಿಯ ಕಲಾವಿದರಾದ ಇಸ್ಮಾಯಿಲ್ ಸಾಬ್ ಈ ಇಳಿ ವಯಸ್ಸಿನಲ್ಲಿ ಶಕುನಿ ಪಾತ್ರದ ಡೈಲಾಗ್ ಗಳನ್ನು ಹೇಳಿ ವಿದ್ಯಾರ್ಥಿಗಳಿಗೆ ಹಾಗೂ ವೇದಿಕೆ ಮೇಲಿದ್ದ ಗಣ್ಯರಿಗೆ ಮನರಂಜಿಸಿದರು.
ಈ ವೇಳೆ ದಿ.ಚಂದ್ರಶೇಖರಪ್ಪಗೌಡ, ನೆಟೆಕಲ್ಲ ಗೊರೇಬಾಳ ದತ್ತಿ, ದಿ.ಚಂದ್ರಗೌಡ ಶರಣೇಗೌಡ ಗೊರೇಬಾಳ ದತ್ತಿ, ಲಿಂ.ಮರಿಸ್ವಾಮಿ ಕೆ.ಹೊಸಳ್ಳಿ ದತ್ತಿ, ಲಿಂ.ಬಸವರಾಜ ಬಿ.ದತ್ತಿ, ಮನ್ಮಥರೆಡ್ಡಿಗೌಡ ಪೊಲೀಸ್ ಪಾಟೀಲ್ ದತ್ತಿ, ಹೆಸರಿನಲ್ಲಿ ಗುರಪ್ಪ ಬಸಪ್ಪ ಹೇಮವಾಡಿಗಿ, ಎನ್.ಶಿವನಗೌಡ ಗೊರೇಬಾಳ, ಲಿಂ.ಬಸಮ್ಮ ಮರಿಸ್ವಾಮಿ, ಅಮರಯ್ಯಸ್ವಾಮಿ ಬಿ ಕೋಟೆ, ಸರ್ವತ್ತೋಮರೆಡ್ಡಿ ಪೊಲೀಸ್ ಪಾಟೀಲ್, ದತ್ತಿ ದಾನಿಗಳಾಗಿದ್ದಾರೆ.
ಈ ಸಂದರ್ಭದಲ್ಲಿ: ವಿಜಡಮ್ ಕಾಲೇಜಿನ ಆರ್.ಅನೀಲಕುಮಾರ್, ಶರೀಫ್ ಹಸ್ಮಕಲ್, ಚಿದಾನಂದಪ್ಪ ಗೊರೇಬಾಳ, ಉಮೇಶ ಅರಳಹಳ್ಳಿ, ಬಸವರಾಜ ಮೋತಿ, ಸೇರಿದಂತೆ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.