ಬಿಳಿ ವಸ್ತ್ರದ ಸಂತ

ಬಿಳಿ ವಸ್ತ್ರದ ಸಂತ

ಬಿಳಿ ವಸ್ತ್ರದ ಸಂತ
ಜೇಬು ಇಟ್ಟುಕೊಳ್ಳಲಿಲ್ಲ
ಮಠ ಕಟ್ಟಲಿಲ್ಲ
ಎಲ್ಲ ಮಠಾಧಿಶರಿಗೂ ಗುರುವಾದರು
ನಿಜ ಜಂಗಮವಾದರು

ಪವಾಡ ಮಾಡಲಿಲ್ಲ
ಮೌಡ್ಯ ಬೆಳಸಲಿಲ್ಲ
ಪಡೆದ ಜ್ಞಾನವ
ಪವಾಡವಾಗಿಸಿ ಹೃದಯ ವೈದ್ಯರಾದರು

ಮನಸನ್ನು ಬೆಸೆದರು
ಸವಿ ಮಾತುಗಳ ಮೂಲಕ
ವೇದ,ಉಪನಿಷತ್,ವಚನ,ಕೀರ್ತನೆಗಳಿಗೆಗಳಿಗೆ ನಿಜ ಸಾರ್ಥಕತೆ ನೀಡಿದರು
ಹೃದಯ ಬೆಸೆದು ವಿಶ್ವಮಾನವರಾದರು

ಮತಗಳೆಲ್ಲವೂ ಪಥಗಳನಾಗಿಸಿ
ಸರ್ವಗ್ರಂಥಗಳ ಅಧ್ಯಯನದ ಸಾರ ಉಣಿಸಿ ಪ್ರೀತಿ ಬೆಳೆಸಿದರು
ಸೌಹಾರ್ತೆಯ ಜ್ಯೋತಿ ಬೆಳಗಿಸಿ
ಪರಂಜ್ಯೋತಿಯಾದರು

ಸರಳ ಜೀವನ ಉಚ್ಛವಿಚಾರದಿ
ಎಲ್ಲರನ್ನೂ ಸೆಳೆದರು
ನುಡಿದಂತೆ ನಡೆದರು
ಬದುಕಿನ ರೀತಿ ನಿಜ ಧರ್ಮ ಎಂದು ತೋರಿದರು
ಹೊಸ ಕ್ರಮವ ಕಟ್ಟಿ ಗಾಂಧಿಯಾದರು

ಅಳಿದ ಮೇಲೂ
ದೇಹ ಸ್ಥಾವರವಾಗರಿಸಲು ಬಿಡದೆ
ಜಂಗಮವಾದರು
ಜ್ಞಾನ ಜ್ಯೋತಿಯಾದರು

ಗುಂಡುರಾವ್ ದೇಸಾಯಿ

Don`t copy text!