ತಾರಕ ಮತ್ತು ತಾಯಿ

ತಾರಕ ಮತ್ತು ತಾಯಿ

 

 

ಅಮ್ಮನಿ ದಿನವಿಡೀ ಮನೆ ಮತ್ತು ಸಾಮಾಜಿಕ ಜವಾಬ್ದಾರಿಗಳಲ್ಲಿ ಬ್ಯುಸಿಯಾಗಿರುತ್ತಿದ್ದಳು. ಮಗ ತಾರಕನನ್ನ ಓದಿಸಲು ಕೂತರೆ, ಅವನು ಅಲಕ್ಷ್ಯ ಮಾಡುತ್ತಿದ್ದ. ಯಾವತ್ತೂ ಒತ್ತಡದಲ್ಲಿರುದ್ದ ಅಮ್ಮನಿ ಕೋಪಗೊಂಡು, ಕೂಗಾಡಿ, ಹೇಗಾದರೂ ಮಗನನ್ನು ಓದಿಸಿಯೇ ಸಿದ್ಧ ಎಂದು ಪ್ರಯತ್ನಿಸುತ್ತಿದ್ದಳು.

ಇದರಿಂದ ತಾರಕ ಓದಲು, ಇನ್ನಷ್ಟು ತನ್ನ ಆಸಕ್ತಿ ಕಳೆದುಕೊಳ್ಳುತ್ತಿದ್ದ. ಒಂದು ದಿನ ತಾಳ್ಮೆ ಕಳೆದುಕೊಂಡ ಅಮ್ಮನಿ ‘ವಿದ್ಯಾರ್ಥಿ ಸಲಹೆಗಾರ್ತಿ’ ಸೌಮ್ಯಾರ ಬಳಿ ಹೋದಳು.

ಅಮ್ಮನಿ:ಮೇಡಮ್, ನನ್ನ ಮಗ ಓದನ್ನು ತುಂಬಾ ಅಲಕ್ಷ್ಯ ಮಾಡುತ್ತಾನೆ. ನಾನು ಎಷ್ಟು ಹೇಳಿದರೂ, ಕೂಗಿದರೂ, ಅವನು ಸರಿಯಾಗಿ ಬರೆಯೋದಿಲ್ಲ. ಹೋಮ್‌ವರ್ಕ್ ಮಾಡಲು ಕೂರ್ಸಿದ್ರೆ ಪೆನ್ಸಿಲ್ ಹಿಡ್ಕೊಂಡು ಯೋಚಿಸ್ತಿರ್ತಾನೆ. ಬೇರೆಬೇರೆ ತೊಂದರೆ ಕೊಡ್ತಿರ್ತಾನೆ.. ಏನು ಮಾಡೋಣ?

ಸೌಮ್ಯಾ: ಹೌದಾ, ಅಮ್ಮನಿಯವರೇ? ನೀವು ಯಾವತ್ತೂ ರೇಗಾಡಿದ್ರೆ ಅವ್ನಿಗೆ ಬೇಜಾರಾಗಲ್ವಾ?

ಅಮ್ಮನಿ:(ಸ್ವಲ್ಪ ಯೋಚಿಸಿ) ನಾನೇನು ಅವನನ್ನು ಬೇಜಾರಾಗಿಸೋಕೆ ಇಚ್ಛೆ ಪಟ್ಟಿಲ್ಲ. ಆದರೆ ಬೇರೆ ಯಾವುದೇ ಕೆಲ್ಸ ಮಾಡದೇ, ಟೀವಿ ನೋಡೋದು, ಆಟ ಆಡೋದು—ಅಂದ್ರೆ ಏನು ಮಾಡ್ಬೇಕು!? ನಾನು ಹೇಗೆ ತಾಳ್ಮೆ ಇಟ್ಕೊಳ್ಬೇಕು…?

ಸೌಮ್ಯಾ: ನೀವು ಯಾವತ್ತೂ ಏನಾದ್ರೂ ಕೆಲ್ಸ ಮಾಡ್ತಾ ಇರ್ತೀರಾ. ಕೆಲ್ಸದ ಒತ್ತಡದಲ್ಲಿ ಅವನ ಬಳಿ ಹೋಗಿ ಕೂಗೋದು ನಿಮ್ಮ ಹಳೇ ಹವ್ಯಾಸ ಆಗಿಬಿಟ್ಟಿದೆ. ನೀವು ಒಮ್ಮೆ ಬೇಜಾರಿಲ್ಲದೆ ಅವನ ಜೊತೆ ಎಷ್ಟು ಹೊತ್ತು ಕಳೆದಿದ್ದೀರಾ?

ಅಮ್ಮನಿ: (ಯೋಚಿಸುತ್ತಾ) ನಾನು ತಾರಕನ ಓದಿಗೆ ಹೊಣೆಯಾಗಿದ್ದೀನಿ. ಅದು ನನ್ನ ಕರ್ತವ್ಯ. ಆದ್ರೆ ಅವ್ನು ಓದುವುದನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ.

ಸೌಮ್ಯಾ: ತಾಯಿಯಾಗಿ ನಿಮ್ಮ ಕರ್ತವ್ಯ ಸುಳ್ಳು ಅಲ್ಲ. ಆದರೆ ನೀವು ಅವನ ಮೇಲೆ ಒತ್ತಡ ಹಾಕ್ತೀರಾ, ಅವನು ಓದುವ ಬದಲು ಇನ್ನಷ್ಟು ದೂರ ಹೋಗ್ತಾನೆ. ನೀವು ಅವನೊಂದಿಗೆ ಪ್ರೀತಿಯಿಂದ, ಆಟ ಆಡ್ತಾ ಓದಲು ಕಲಿಸಬಹುದು.

ಅಮ್ಮನಿ: ಹಾಗಾದರೆ ನಾನು ಏನು ಮಾಡಲಿ?

ಸೌಮ್ಯಾ: ನೀವು ಅವನ ಮನಸ್ಸನ್ನು ಒಮ್ಮೆ ಅರ್ಥಮಾಡಿಕೊಳ್ಳಿ. ಒಂದು ದಿನ ಕೂತು ಅವನೊಂದಿಗೆ ಮಾತಾಡಿ. ಅವನು ಓದಿನ್ ಬಗೆಗಿನ ಅವನ ದೃ ಷ್ಟಿ ಕೋನ ಏನಿದೆ ನೋಡಿ. ಏಕೆ ಅವನಿಗೆ ಓದುವುದು ಕಷ್ಟವಾಯಿತು? ಅವನೊಂದಿಗೆ ಸ್ನೇಹಿತೆಯಳಂತೆ ಮಾತನಾಡಿ.

ಅಮ್ಮನಿ: ನಾನು ಅವನಿಗೆ ಸ್ನೇಹಿತೆಯಳಂತೆ? ಅದು ಹೇಗೆ ಸಾಧ್ಯ?

ಸೌಮ್ಯಾ:ನೀವು ಪ್ರಯತ್ನ ಮಾಡಿ. ಉದಾಹರಣೆಗೆ, ನೇರವಾಗಿ ತಾರಕ, ನೀನು ಈ ಪಾಠ ಓದು”* ಎಂದು ಹೇಳುವ ಬದಲು, “ಬಾ, ನಾವು ಒಂದಷ್ಟು ಕಥೆಗಳು ಓದೋಣ” ಎಂದು ಹೇಳಿ. ನೀವು ಓದಿದರೆ, ಅವನು ಸಹ ಓದುತ್ತಾನೆ. ಕುಳಿತುಕೊಂಡು ಒಂದು ಪುಟ ನೀವು, ಒಂದು ಪುಟ ಅವನು ಓದಲಿ. ಅಲ್ಲಿ ಆಜ್ಞೆಯಿಲ್ಲ, ಒತ್ತಡವಿಲ್ಲ, ಬೇಸರವಿಲ್ಲ.

ಅಮ್ಮನಿ:(ಸ್ವಲ್ಪ ಯೋಚಿಸಿ) ಅಂದ್ರೆ, ನಾನು ಇದುವರೆಗೆ ಅವನಿಗೆ ಓದಲು ಪ್ರೇರೇಪಿಸದೇ, ಒತ್ತಡ ಹಾಕಿದ್ದೀನಿ…

ಸೌಮ್ಯಾ:ಹೌದು. ಮಕ್ಕಳು ಒತ್ತಡದಲ್ಲಿದ್ರೆ ಅವರ ಮನಸ್ಸು ಓದಿನ ಕಡೆ ತಿರುಗುವುದಿಲ್ಲ. ಬದಲಿಗೆ, ಪ್ರೀತಿಯಿಂದ, ಮೆಚ್ಚಿಸೋದು, ಪ್ರೋತ್ಸಾಹಿಸುವುದು—ಇದು ಅವರನ್ನು ಓದಿಗೆ ಹತ್ತಿರ ತರುತ್ತದೆ. ನೀವು ಇದನ್ನು ಪ್ರಯತ್ನಿಸಿ.

ಅಮ್ಮನಿಗೆ ನಿಜಕ್ಕೂ ಆ ಮಾತು ಅರ್ಥವಾಯಿತು. ಆ ದಿನದಿಂದ, ಅವಳು ಕೂಗುವ ಬದಲು ತಾರಕನ ಜೊತೆ ಸರಳವಾಗಿ ಮಾತಾಡಲು ಪ್ರಾರಂಭಿಸಿದಳು. ಹೀಗೆ ದಿನಗಳ ಕಳೆಯುತ್ತಿದ್ದಂತೆ, ತಾರಕನಲ್ಲಿ ಓದಲು ಆಸಕ್ತಿ ಹೆಚ್ಚಾಗತೊಡಗಿತು.

 

 

 

 

 

 

 

 

 

 

ವಾಣಿ ಭಟ್, ವಾಪಿ, ಗುಜರಾತ್

Don`t copy text!