ವೀರಶೈವರ ಗೊಡ್ಡು ಕಥೆ
15 ನೇ ಶತಮಾನದ ನಂತರ ಬಂದ ವೀರಶೈವ ದಕ್ಷಿಣದ ಆಂಧ್ರ ಪ್ರದೇಶದ ಕೊಲ್ಲಿಪಾಕಿಯಲ್ಲಿ ಸ್ಥಾವರ ಲಿಂಗಗಳಲ್ಲಿ ಹುಟ್ಟಿದವರು ಎಂದು ಹುಸಿ ದಾಖಲೆ ಇದೆ
ಶೈವಪಂಥದ ವೀರಶೈವ
ವೈದಿಕ ಸನಾತನ ಆಚರಣೆಯಲ್ಲಿ ತೊಡಗಿಸಿಕೊಂಡ ಶರಣ ಚಳುವಳಿಯನ್ನು ವಿರೂಪಗೊಳಿಸುವ ಯತ್ನಕ್ಕೆ ಕೈ ಹಾಕಿರುವರು. ಅಸಲಿಯಲ್ಲಿ ಇವರ ಇತಿಹಾಸ ಪುರಾಣ ಚರಿತ್ರೆ ಎಲ್ಲವೂ ಕೃತ್ರಿಮ ಮತ್ತು ಸುಳ್ಳಿನ ಸರಮಾಲೆ. ಇಲ್ಲಿ ನೋಡಿ ಅವರ ಖೋಟಾ ಚರಿತ್ರೆ.
1) ರೇಣುಕಾಚಾರ್ಯˌ ಪಂಚಾಚಾರ್ಯರ ಪಂಚಪೀಠಗಳ ಉಲ್ಲೇಖಗಳು ಅಪ್ಪಿತಪ್ಪಿಯೂ ಭಾರತದ ನಾಲ್ಕು ವೇದಗಳಾದ ೠಗ್ವೇದˌ ಯಜುರ್ವೇದ ˌ ಸಾಮವೇದ ಅಥರ್ವಣ ವೇದಗಳಲ್ಲಿ ಇಲ್ಲವೆ ಇಲ್ಲ.
2) ಭಾರತದಲ್ಲಿರುವ ವ್ಯಾಸನ ಪುರಾಣಗಳಾದ ಶಿವಪುರಾಣ ˌ ವಿಷ್ಣುಪುರಾಣˌ ಗರುಡಪುರಾಣ ˌ ಮತ್ತ್ಯಪುರಾಣ ಇತ್ಯಾದಿ ˌ ಭಾರತದ ಯಾವುದೆ ಭಾಷೆಯ ಪುರಾಣಗಳಲ್ಲೂ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಉಲ್ಲೇಖಗಳು ಅಪ್ಪಿತಪ್ಪಿಯೂ ಉಲ್ಲೇಖವಿಲ್ಲ
3) ಭಾರತದ ಯಾವುದೆ ಶಿವ ಆಗಮಗಳಲ್ಲೂ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಉಲ್ಲೇಖವಿಲ್ಲ.
4) ಭಾರತದ ಪ್ರಾಚೀನ ಗ್ರಂಥಗಳಾದ ಬ್ರಹ್ಮಸೂತ್ರ ˌ ಭಗವತ್ಗೀತೆ ˌ ಉಪನಿಷತ್ ಗಳಲ್ಲೂ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಉಲ್ಲೇಖವಿಲ್ಲ .
5) ಶಂಕರಾಚಾರ್ಯರ ˌ ಶೈವಪಂಡಿತ ವಿದ್ಯಾವಾಚಸ್ಪತಿಯ ˌ ಯಮುನಾಚಾರ್ಯ ˌ ರಾಮಾನುಜಾಚಾರ್ಯ ˌ ಮದ್ವಾಚಾರ್ಯರ ಜೀವನ ಚರಿತ್ರೆಗಳಲ್ಲಿ ಮತ್ತು ಅವರು ರಚಿಸಿರುವ ಯಾವ ಸಾಹಿತ್ಯಗಳಲ್ಲೂ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಸಹ ಇಲ್ಲ .
6) ಭಾರತದ ವಾಲ್ಮಿಕಿ ರಾಮಾಯಣ ˌ ವ್ಯಾಸನ ಮಹಾಭಾರತ ಹಾಗೂ ಭಾರತದ ವಿವಿಧ ಭಾಷೆಗಳಲ್ಲೂ ಬರೆಯಲ್ಪಟ್ಟ ರಾಮಾಯಣ ಮಹಾಭಾರತ ಗ್ರಂಥಗಳಲ್ಲೂ ಸಹ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಇಲ್ಲ .
7) 12ನೇಯ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಇರುವದಿಲ್ಲ .
8) 12ನೇಯ ಶತಮಾನದ ಶರಣರ ಕುರಿತ ಜೀವನ ಚರಿತ್ರೆಗಳಲ್ಲಿ ಹಾಗೂ ಶರಣರು ಕುರಿತು ಬರೆದ ಪುರಾಣಗಳಲ್ಲೂ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಸಹ ಇಲ್ಲ .
9) ಕುರುಬರ ಕುಲಗುರು ರೇವಣಸಿದ್ದರ ಜೀವನ ಚರಿತ್ರೆ ˌ ಪುರಾಣಗಳಲ್ಲೂ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಸಹ ಇಲ್ಲ .
10) ಭಾರತದ ಯಾವುದೆ ರಾಜ ಮಹಾರಾಜರ ಇತಿಹಾಸದಲ್ಲಿ ˌ ಅವರು ಬರೆಸಿರುವ ಶಾಸನಗಳಲ್ಲಿ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಅಪ್ಪಿತಪ್ಪಿಯೂ ಬರುವದಿಲ್ಲ.
11) ಕೇವಲ 14ನೇಯ ಶತಮಾನದಲ್ಲಿ ರಚಿಸಿರುವು ಶಿವಯೋಗಿ ಶಿವಾಚಾರ್ಯ ವಿರಚಿತ ಸಿದ್ದಾಂತ ಶಿಖಾಮಣಿಯಲ್ಲಿ ಎರಡು ಅಧ್ಯಾಯಗಳಲ್ಲಿ ಕಾಣಸಿಗುತ್ತದೆ ಎಂದು ವೀರಶೈವ ಖ್ಯಾತ ಸಂಶೋಧಕ ಡಾ ಚಿದಾನಂದಮೂರ್ತಿಯವರು ಸ್ಪಷ್ಟಪಡಿಸಿದ್ದಾರೆ .
12) ಅಗಸ್ತ್ಯ ಮುನಿ ಹಾಗೂ ಇತರ ಸಪ್ತಷಿಗಳ ಜೀವನ ಕುರಿತ ಪುರಾಣಗಳಲ್ಲೂ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಅಪ್ಪಿತಪ್ಪಿಯೂ ಬರುವದಿಲ್ಲ.
13) ರಾವಣನ ತಮ್ಮನಾದ ವಿಭಿಷಣನ ಕಥೆಗಳಲ್ಲೂ ಸಹ ರೇಣುಕಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಅಪ್ಪಿತಪ್ಪಿಯೂ ಬರುವದಿಲ್ಲ.
14) ಈಗಿರುವ ಕೊಲ್ಲಿಪಾಕದಲ್ಲಿರುವ ಸೋಮೆಶ್ವರ ದೇವಾಲಯವು ಜೈನರ ಮಂದಿರಾವಾಗಿತ್ತು ˌ ಈಗಲೂ ಜೈನದೇವಾಲಯದ ಗುರುತುಗಳು ಭಗ್ನಗೊಂಡ ಮೂರ್ತಿಗಳು ಅಲ್ಲಿ ಕಾಣಸಿಗುತ್ತವೆ . ಜೈನ ಬಸದಿ ನಾಶ ಹೊಂದಿ ಶಿವಮಂದಿರ ನಿರ್ಮಿಸಿರಬಹುದೆಂದು ಪುರಾತತ್ವ ಇಲಾಖೆ ಅಭಿಪ್ರಾಯ ಪಟ್ಟಿದೆ.
15) ನಿಜಗುಣ ಶಿವಯೋಗಿಗಳ ಹಾಗೂ ಮುಪ್ಪಿನ ಷಡಾಕ್ಷರಿಯವರ ಸಾಹಿತ್ಯದಲ್ಲೂ ಅಪ್ಪಿತಪ್ಪಿ ರೇಣುಕಾಚಾರ್ಯ ˌ ಪಂಚಪೀಠಗಳ ಉಲ್ಲೇಖಗಳು ಇಲ್ಲವೆ ಇಲ್ಲ.
16) ಸಿದ್ದಾರೂಢರು ಹಾಗೂ ಸಿದ್ದಾರೂಢ ಪರಪಂರೆಯಲ್ಲೂ ಅಪ್ಪಿತಪ್ಪಿಯೂ ರೇಣುಕಾಚಾರ್ಯನ ಹೆಸರು ಕಂಡುಬರುವದಿಲ್ಲ.
ಭಾರತದ ಪ್ರಜೆಗಳಿಗೆ ಇಂತಹ ಕಟ್ಟು ಕಥೆಯ ವ್ಯಕ್ತಿ 1400 ವರ್ಷ ಬದುಕಿದ್ದನೆಂದು ಸುಳ್ಳುಹೇಳಿ ˌ ನಂಬಿಸಿ ಜನರಿಗೆ ಮೋಸಮಾಡುತ್ತಿದ್ದಾರೆ.
ಬಸವಣ್ಣ ಮತ್ತು ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮ ಹಿಂದೂಯೆತರ ಅವೈದಿಕ ಧರ್ಮವಾಗಿದೆ
–ಡಾ ಶಶಿಕಾಂತ ರುದ್ರಪ್ಪ ಪಟ್ಟಣ ರಾಮದುರ್ಗ