ಇರುತ್ತಿದ್ದೆವು ನಾವು ಹೀಂಗ…..

 

 

 

 

 

 

 

 

 

ಇರುತ್ತಿದ್ದೆವು ನಾವು ಹೀಂಗ……
ಇರುತ್ತಿದ್ದೆವು ನಾವು ಹಿಂಗ
ಕೆರೆಬಾವಿಯಲಿ ಈಜಾಡಿ
ಅರೆ ಬಟ್ಟೆಯಲಿ ಓಡಾಡಿ
ಊರ ಗೆಳೆಯರಲಿ ಗುದ್ದಾಡಿ
ಇರುತ್ತಿದ್ದೆವುನಾವು ಹಿಃಗ….

ಬೆಟ್ಟ ಗುಡ್ಡ ಹತ್ತಿ ಹೋಗಿ
ಉಟ್ಟ ಅಂಗಿ ಹರಿದು ಹೋಗಿ
ಕಟ್ಟಕಡೆಗೆ ಕಾಲುಜಾರಿ ಎಗರಿ
ಆದರೂ ಇರತ್ತಿದ್ದೆವು ಜೋರಾಗಿ….

ಮರಕೋತಿ ಆಟಕೆ ಗಿಡವೇರಿ
ವೀರಾವೇಶದಿ ಗೆಲುವಿನ ಸುದ್ದಿ ಸಾರಿ
ಉರಿ ಬಿಸಿಲಲಿ ಜೇನನು ಹೀರಿ
ಇರುತ್ತಿದ್ದೆವು ಮಾಡುತ ಕಾರಬಾರಿ

ಬಯಲಾಟದ ದಿನ ಬೆತ್ತವ ಹಿಡಿದು
ಜನ ನುಗ್ಗಾಟವ ನುಗ್ಗಿ ತಡೆದು
ಮನ ಬಂದಂತೆ ಕುಣಿದು ದಣಿದು
ಇರುತ್ತಿದ್ದೆವು ನಾವು ಹಿಗ್ಗುತ ನಡೆದು

 

 

 

 

 

 

 

 

 

 

.ಪಿ. ವೆಂಕಟೇಶ್ ಬಾಗಲವಾಡ

Don`t copy text!