ಹಣಕಾಸಿನ ಪಾಠ
ಹಣಕಾಸಿನ ಜ್ಞಾನ—ಕುಟುಂಬದ ಸಂಭ್ರಮ
ಭಾಗ 1: ಹಣಕಾಸಿನ ಜ್ಞಾನ—ಕುಟುಂಬದ ಸಂಭ್ರಮ
ಸುರೇಶ್ ಮತ್ತು ಗೀತಾ ಅವರಿಬ್ಬರೂ ಮಕ್ಕಳಿಗೆ ಹಣಕಾಸಿನ ಶಿಸ್ತನ್ನು ಚಿಕ್ಕಂದಿನಿಂದಲೇ ಕಲಿಸಿದರು. ಅವರ ಮಗ ಆದಿತ್ಯ ಒಂಬತ್ತು ವರ್ಷವಾಗಿದ್ದಾಗಲೇ ಪಾಕ್‌ಟ್ ಮನಿ ಹೇಗೆ ಉಳಿತಾಯ ಮಾಡಬೇಕು ಎಂಬ ಪಾಠ ನೀಡಿದರು. ಪ್ರತಿ ತಿಂಗಳು “ಇದರಲ್ಲಿ ಒಂದು ಭಾಗ ಉಳಿತಾಯ, ಒಂದು ಭಾಗ ಹೂಡಿಕೆ, ಒಂದು ಭಾಗ ಖರ್ಚು” ಎಂಬ ನಿಯಮವನ್ನು ಅನುಸರಿಸಲು ಹೇಳಿದರು.
ಕಾಲಕ್ರಮೇಣ, ಆದಿತ್ಯ ಹತ್ತನೇ ತರಗತಿಗೆ ಬಂದಾಗ ಹೂಡಿಕೆ ಎಂಬುದು ಏನು?, ಕಂಪೌಂಡ್ಡ್ ಇಂಟರೆಸ್ಟ್ ಹೇಗೆ ಕೆಲಸ ಮಾಡುತ್ತದೆ?, ಭವಿಷ್ಯಕ್ಕಾಗಿ ಹಣ ಸಂಗ್ರಹದ ಮಹತ್ವ ಮುಂತಾದವು ತಿಳಿಯುವಷ್ಟು ಚಿಂತನೆ ಮಾಡಲು ಹಚ್ಚಿದರು.
ಹಾಗೆಯೇ, ಅವನು ಕಾಲೇಜ್ ಮುಗಿಸಿ ಉದ್ಯೋಗಕ್ಕೆ ಸೇರಿದರೂ ಹಣದ ಬಗ್ಗೆ ಜವಾಬ್ದಾರಿಯುತ ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ. ದುಡ್ಡು ಗಳಿಸಿದ ತಕ್ಷಣ ಖರ್ಚು ಮಾಡುವ ಬದಲು, ಮೊದಲಿಗೆ ಅಗತ್ಯತೆ, ಉಳಿತಾಯ, ಹೂಡಿಕೆಗಳ ಮೇಲೆ ಗಮನಹರಿಸಿದ. ಭೂಮಿಗೆ ಹೂಡಿಕೆ, ಮೀಸಲಿಟ್ಟ ಹಣದ ಪ್ರಾಮುಖ್ಯತೆ, ಬಡ್ಡಿಯ ಲಾಭ ಇವುಗಳ ಬಗ್ಗೆ ತಿಳಿದಿದ್ದ ಕಾರಣ, ಅವನಿಗೆ ಯಾವುದೇ ಸಾಲದ ಹೊರೆ ಬರಲಿಲ್ಲ.
ಈಗ, ಸುರೇಶ್ ಮತ್ತು ಗೀತಾ ಸುಖಿ ಜೀವನ ನಡೆಸುತ್ತಿದ್ದಾರೆ. ಅವರ ಮಗ ಹಣಕಾಸಿನ ಒತ್ತಡವಿಲ್ಲದೆ ಪ್ರಪಂಚ ಸುತ್ತಾಡುತ್ತಿರುವನು. ತಿಂಗಳ ಕೊನೆಯಲ್ಲಿ ಸಾಲ ತೀರಿಸಲು ಪರದಾಡುವುದಿಲ್ಲ. ಮಾತನಾಡಲು ಸಮಯವಿದೆ, ಒತ್ತಡವಿಲ್ಲ, ನೆಮ್ಮದಿಯ ಜೀವನ. ಸಂಸಾರದಲ್ಲಿ ಹರ್ಷ, ಉತ್ಸವ.
ಭಾಗ 2: ಹಣಕಾಸಿನ ಅಜ್ಞಾನ—ಕುಟುಂಬದ ದುರಂತ
ಶರಣಪ್ಪ ಮತ್ತು ಲಕ್ಷ್ಮಿ ತಮ್ಮ ಮಕ್ಕಳಿಗೆ ಹಣಕಾಸಿನ ಪಾಠ ಕಲಿಸಲಿಲ್ಲ. “ಮಕ್ಕಳಿಗೆ ಹಣಕಾಸಿನ ಬಗ್ಗೆ ತಲೆ ಕೆಡಿಸಬೇಕಾಗಿಲ್ಲ, ದೊಡ್ಡವರಾಗಿದಾಗ ಕಲಿಯುತ್ತಾರೆ” ಎಂದುಕೊಂಡರು. ಅವರ ಮಗ ವಿನಯ ಶಾಲೆಯಲ್ಲಿ ಗಣಿತದಲ್ಲಿ ಚಾಣಾಕ್ಷ ಆದರೆ ಹಣಕಾಸಿನ ಜ್ಞಾನವಿಲ್ಲ. ತಕ್ಷಣ ಖರ್ಚು ಮಾಡುವುದು, ಉಳಿತಾಯ ಮಾಡದಿರುವುದು ಅವನ ರೂಢಿಯಾಗಿ ಬಿಡಿತು.
ಕಾಲೇಜಿಗೆ ಹೋದಾಗ ಕ್ರೆಡಿಟ್ ಕಾರ್ಡ್ ಪಡೆದ ಮತ್ತು ಅಜಾಗರೂಕವಾಗಿ ಬಳಸಿದ. ಲೋನ್ ತೆಗೆದುಕೊಂಡು ಖರ್ಚುಮಾಡುತ್ತಿದ್ದ. “ನಾನು ಸಂಬಳ ಪಡೆಯುತ್ತಿದ್ದೇನೆ, ಸಾಲ ತೀರಿಸಬಹುದು” ಎಂದುಕೊಂಡ. ಆದರೆ ಬಡ್ಡಿ ಹೆಚ್ಚಾಗಿ, ಸಾಲದ ಹೊರೆ ತಲೆಮೇಲೆ ಬಿತ್ತು.
ನಂತರ, ಈ ಸಮಸ್ಯೆ ಪೋಷಕರ ಮೇಲೂ ಬಿದ್ದಿತು. “ನೀವು ಹಣಕಾಸಿನ ಬಗ್ಗೆ ಕಲಿಸಬೇಕಿತ್ತು” ಎಂದು ವಾದಿಸುತ್ತಾ, ತಾಯಿ-ತಂದೆಯರ ಬಳಿ ಸಾಲ ಕೇಳಲು ಬಂದ. ಅವರು ಸಹಾಯ ಮಾಡಲು ಆಗದೆ, ಮನೆಯಲ್ಲಿ ಜಗಳ ಆರಂಭವಾಯಿತು.
“ನಾವು ಜೀವನಪೂರ್ತಿ ದುಡಿದು ಮಕ್ಕಳಿಗೆ ಸುಖವಿಲ್ಲದೆ ಬಿಟ್ಟಿದ್ದೇವೆ” ಎಂದು ಶರಣಪ್ಪ ಚಿಂತಿಸುತ್ತಿದ್ದ. ಮಗನ ಮತ್ತು ಅವರ ನಡುವೆ ಅವಮಾನ, ಜಗಳ, ಭಿನ್ನಾಭಿಪ್ರಾಯ ಹೆಚ್ಚಾಗುತ್ತಿತ್ತು. ವೃದ್ಧಾಪ್ಯದಲ್ಲಿ ನೆಮ್ಮದಿ ಬಯಸಿದ ಪೋಷಕರಿಗೆ, ಪ್ರತಿದಿನದ ಹಣಕಾಸಿನ ಹೊರೆ ಮತ್ತು ಕುಟುಂಬ ಕಲಹ ಮಾತ್ರ ಲಭಿಸಿತು.
ಪಾಠ: ಮಕ್ಕಳಿಗೆ ಹಣಕಾಸಿನ ಶಿಕ್ಷಣವಿಲ್ಲದಿದ್ದರೆ, ಹಾಳಾಗುವುದು ಕುಟುಂಬ ಮಾತ್ರವಲ್ಲ, ಸಂತಾನವೂ!
ಒಂದು ಕುಟುಂಬ ಹಣಕಾಸಿನ ಜಾಣ್ಮೆಯಿಂದ ಸುಖ-ಶಾಂತಿಯ ಜೀವನ ನಡೆಸುತ್ತಿದೆ. ಮತ್ತೊಂದು, ಹಣಕಾಸಿನ ಅರಿವಿಲ್ಲದ ಕಾರಣ ಕಲಹ, ಸಾಲ, ಸಂಕಟಗಳಲ್ಲಿ ಮುಳುಗುತ್ತಿದೆ.
–ವಾಣಿ ಭಟ್ ವಾತಾಪಿ ಗುಜರಾತ್