ಮಹಿಳೆ ಸಾಧನೆ ಮಾಡಬಲ್ಲಳು
ಪ್ರತಿಯೊಬ್ಬ ಮಹಿಳೆಯಲ್ಲೂ ಪ್ರತಿಭೆ ಇರುತ್ತದೆ ಆ ಪ್ರತಿಭೆಗೆ ಅವಕಾಶ ಸಿಕ್ಕಾಗ ಅವಳು ಸಾಧನೆಯ ಉತ್ತುಂಗಕ್ಕೆ ಏರುತ್ತಾಳೆ. 15 – 20 ವರ್ಷಗಳಿಂದ ನಡೆದುಕೊಂಡ ಬಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕ ಘಟಕ ಅಥಣಿ ಇದರ ಕಾರ್ಯಗಳು ಶ್ಲಾಘನೀಯ ಎಂದು ಶ್ರೀಮತಿ ಜಯಶ್ರೀ ಮಹಾಜನ್ ಮಾತನಾಡಿದರು. ಅವರು ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಮಹಿಳಾ ಘಟಕ ಅಥಣಿ ಸಂಘಟನೆಯವರು ಏರ್ಪಡಿಸಿದ ಸಾಧಕೀಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾದದ್ದು, ದೇಶ ಸಂರಕ್ಷಣೆ, ಸಂಘಟನೆ ಇಂಥ ಎಲ್ಲಾ ಕ್ಷೇತ್ರಗಳಲ್ಲಿ ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ ಮಹಿಳೆಯರ ಸಾಧನೆಗೆ ಪುರುಷರ ಬೆಂಬಲ ಇದ್ದರೆ ಅವರು ಎಲ್ಲವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಘಟಕದಿಂದ ಸನ್ಮಾನ ಸ್ವೀಕರಿಸಿದ ಹಿರಿಯ ಸಾಹಿತಿ ಅಪ್ಪಾಸಾಹೇಬ್ ಅಲಿಬಾದಿಯವರು ಹೇಳಿದರು. ಇದೆ ಸಂದರ್ಭದಲ್ಲಿ ಅವರಿಗೆ ವಚನಾನುರಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕೀಯರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವೈದ್ಯಕೀಯ, ಶಿಕ್ಷಣ, ಸಂಘಟನೆ, ಕನ್ನಡಪರ ಹೋರಾಟಗಾರ್ತಿ, ಸಾಮಾಜಿಕ ಸೇವೆ, ಅಂಗನವಾಡಿ ಕಾರ್ಯಕರ್ತೆ, ಸಂಗೀತಗಾರರು, ಶೈಕ್ಷಣಿಕ ಸೇವೆ, ಉದ್ಯಮ ಕ್ಷೇತ್ರ ಹೀಗೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈಲಜಾ ನೇಮಗೌಡ ವಹಿಸಿಕೊಂಡಿದ್ದರು.ಗೀತಾ ಸ್ವಾಗತಿಸಿದರು, ಭಾಗ್ಯಶ್ರೀ ಪರಿಚಯಿಸಿದರು, ಡಾ.ಪ್ರಿಯಂವದಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐರಾವತಿ ನಿರೂಪಿಸಿದರು, ಪ್ರಭಾ ಭೋರಗಾಂವಕರ ವಂದಿಸಿದರು. ಪುರಸಭಾ ಅಧ್ಯಕ್ಷರಾದ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಂಚಿ,ಸದಸ್ಯೆ ಮೃಣಾಲಿನಿ ದೇಶಪಾಂಡೆ, ಯಶೋಧಾ ಕುಲಗುಡೆ, ನೀಲಾಂಬಿಕಾ ನೇಮಗೌಡ ವಿಶೇಷ ಉಪಸ್ಥಿತಿ ಸ್ಥಾನ ವಹಿಸಿಕೊಂಡಿದ್ದರು. ಶಶಿಕಲಾ,ಸರೋಜಾ,ಮಂಜುಳಾ ಪ್ರಾರ್ಥನೆ ಹೇಳಿದರು. ಶ್ರೀಮರುಳ ಶಂಕರ ಸಂಗೀತ ಬಳಗದವರು ಹಾಗೂ ಅಗ್ರಾಣಿತೀರದ ಗಾನ ಕೋಗಿಲೆ ಅಶ್ವಿನಿಯವರಿಂದ ಗಾಯನ ನಡೆಯಿತು.ಘಟಕದ ಸರ್ವ ಸದಸ್ಯರು ಉಪಸ್ಥಿತರಿದ್ದರು.