ಓದಿಗಿಂತ ದೊಡ್ಡ ಮನರಂಜನೆ ಬುದ್ಧಿರಂಜನೆ ಯಾವುದಿದೆ?!

ಓದಿಗಿಂತ ದೊಡ್ಡ ಮನರಂಜನೆ ಬುದ್ಧಿರಂಜನೆ ಯಾವುದಿದೆ?!

 

 

 

 

 

 

 

 

 

 

ನಮ್ಮ ಶಾಲೆಯ ರಂಗಮಂಟಪವೀಗ ಮುಕ್ತ ಓದಿನ ತಾಣ.

ನಮ್ಮೂರಿಗೆ ಹೋಗಿದ್ದೆ. ಊರಿಗೆ ಹೋದಾಗಲೆಲ್ಲ ಗದಗನ ರಾಮಕೃಷ್ಣ ಆಶ್ರಮಕ್ಕೆ ತಪ್ಪದೇ ಭೇಟಿಕೊಡುತ್ತೇನೆ. ಈ ಬಾರಿಯೂ ಹೋಗಿದ್ದೆ. ಆ ಸುಂದರ ಶಾಂತ ಪರಿಸರದಲ್ಲಿ ಧ್ಯಾನಮಂದಿರವಿದೆ. ಆ ಆವರಣದಲ್ಲಿ ಹಲವಾರು ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಬೇಕೆಂಬ ಕನಸಿರುವವರು ಶ್ರದ್ಧೆಯಿಂದ ಪ್ರೀತಿಯಿಂದ ನೂರಾರು ಜನ ಓದುತ್ತಲೇ ಇರುತ್ತಾರೆ.

ನಾನು ಪ್ರತಿಸಲ ಹೋದಾಗಲೂ ಹೊಸದೊಂದು ತಿಳುವಳಿಕೆ ಪಡೆಯುತ್ತಿರುತ್ತೇನೆ.

ಈ ಸಾರಿ ಹೋದಾಗ ಮಕ್ಕಳ ಮನೋಬಲವನ್ನು ಹೆಚ್ಚಿಸುವ ವ್ಯಕ್ತಿತ್ವಕ್ಕೆ ಪ್ರೇರಣೆ ನೀಡುವ ಅನೇಕ ಪುಸ್ತಕ ಗಳನ್ನು ನೋಡಿದೆ. ನಮ್ಮ ಶಾಲೆಯ ಅಂತಃಶಕ್ತಿಯೇ ಆಗಿರುವ ಹಿರಿಯರೊಬ್ಬರಿಗೆ ಕಾಲ್ ಮಾಡಿ ಪುಸ್ತಕ ಬೇಕಿದೆ ಸರ್ ಎಂದೆ. ತಕ್ಷಣ ಅವರು ಖಂಡಿತವಾಗಿ ತೆಗೆದುಕೊಳ್ಳಿ ಎಂದು ಹೇಳಿದರು. ಸುಮಾರು ಐದು ಸಾವಿರ ರೂಪಾಯಿಯನ್ನೂ ಹಾಕಿದರು.

ಅಲ್ಲಿನ ಎಲ್ಲ ಪುಸ್ತಕ ಗಳನ್ನೂ ತಡಕಾಡಿ ನೋಡಿ ಮಕ್ಕಳಿಗೆ ಶಕ್ತಿ ತುಂಬಬಲ್ಲಂತಹ ಅನೇಕ ಪುಸ್ತಕ ತೆಗೆದುಕೊಂಡೆ.

 

 

 

 

 

 

 

 

 

ನಿಮಗೆ ಗೊತ್ತಿರಲಿ ನಾನು ಚಿಕ್ಕಂದಿನಲ್ಲಿ ಕೀಳರಿಮೆಯಿಂದ ಬಳಲುತ್ತಿದ್ದಾಗ ನನ್ನೊಳಗೆ ಆತ್ಮಬಲವನ್ನೂ ಅಂತಃಶಕ್ತಿಯನ್ನೂ ಶ್ರದ್ಧೆಯನ್ನೂ ಹಠವನ್ನೂ ಓದಲೇಬೇಕೆಂಬ ಛಲವನ್ನೂ ಹುಟ್ಟಿಸಿದ್ದು “ವಿದ್ಯಾರ್ಥಿಗಳೇ ಯಶಸ್ಸು ಕನಸಲ್ಲ” ಎಂಬ ಪುಟ್ಟ ಪುಸ್ತಕ.

ಆ ಪುಸ್ತಕದ ಬಗ್ಗೆಯೇ ದೀರ್ಘ ವಾದ ಬರಹವೊಂದನ್ನು ಬರೆಯುವೆ.

ಅಂತೂ ಎಲ್ಲ ಪುಸ್ತಕ ಹೊತ್ತುತಂದು ನಮ್ಮ ಶಾಲಾ ಮಕ್ಕಳ ಮುಂದೆ ಸುರಿವಿದೆ.

ಹೊಸ ಪುಸ್ತಕ ಗಳ ಪ್ರದರ್ಶನ ಮತ್ತು ಕಿರುಪರಿಚಯವನ್ನ ನಮ್ಮ ಅತಿಥಿಶಿಕ್ಷಕರು ನಡೆಸಿಕೊಟ್ಟರು. ನಮ್ಮ ಶಾಲೆಯ ಎಲ್ಲ ಮಕ್ಕಳೂ ಕುತೂಹಲದಿಂದ ಪುಸ್ತಕ ನೋಡಿ “ಅಲ್ಲಿನ ಎಲ್ಲ ಪುಸ್ತಕ ಗಳನ್ನ ಓದಿ ಮುಗಿಸುವುದಾಗಿ ಉತ್ಸಾಹದಿಂದ ಹಳಿದರು”!

ಈಗ ನಮ್ಮ ರಂಗಮಂಟಪ. ಹೌದು ನಮ್ಮ ರಂಗಮಂಟಪ ಸಿದ್ಧವಾಗಿ ಕಾರ್ಯಕ್ರಮ ಗಳೂ ನಡೆದವು. ಈಗ ಈ ನಮ್ಮ ಬಯಲು ರಂಗಮಂಟಪದ ಅಂಗಳದಲ್ಲಿ ಎಲ್ಲ ಮಕ್ಕಳಿಗೆ ನಮ್ಮ ಗ್ರಂಥಾಲಯದ ಎಲ್ಲ ಪುಸ್ತಕ ಮುಕ್ತವಾಗಿ ಲಭ್ಯ ಇವೆ. ತಮಗೆ ಬೇಕಾದಾಗ ಬೇಕಾದ ಪುಸ್ತಕ ಓದಬಹುದು.

ತಮ್ಮಲ್ಲೊಂದು ವಿನಂತಿ

ನಮ್ಮ ಶಾಲೆಯಲ್ಲಿ ಓದಿದ ಈಗ ಒಂಭತ್ತನೇ ತರಗತಿ ಮುಗಿಸಿರುವ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಸ್ವಂತ ಓದಿಗೆ ಅನುಕೂಲವಾಗಲು 25 Set ಎಸ್ ಎಸ್ ಎಲ್ ಸಿ ಗೈಡ್ ಗಳು ಬೇಕಿವೆ( ಎಲ್ಲ ವಿಷಯಗಳು). ತಮ್ಮಲ್ಲಿ ಯಾರಾದರೂ ಒಂದೊಂದು ಸೆಟ್ ಆದರೂ ಕೊಂಡು ನಮ್ಮ ವಿಳಾಸಕ್ಕೆ ಕಳುಹಿಸಿದರೆ ಆ ಮಕ್ಕಳಿಗೆ ತಲುಪಿಸುವೆವು.

ನಮ್ಮ ವಿಳಾಸ

ವೀರಣ್ಣ ಮಡಿವಾಳರ
ಪ್ರಧಾನ ಗುರುಗಳು
ಕಮ್ಮಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ
ನಿಡಗುಂದಿ- ೫೯೧೩೧೭
ತಾ: ರಾಯಬಾಗ ಜಿ: ಬೆಳಗಾವಿ
ಮೊ: ೯೯೭೨೧೨೦೫೭೦

Don`t copy text!