ಡಾ ಪಂಡಿತ ಪುಟ್ಟರಾಜರು ಸಂಗೀತ ಸಾಹಿತ್ಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಅನರ್ಘ್ಯ ರತ್ನ
e- ಸುದ್ದಿ ಬೆಳಗಾವಿ
ಡಾ ಪಂಡಿತ ಪುಟ್ಟರಾಜರು ಸಂಗೀತ ಸಾಹಿತ್ಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಅನರ್ಘ್ಯ ರತ್ನ ಎಂದು ಡಾ.ಗುರದೇವಿ ಹುಲೆಪ್ಫನವರ ಮಠ ಮಾತನಾಡಿದರು.
ಡಾ.ಪುಟ್ಟರಾಜ ಸೇವಾ ಸಮಿತಿ (ಗದಗ)
ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಗುರುಸೇವಾ ದೀಕ್ಷಾ ಸಮಾರಂಭದ ಅಧ್ಯಕ್ಷತೆ ವಹಿಸಿ ಡಾ.ಗುರದೇವಿ ಹುಲೆಪ್ಫನವರ ಮಠ ಮಾತನಾಡಿದರು.
ಸಂಘಟನೆಯ ಸಂಸ್ಥಾಪಕರಾದ
ವೇ.ಚೆನ್ನವೀರ ಸ್ವಾಮಿ ಹೀರೆಮಠ ಕಾರ್ಯಕ್ರಮ ಉದ್ಘಾಟಿಸಿ ಡಾ. ಪಂಡಿತ ಪುಟ್ಟರಾಜರ ಸೇವಾ ಭಾಗ್ಯ ಸಕಲರಿಗೂ ಲಭಿಸಲಿ ಆ ನಿಟ್ಟಿನಲ್ಲಿ ಬೆಳಗಾವಿ ಘಟಕ ಕ್ರಿಯಾಶೀಲರಾಗಲಿ ಎಂದು ಸದಾಶಯದ ನುಡಿಗಳನ್ನಾಗಳನ್ನಾಡಿದರು.
ಅತಿಥಿಪರ ಮಾತುಗಳನ್ನಾಡಿದ ಡಾ.ಸುಮಾ ಹಡಪದ ಪುಟ್ಟರಾಜ ಗುರುಗಳ ಸಂಗೀತ ಸಾಧನೆಯ ಪ್ರಭಾವದಿಂದಲೆ ತಾವು ಈ ಸೇವೆಯಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದರು.
ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮುಳಗುಂದ ಸಂಘಟನೆಯ ಬೆಳವಣಿಗೆಗೆ ತಾವು ತನು ಮನ ಧನದಿಂದ ಶ್ರಮಿಸುವುದಾಗಿ ಹೇಳಿದರು.
ಕಾರ್ಯಕ್ರದ ಕುರಿತು ಸಂಘಟನೆ ಉಪಾಧ್ಯಕ್ಷರಾದ ಡಾ.ಹೇಮಾವತಿ ಸುನೋಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಆಶಾ ಎಸ್ ಯಮಕನಮರಡಿ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು. ಕೋಶಾಧ್ಯಕ್ಷ ರಾದ ಭಾರತೀಯ ಗಾಯನ ಸಮಾಜದ ಮುಖ್ಯಸ್ಥರಾದ ಡಾ.ರೋಹಿಣಿ ಗಂಗಾಧರಯ್ಯ ತಮ್ಮ ಸಂಗೀತ ಶಾಲೆಯ ಶಿಷ್ಯ ವೃಂದ ದವರಿಂದ ಪ್ರಾರ್ಥನೆ ಸಲ್ಲಿಸಿದರು.ಸಹಕಾರ್ಯದರ್ಶಿ ಜ್ಯೋತಿ ಮಾಳಿ ನಿರೂಪಣೆ ಮಾಡಿದರು.ಅನಿತಾ ಮಾಲಗತ್ತಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು ಸಂಗೀತಾಸಕ್ತರು ಗುರು ಭಕ್ತರು ಉಪಸ್ಥಿತರಿದ್ದರು.