ಬಸವಣ್ಣನವರ ಬಗ್ಗೆ ಮಾತನಾಡುವ ಅಧಿಕಾರ ಇವರಗಿಲ್ಲ 

ಬಸವಣ್ಣನವರ ಬಗ್ಗೆ ಮಾತನಾಡುವ ಅಧಿಕಾರ ಇವರಗಿಲ್ಲ 


ಬಸವಣ್ಣನವರು ಜಗವು ಕಂಡ ಸರ್ವ ಶ್ರೇಷ್ಠ  ಕ್ರಾಂತಿಕಾರಿ , ಬಸವಣ್ಣನವರ ಕ್ರಾಂತಿಯನ್ನು ವಿಫಲಗೊಳಿಸಲು ಯತ್ನಿಸಿದ ಜಾತಿ ಕರ್ಮಠರು ಮನುವಾದಿಗಳು ವಚನ ಕ್ರಾಂತಿಗೆ ಶರಣ ಸಾಹಿತ್ಯಕ್ಕೆ ಕಿಚ್ಚು ಹಚ್ಚಿದರು.

ಅಂದಿನಿಂದ ಇಂದಿನ ವರೆಗೂ ಬೇರೆ ಬೇರೆ ವರ್ಗದವರು ಬಸವಣ್ಣನವರನ್ನು ತಮ್ಮ ಆಸ್ತಿಯನ್ನಾಗಿ ಬಳಸಿಕೊಂಡು ಮಠ ಮನೆ ಆಸ್ತಿ ಕಾಲೇಜು ವ್ಯವಹಾರ ಮಾಡಿಕೊಂಡು ಬಸವ ಉದ್ಯಮ ಮಾಡಿಕೊಂಡಿದ್ದಾರೆ.

ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸುವ ವೀರಶೈವರು ಬಸವಣ್ಣನವರನ್ನು ಅವರ ಭಾವ ಚಿತ್ರವನ್ನು ಬಳಸುವ ಯಾವುದೇ ನೈತಿಕ ಹಕ್ಕನ್ನು ವೀರಶೈವರು ಹೊಂದಿಲ್ಲ .

ಇನ್ನುವಿರಕ್ತ ಪರಂಪರೆಯೆಂದು ಹೇಳಿಕೊಂಡು ಪಂಚ ಪೀಠದವರೊಂದಿಗೆ ಗುರುತಿಸಿಕೊಂಡು ಲಿಂಗಾಯತ ಚಳುವಳಿಯನ್ನು ವಿಫಲಗೊಳಿಸಲು ಯತ್ನಿಸುತ್ತಿರುವ
ಅಂತರಂಗ ವಿರೋಧಿಗಳಿಗೆ ಬಸವ ತತ್ವ ಮತ್ತು ಬಸವಣ್ಣನವರನ್ನು ಅವರ ಭಾವ ಚಿತ್ರವನ್ನು ಬಳಸುವ ಯಾವುದೇ ನೈತಿಕ ಹಕ್ಕಿಲ್ಲ.
ಇನ್ನು ಕೆಲವು ಮಠಗಳು ಪೀಠಗಳು ಬಸವ ಪರಂಪರೆಯೆಂದು ಹೇಳಿಕೊಂಡು ಅವುಗಳ ಆಶಯಕ್ಕೆ ವಿರುದ್ಧವಾಗಿ ಮಾತನಾಡುವ ರೀತಿಗೆ ಅಳವಡಿಸಿಕೊಂಡಿದ್ದಾರೆ.
ಇತ್ತೀಚಿಗೆ ಕೊಲ್ಲಾಪುರ ಕನ್ನೇರಿ ಮಠದ ಶ್ರೀಗಳು ಅಪ್ಪಟ ಬಸವ ಪರಂಪರೆಯ 16 ನೇ ಶತಮಾನದ ಕಾಡಸಿದ್ದೇಶ್ವರ ವಚನಕಾರಪರಂಪರೆಯ ಮಠವಾಗಿದೆ. ಈಗ ಸಂಪೂರ್ಣ ವೈದಿಕ ಪರಂಪರೆಗೆ ಅಂಟಿಕೊಂಡು ಇವರು ಲಿಂಗಾಯತ ಚಳುವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು ಇತ್ತೀಚಿಗೆ ವಿಜಯಪುರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅತ್ಯಂತ ಸೋಜಿಗದ ವಿಷಯ

ಇಂತವರು ತಮ್ಮ ಧರ್ಮದ ಅರಿವಿದ್ದರೆ ಇಂತಹ ವ್ಯತಿರಿಕ್ತ ಹೇಳಿಕೆಗಳು ನೀಡುತ್ತಿರಲಿಲ್ಲ. ಇವರಿಗೆ ಬಸವಣ್ಣ ಹಾಗು ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಯಾವುದೇ ಅಧಿಕಾರವಿಲ್ಲ.
ಎಲ್ಲದ್ದಕ್ಕೂ ಮೌನವಾಗಿರುವ ಲಿಂಗಾಯತರು ಇನ್ನು ಮುಂದೆ ಬಸವಣ್ಣ ಮತ್ತು ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿ ಹೇಳಿಕೆ ನೀಡುವವರನ್ನು ಉಗ್ರವಾಗಿ ಖಂಡಿಸಿರಿ ಬಸವ ಭಕ್ತರ ಸೇನೆಯನ್ನು ಗಟ್ಟಿಗೊಳಿಸಿರಿ.
ಬಸವಣ್ಣನವರನ್ನು ಬಳಸುವ ಲಿಂಗಾಯತ ವಿರೋಧಿಗಳಿಗೆ ಪಾಠ ಕಲಿಸಿರಿ ಅವರ ಕಾರ್ಯಕ್ರಮಗಳನ್ನು ಬಹಿಸ್ಕರಿಸಿರಿ.

 

 

 

 

 

 

 

 

 

 

ಡಾ.ಶಶಿಕಾಂತ.ಪಟ್ಟಣ ಪುಣೆ

Don`t copy text!