ಅದ್ವಿತಾ ಕಾದಂಬರಿ ಬಿಡುಗಡೆ
e- ಸುದ್ದಿ ಮಸ್ಕಿ
ಶಿಕ್ಷಕ ಹಾಗೂ ಸಾಹಿತಿ ಆದಪ್ಪ ಹೆಂಬಾ ಅವರ ಕಾದಂಬರಿ ಅದ್ವಿತಾ ಏ.೧೧ ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀಭ್ರಮರಾಂಬ ದೇವಸ್ಥಾನದಲ್ಲಿ ಬಿಡುಗಡೆಯಾಗಲಿದೆ ಎಂದು ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕ ಗುಂಡುರಾವ್ ದೇಸಾಯಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಮಹಾಂತೇಶ ಮಸ್ಕಿ ವಹಿಸುವರು.
ಗಜಲಕಾರರಾದ ಮಂಡಲಗಿರಿ ಪ್ರಸನ್ನ ಅವರು ಕಾದಂಬರಿಯನ್ನು ಬಿಡುಗಡೆ ಮಾಡುವರು. ಡಯಟ್‌ನ ನಿವೃತ್ತ ಉಪನಿರ್ದೆಶಕ ಮಲ್ಲಿಕಾರ್ಜುನಸ್ವಾಮಿ ಹಿರೇಮಠ ಕೃತಿ ಪರಿಚಯ ಮಾಡಿಕೊಡಲಿದ್ದಾರೆ.
ನಿವೃತ್ತ ಶಿಕ್ಷಕ ಅರವಿಂದ ಶ್ಯಾಸಲ್, ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕ ಗುಂಡುರಾವ್ ದೇಸಾಯಿ, ಪತ್ರಕರ್ತ ವೀರೇಶ ಸೌದ್ರಿ, ಲೇಖಕ ಆದಪ್ಪ ಹೆಂಬಾ ಭಾಗವಹಿಸುವರು.