ಅದ್ವಿತಾ ಎನ್ನುವ ಚಿತ್ರಕಾವ್ಯ
ಕಳೆದ ಒಂದು ದಶಕದಿಂದ ಆತ್ಮೀಯ ಸಾಹಿತ್ಯದ ಒಡನಾಡಿಯಾಗಿರುವ ಹಿರಿಯ ಮಿತ್ರರಾದ ಆದಪ್ಪ ಹೆಂಬಾ ಅವರ ಎರಡನೇ ಕಾದಂಬರಿ ಅದ್ವಿತಾ ಕುತೂಹಲ ಸಂಗತಿ ಹೊಂದಿರುವ ಅಪರೂಪದ ಕಾದಂಬರಿ.
ತಮ್ಮ ಮಾಗಿದ 52 ನೇ ವಯಸ್ಸಿನಲ್ಲಿ ‘ ಅವನಿ’ ಕಾದಂಬರಿ ಮೂಲಕ ಸಾಹಿತ್ಯ ಪ್ರವೇಶ ಮಾಡಿದ ಹೆಂಬಾ ಅವರು ಮೂರು ನಾಲ್ಕು ವರ್ಷಗಳ ನಂತರ ಮತ್ತೊಂದು ಕಾದಂಬರಿಯೊಂದಿಗೆ ಓದುಗರಿಗೆ ಮುಖಾಮುಖಿಯಾಗುತ್ತಿದ್ದಾರೆ.
ಕಲ್ಯಾಣ ಕರ್ನಾಟಕದ ಅದು ರಾಯಚೂರಿನ ನೆಲದಲ್ಲಿ ಅಪರೂಪದಂತಿರುವ ಕಾದಂಬರಿಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮುನ್ನಡೆಯುತ್ತಿರುವ ಹೆಂಬಾ ಅವರು ಹೆಚ್.ಜಿ ರಾಧಾದೇವಿಯವರ ಮಾದರಿಯಲ್ಲಿಯೆ ಬರೆಯುವ ಅಪರೂಪದ ಲೇಖಕರು. ಅವನಿಯಲ್ಲಿಯೂ ಹೆಣ್ಣೆ ಕಾದಂಬರಿಯ ನಾಯಕಿಯಾಗಿ ಕಂಡರೆ ಅದ್ವಿತಾದಲ್ಲಿಯೂ ಹೆಣ್ಣೆನ್ನೆ ನಾಯಕಿಯನ್ನಾಗಿ ಮಾಡಿ ಹಲವು ಟ್ವಿಸ್ಟ್ಗಳ ಮೂಲಕಗೆಲ್ಲಲು ಪ್ರಯತ್ನಿಸಿದ್ದಾರೆ. ಆದಪ್ಪ ಹೆಂಬಾ ಅವರು ಹೆಣ್ಣು ಹೃದಯಿ. … ಎಂತಹ ಕಠಿಣಸನ್ನಿವೇಷದಲ್ಲೂ ಕರಗುವ, ಹೊಂದಿಕೊಳ್ಳುವ ವ್ಯಕ್ತಿತ್ವ.ಅವರ ಈ ಗುಣ ಅವರ ಬದುಕಿನಲ್ಲಿ ಗೆಲವೂ ತಂದಿದೆ ಕೆಲವೊಮ್ಮೆನಿರಾಸೆಯನ್ನು ತಂದಿದೆ.
ಬ್ರಾಹ್ಮಣ ಸಮುದಾಯದ ಅದ್ವಿತಾ, ಕೊರವ ಸಮುದಾಯದ ರಾಮು,ಜಾತ್ಯಾತೀತ ಮನೋಭಾವದ ತಿರುಮಲರಾಯರು, ಮೊದಲಮಗಳ ಜ್ಯಾತ್ಯತೀತ ನಿಲುವಿಗೆ ಬೆಂಬಲಿಸಿದ್ದ ತಿರುಮಲರಾಯರು ಅದು ವೈಫಲ್ಯ ಹೊಂದಿ ನ್ಯಾಯಾಧೀಶರಾದರೂ ರಾಮು ಅದ್ವಿತಾ ಅವರ ಪ್ರೀತಿಗೆ ರಾಜಿಯಾಗದೆ ಮಗಳನ್ನು ಅದ್ವೈತ್ ನಿಗೆ ಮದುವೆ ಮಾಡಿಸುವುದು. ಭಗ್ನಪ್ರೇಮಿಯಾದ ರಾಮು ಮುಂದೊಂದು ದಿನ ಅಪಘಾತದಲ್ಲಿ ಸಾವು ಬದುಕಿನ ಬಗ್ಗೆ ಹೋರಾಡುತ್ತಿದ್ದ ಅದ್ವೈತನಿಗೆ ತಾಯಿ ದುರುಗಮ್ಮ ಹಾಗೂ ತಾನು ಇಬ್ಬರೂ ಕೂಡಿ ರಕ್ತದಾನ ಮಾಡಿ ಬದುಕಿಸುವುದು… ಅಳಿಯನನ್ನು ಉಳಿಸಿದ ಋಣ ಭಾರ ಎಂತಲೊ ಅದ್ವಿತಾ ನಂತೆ ಇದ್ದ ಮನ್ವಿತಾಳನ್ನು ರಾಮುವಿಗೆ ಮದುವೆಮಾಡಿಕೊಳ್ಳಲು ಒತ್ತಾಯಿಸುವುದು… ಹೀಗೆ ನಿರಂತರ ಕ್ಲೈಮಾಕ್ಸ್ ಮೂಲಕ ಕಾದಂಬರಿಕಾರರು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತಾರೆ.
ಇಡಿ ಕಾದಂಬರಿ ರಾಯಚೂರು ನೆಲದಭಾಷೆಯಿಂದ ಶ್ರೀಮಂತಗೊಂಡಿದೆ.. ಅದು ಕಾದಂಬರಿಯ ಗೆಲವೂ ಹೌದು
ಇಲ್ಲಿಯ ಟೆನ್ನಿಸ್ ಆಟದ ಬಗ್ಗೆಯಾಗಲಿ, ಕೊರವ ಸಮುದಾಯದ,ಬ್ರಾಹ್ಮಣ ಸಂಪ್ರದಾಯದ ಸಂಪ್ರದಾಯಗಳ ಬಗ್ಗೆ, ಅಥವಾ ಕಾದಂಬರಿಯ ಹಲವು ಸಂಗತಿಗಳಬಗ್ಗೆ ಕಲ್ಪಿಸಿಕೊಂಡು ಬರೆದದ್ದಲ್ಲ. ಮುಖತಃ ಆ ಸಮುದಾಯದವರೊಂದಿಗೆ ಆಟಗಾರರೊಂದಿಗೆ ಸಂಪರ್ಕಿಸಿ ಮಾತಾಡಿ, ಸ್ಥಳಕ್ಕೆ ಭೇಟಿನೀಡಿ ಹತ್ತಿರದಿಂದನೋಡಿ ತಮ್ಮಅನುಭವದಂತೆ ದಾಖಲಿಸಿರುವುದರಿಂದ ಕಾದಂಬರಿ ಆಪ್ತವಾಗುತ್ತದೆ.
ಅವನಿ ಕಾದಂಬರಿಯನ್ನು ದೂರದ ಮಂತ್ರಾಲಯದ ಲಾಡ್ಜ ಒಂದರಲ್ಲಿ ಕುಳಿತು ಒಂದೆ ರಾತ್ರಿಯಲ್ಲಿ ಇಬ್ಬರೂ ಕೂಡಿ ಟೈಪಿಸಿದ್ದಾದರೆ ಅದ್ವಿತಾ ಬರೆದದ್ದಲ್ಲ… ಕಾದಂಬರಿಕಾರರೆ ಮೊಬೈಲ್‌ನಲ್ಲಿಯ ಟೈಪಿಸಿದ ಕಾದಂಬರಿ. ಅರ್ಪಣೆಯನ್ನು ಅವರು ರೈಲ್ವೆ ಇಲಾಖೆಗೆ ಮಾಡಬೇಕಿತ್ತು. ವಾರಕ್ಕೊಮ್ಮೆ ಕುಟುಂಬ ಇರುವ ಧಾರವಾಡಕ್ಖೆ ಹೋಗಲು ಆಶ್ರಯಿಸಿದ್ದು ಹುಬ್ಬಳ್ಳಿ ಸಿಂಧನೂರು ರೈಲನ್ನು. ಹಾಗೆ ಹೋಗಿ ಬರುವಾಗ ಪ್ರಯಾಣದ ಸಮಯದಲ್ಲಿ ಪರಿಪೂರ್ಣ ರೂಪಗೊಂಡಿದ್ದು ಈ ಕಾದಂಬರಿ. ಪ್ರಯಾಣದ ಸದುಪಯೋಗವನ್ನು ಹೀಗೂ ಮಾಡಿಕೊಳ್ಳಬಹುದೆಂದು ಲೇಖಕರುಕಾದಂಬರಿ ಮೂಲಕ ತೋರಿಸಿಕೊಟ್ಟಿದ್ದಾರೆ ಬದಲಾದ ಕಾದಂಬರಿ
ಆದಪ್ಪಹೆಂಬಾ ಅವರ ಅನುಭವದ ಮೂಸೆಯಲ್ಲಿ ಅನೇಕ ಕತೆಗಳಿವೆ ಕಾದಂಬರಿಗಾಗುವ ವಸ್ತುಗಳಿವೆ. ತೊಂಬತ್ತರ ದಶಕದಲ್ಲಿಯ ಯಂಡಮೂರಿ, ರವಿಬೆಳೆಗೆಯವರ ದಟ್ಟ ಪ್ರಭಾವವಿದೆ. ಅದೆ ಜಾಡಿನಲ್ಲಿ ಅವರು ಬರೆಯುತ್ತಿದ್ದಾರೆ. ಜನಪ್ರಿಯ ಕತಾ ವಸ್ತು ಅವರದು.ಹಾಗಾಗಿ ಹೆಣ್ಣುಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಅವರ ಕಾದಂಬರಿಯ ಓದುಗರು ಹೆಣ್ಣುಮಕ್ಕಳು ಹಾಗೂ ಅದೆ ಹೃದಯದ ಪುರುಷರು. ಕಣ್ಣಿಗೆ ಕಣ್ಣುವಂತೆ ಪಾತ್ರಗಳನ್ನು ಚಿತ್ರಿಸುವ ಶಕ್ತಿ ಅವರ ಬರಹಕ್ಕಿದೆ. ಒಳ್ಳೆಯ ನಿರ್ದೇಶಕರ ಕೈಯಲ್ಲಿ ಕಾದಂಬರಿ ಸಿಕ್ಕರೆ ಅದು ಚಲನಚಿತ್ರವಾಗಬಲ್ಲದು ಅಥವಾ ಧಾರವಾಹಿಯಾಗಿ ಯಶಸ್ವಿಗಳಿಸಬಲ್ಲದು.
ತೇಜಸ್ ಪ್ರಕಾಶನ ಮಸ್ಕಿ ಪ್ರಕಟಿಸಿರುವ ಕಾದಂಬರಿಗೆ ಹಿರಿಯ ಸಾಹಿತಿಗಳಾದ ಮಂಡಲಗಿರಿ ಪ್ರಸನ್ನ ಅವರು ಅರ್ಥ ಮುನ್ನುಡಿ ಹಿರಿಯ ಸಾಹಿತಿಗಳಾದ ಮಹಾಂತೇಶ ಮಸ್ಕಿ ಬೆನ್ನುಡಿ ಕಾದಂಬರಿಯ ಸೊಗಸನ್ನು ಹೆಚ್ಚಿಸಿದೆ…
ಮುಂಬರುವ ಅವರ ಕಾದಂಬರಿಯೂ ಜನಪ್ರಿಯ ಕತಾ ಮಾದರಿಯಿಂದ ಹೊರಬಂದು ಅಧುನಿಕ ತಲ್ಲಣಗಳಿಗೆ ಧ್ವನಿಯಾಗಿ ಹೊಸದಾಗಿ ಬರೆಯುವ ಪ್ರಯತ್ನಮಾಡಲಿ ಎನ್ನುವ ಆಶಯ ನನ್ನದು.