ನಾ ಓದಿದ *”ಚೋಮನ ದುಡಿ”* ಕಾದಂಬರಿ
ಡಾ.ಕೆ.ಶಿವರಾಮ ಕಾರಂತರ ಈ ಕಾದಂಬರಿ ಓದಿದಾಗ ನನಗನಿಸಿದ್ದು..
ಹಿಂದಿನ ಕಾಲದಲ್ಲಿ ನಮ್ಮ ನಾಡಿನಲ್ಲಿ (ದಕ್ಷಿಣ ಕನ್ನಡ) ಅಸ್ಪೃಶ್ಯ ಸಮುದಾಯದವರನ್ನು ಉನ್ನತ ವರ್ಗ,ಕುಲದವರೆನ್ನುವವರು ನಡೆಸಿಕೊಳ್ಳುತ್ತಿದ್ದ ರೀತಿ ಮತ್ತು ಅವರನ್ನು ತುಳಿಯುತ್ತಿರುವ ಬಗೆ ಮೂಡಿಬಂದಿದೆ.
ಚೋಮ ಎನ್ನುವ ಆ ಸಮುದಾಯದ ವ್ಯಕ್ತಿ ಬಡತನದಲ್ಲಿ ಹುಟ್ಟಿದರು ಒಂದು ಗೇಣಿ ಭೂಮಿಯನ್ನು ಪಡೆದು ಕೃಷಿಕನಾಗಬೇಕೆಂಬ ಆಸೆಗೆ ಬೆಂಕಿ ಇಟ್ಟಿದರ ಪರಿಣಾಮವೇ ಪ್ರತಿದಿನ ಕುಡಿತಕ್ಕೆ ಬಲಿಯಾಗಿ ಮತ್ತೆ ಆ ಬಡತನದ ಕೂಪಕ್ಕೆ ಪ್ರತಿದಿನ ಹಿಂದಿರುಗುತ್ತಿದ್ದ. ಆತನ ಐದು ಮಕ್ಕಳಿಗೆ ಅಪ್ಪನ ಇರುವಿಕೆ ಒಂದಿದ್ದರೆ ಸಾಕು ಎಂತಾಗುತ್ತಿತ್ತು.. ಮನುಷ್ಯತ್ವಕ್ಕಿಂತ ಜಾತಿನೇ ಮೇಲು ಎನ್ನುವಂತಹ ಅಂದಿನ ದಿನಗಳಲ್ಲಿ ಚೋಮನ ದುಸ್ಥಿತಿ ಆತನ ಇಬ್ಬರು ಮಕ್ಕಳ (ಚನಿಯ ಹಾಗು ನೀಲ ) ಸಾವು ಮತ್ತು ವಯಸ್ಸಿಗೆ ಬಂದ ಮಗಳಾದ ಬೆಳ್ಳಿಯ ಅಸಹಾಯಕ ಸ್ಥಿತಿ ಈ ಪುಸ್ತಕ ಓದಿದವರ ಮನ ನೋವಿನ ಸೆರೆಮನೆಯಲ್ಲಿ ಕೂರುವಂತೆ ಮಾಡುತ್ತದೆ.
ಪ್ರೇಮದ ಆಸೆಯಿಂದಾಗಿ ಮಗ ಕೃಷಿಕನಾದ ಮತ್ತು ಮಗಳು ತನ್ತನ ಕಳೆದುಕೊಂಡದ್ದು ತಿಳಿದು ಚೋಮನು ದುಡಿ ಭಾರಿಸುತ್ತಲೇ ಕಣ್ಮುಚ್ಚಿದ.. ಇಂದಿಗೂ ಅಲ್ಲಲ್ಲಿ ಚೋಮ ಅಂದರೆ ಚೋಮನಂತವರನ್ನು ಕಾಣುತ್ತಿರುವುದು ನೋಡಿದರೆ “ಉನ್ನತ ವರ್ಗದವರು,ಕುಲದವರು ಎನ್ನುವ ಆಳುವ ವರ್ಗದವರು ಅಂತವರಿಗೆ ಆಸರೆಯಾಗುವ ಪ್ರಯತ್ನ ಮಾಡದೆ ಬಡತನವೆಂಬ ಬೆಂಕಿಯ ಕೂಪದಲ್ಲಿ ಉಳಿಯುವಂತೆ ಮಾಡುತ್ತಿರುವುದು ಸತ್ಯ .” ಜಾತಿ -ಧರ್ಮವನ್ನು ಮೀರಿ , ಮಾನವೀಯತೆ ಮನುಷ್ಯತ್ವಕ್ಕೆ ಗೌರವಿಸುವುದು ಇಂದು ಅತಿ ಮುಖ್ಯ ವಾಗಿದೆ ಎಂದು ಅನಿಸುತ್ತದೆ..
–ದೊಡ್ಡಪ್ಪ ಗಬ್ಬೂರು ಮಸ್ಕಿ