ಬಸವ ಧರ್ಮ

ಬಸವ ಧರ್ಮ

ಬಸವ ನಾಮವು ಅಂದಿನಿಂದ
ಇಂದು ದಶದಿಶೆಗೆ ಬೆಳಗುತಲಿ
ಬೆಳಗಿ ಹೊಳೆಯುವ ಜ್ಯೋತಿ
ಮೂಜಗವ ತುಂಬುತಲಿ ||

ವಚನ ರಸ ಸಾರದಲಿ
ಮೌಢ್ಯವನು ತೊಳೆಯುತಲಿ
ಅರಿವು ಅನುಭಾವವನು
ಭೂವಿಗೆಲ್ಲ ಹಂಚುತಲಿ ||

ಮರೆವು ಮಾಯೆಯ ಪರದೆ
ಮನದಿ ದೂಡುವ ತೆರದಿ
ಅಜ್ಞಾನ ಅಂಧಕಾರ ತೊರೆದು
ಸುಜ್ಞಾನ ಸುಧೆಯಲಿ ಬೆರೆದು ||

ಬಸವ ತತ್ವವು ಇಂದು
ಜಗತತ್ವವಾಗಿಹುದು
ಜಗಜ್ಯೋತಿ ಚಿದ್ಬೆಳಕು
ಚಿದ್ರಸವ ಪಡೆಯುತಲಿ ||

ಕಾಯಕವೇ ಕೈಲಾಸವೆಂದ
ಬಸವಂಗೆ ಶರಣೆಂದು
ಅಲ್ಲಮರ ಬೆಡಗಿಗೆ
ಸಿದ್ಧರಾಮನ ಯೋಗಕೆ
ಬೆರಗಾಗಿ ನೋಡುತಿದೆ ಜಗವೆಲ್ಲ||

ಅಕ್ಕನಾ ಅರಿಯುತಾ
ಸತ್ಯಶುದ್ಧ ಕಾಯಕದಾ
ಲಕ್ಕಮ್ಮನ ನೆನೆಯುತಾ
ಸಂಕವ್ವೆ,ಸತ್ಯಕ್ಕಾ,ಗೊಗ್ಗವ್ವೆಯರು||

ಚೆನ್ನಬಸವಣ್ಣ, ಮಡಿವಾಳ ಮಾಚಯ್ಯನ
ಅಂಬಿಗರ ಚೌಡಯ್ಯ ಮಾದಾರ ಚೆನ್ನಯ್ಯ
ಡೊಹರ ಕಕ್ಕಯ್ಯ,ದಾಸಿಮಯ್ಯರ
ನಿಲುವಿಗೆ ಚೈತನ್ಯ ತುಂಬಿಹುದು||

ಸಮ ಸಮಾಜ ನಿರ್ಮಾಣದಿ
ಸಮತೆ ಬೀಜ ಬಿತ್ತಿ
ಕಳೆಯ ಕಳೆವ ಜ್ಞಾನ ಅರುಹಿ
ಸುಜ್ಞಾನದ ಪಥವನರುಹಿದರೆಮಗೆ||

ಅಕ್ಷರ ಅರಿಯದವರು
ಅರಿವಿನಾ ವಚನ ಬರೆದು
ಕಾಣುದದನರಸಿ ಹಿಡಿವ
ಕುರುಹಕೊಟ್ಟರೆಮಗೆ ||

ಶತಶತಮಾನದಿ ಕೂಡಿಸಿಟ್ಟ
ಜತನದಿ ಜೋಡಿಸಿಟ್ಟ ವಚನ ಕಟ್ಟಿಗೆ
ಅಚ್ಚುಹಾಕಿ ಕೊಟ್ಟರೆಮಗೆ
ಹಳಕಟ್ಟಿ ಅಪ್ಪನವರು ||

ಸಾಗಿ ಬಂತು ಬಸವ ಧರ್ಮ
ಇದು ನಮ್ಮಯ ಬಾಳ ಮರ್ಮ ||

ಸವಿತಾ ಎಮ್. ಮಾಟೂರು, ಇಳಕಲ್

Don`t copy text!