ಒಲವ ದಾರಿ
ಬಾಗಿಲಲ್ಲೆ ಕುಳಿತಿರುವೆ
ಮಲ್ಲಿಗೆಯ ಹಿಡಿದು
ಮೆಲ್ಲಗೆ ಬರುವ
ನಲ್ಲನ ಕಾಯುತ ||
ಅವನ ಬರುವಿಕೆಗೆ
ಮೈಯಲ್ಲಾ ಕಣ್ಣಾಗಿ
ಒಲವ ಹೂಹಾಸಿ
ದಾರಿ ನೋಡುತಿರುವೆ ||
ಇಂದೆಕೊ ಮನಕೆ ಬೇಸರ
ದಿನವೂ ಬರುವ ನಲ್ಲ
ಇನ್ನೂ ಬರಲಿಲ್ಲ
ನೂರೆಂಟು ದುಗುಡ ||
ಹೃದಯ ಬಡಿತವ ಅರಿತು
ಮುದ್ದು ಮನದಿ ಬೆರೆತು
ಮುಂಗಾರು ಸೋನೆಯಂತೆ
ಒಲವ ಸುರಿಸುವ ಅರಸ
ಇಂದೆಕೆ ಬರಲಿಲ್ಲಾ. ||
ಮನದಾಸೆ ಮರೆಮಾಚಲು
ಮನವ ರಮಿಸಲು ಆಗದೆ
ಮೌನವಾಗಿರುವೆ, ಬರುವನೆಂಬ
ಭರವಸೆಯ ಹೊತ್ತು ||
ದಾರಿ ಕಾದು ಸೋತು
ಮನಭಾರದ ಮನವು
ಮುನಿಸಿಕೊಂಡಿಹುದು
ಬಾರದಿರುವ ನಲ್ಲನ ನೆನೆದು ||
ತಿಳಿಸಬಾರದೆ ಕಾರಣವ
ಕೆಣಕುವ ಭಾವನೆಗೆ
ಇಣುಕುವಾ ಆಸೆಗೆ
ಮೈಮನವು ಗೊಡೆಗೆ
ವಾಲುತಿಹುದು. ||
ಮುಖದಿ ಮೂಡಿರುವಾ
ಮುಗ್ದ ನಗು ಕೂಡ
ನಿನ್ನನ್ನೆ ಅರಸಿ
ದೂರ ಸರಿದಿಹುದು ll
ಆಸೆ ಅರಳಿಸುವಾ
ಕನಸ ಕೆರಳಿಸುವಾ
ಮನವ ಕುಣಿಸುವ ನಲ್ಲ
ಇಂದಲ್ಲಾ ನಾಳೆ ಬರುವನಲ್ಲಾ ||
–ಸವಿತಾ ಎಮ್.ಮಾಟೂರು, ಇಲಕಲ್ಲ
ಆತ್ಮೀಯರೇ,
೩೦೨೦ ರ ದುಸ್ವಪ್ನ ಮರುಕಳಿಸದೆ , ೨೦೨೧ ನವ ಉಲ್ಲಾಸದ ವರ್ಷ ವಾಗಲಿ ಎಂಬ ಆಶಯ e-ಸುದ್ದಿ ತಂಡದ್ದು, ಕವಿತೆಗಳಿಗೆ, ಗಜಲ್ ಗಳಿಗೆ, ಮುಕ್ತಕಗಳಿಗೆ, ಚುಟುಕು, ಹಾಯಕುಗಳಿಗೆ ತಟ್ಟನೆ ಮನಸ್ಸುಗಳನ್ನು ಕಟ್ಟುವ, ಬದುಕಿನ ಚಿತ್ರಣಗಳನ್ನು ಅನಾವರಣಗೊಳಿಸುವ ಶಕ್ತಿ ಇದೆ. ಪ್ರತಿದಿನ ಪ್ರಕಟಿಸುವ ಸಂಕಲ್ಪ ಮಾಡಿದೆ. ಸಾಹಿತಿಗಳು, ಕವಿಗಳು ಈ ನಂ.ಗೆ ೯೪೪೮೮೦೫೦೬೭ ಕಳಿಸಲು ಕೊರಿಕೆ.
-ಸಂಪಾದಕ