ಪುರಸಭೆ ಶೇ.80 ರಷ್ಟು ತೆರಿಗೆ ಸಂಗ್ರಹ ಬಾಕಿ-ಹನುಮಂತಮ್ಮ ನಾಯಕ

e-ಸುದ್ದಿ ಮಸ್ಕಿ
ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃದ್ಧಿಗಾಗಿ ಪುರಸಭೆ ಜೊತೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಪುರಸಭೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪ್ರತಿದಿನ ಪುರಸಭೆ ವ್ಯಾಪ್ತಿಯಲ್ಲಿನ ಮನೆಗಳಿಂದ ಸಂಗ್ರಹಿಸುವ ಕಸವನ್ನು ವಿಲೇವಾರಿ ಮಾಡಲು ಸ್ಥಳವಿಲ್ಲದಿರುವುದರಿಂದ ತುಂಬಾ ಸಮಸ್ಯೆ ಉಂಟಾಗಿದೆ. ಮುಂದಿನ 15 ದಿನಗಳಲ್ಲಿ ಕಸ ವಿಲೇವಾರಿ ಮಾಡಲು ಸ್ಥಳವನ್ನು ಗೊತ್ತು ಪಡಿಸಿ ಸರ್ಕಾರದ ಅನುಮತಿ ಪಡೆದುಕೊಳ್ಳಲಾಗುವುದು ಎಂದರು.
ಒಂದು ವೇಳೆ ಸರ್ಕಾರದಿಂದ ಅನುಮತಿ ವಿಳಂಭವಾದರೆ ಪರ್ಯಾಯವಾಗಿ ಸ್ಥಳವನ್ನು ನೋಡಿ ಅಲ್ಲಿಗೆ ಕಸ ವಿಲೇವಾರಿ ಮಾಡಲು ಯೋಚಿಸಲಾಗಿದೆ. ಪುರಸಭೆಗೆ ಶೇ.80 ರಷ್ಟು ಆಸ್ತಿ ತೆರಿಗೆಯನ್ನು ಸಂಗ್ರಹ ಬಾಕಿ ಇದೆ. ಆದರೆ ಶೇಕಡಾ 8 ರಷ್ಟು ಮಾತ್ರ ಕರ ವಸೂಲಿಯಾಗಿದೆ. ಕರ ವಸೂಲಿ ಮಾಡಲು ಪ್ರತಿಯೊಂದು ವಾರ್ಡಗಳಿಗೆ ಪ್ರತ್ಯೇಕವಾಗಿ ನಮ್ಮ ಸಿಬ್ಬಂದಿಗಳಿಗೆ ಜವಬ್ದಾರಿ ವಹಿಸಲಾಗಿದೆ. ಅವರು ಪ್ರತಿ ದಿನ ಕರವಸೂಲಿ ಮಾಡಲಿದ್ದಾರೆ. ಒಂದು ವೇಳೆ ನಮಗೆ ನಿಗದಿತ ಅವಧಿಯೊಳಗೆ ಕರವಸೂಲಿಯಾಗದಿದ್ದರೆ. ಕರವಸೂಲಿ ಸಾಪ್ತಾಹ ಮಾಡಿ ವಸೂಲಿ ಮಾಡಲಾಗುವುದು ಎಂದರು.
ಪೌರ ಕಾರ್ಮಿಕರಿಗೆ ಬಾಕಿ ಇರುವ ವೇತನವನ್ನು ಶೀಘ್ರದಲ್ಲಿ ಪಾವತಿ ಮಾಡಲಾಗುವುದಲ್ಲದೆ ಕಾಲುವೆ ಬದಿಗಳಲ್ಲಿ ಅನಗತ್ಯ ಕಸವನ್ನು ಹಾಕುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು. ಪುರಸಭೆ ಅಧ್ಯಕ್ಷೆ ವೀಜಯಲಕ್ಷ್ಮೀ ಪಾಟೀಲ್, ಉಪಾಧ್ಯಕ್ಷೆ ಕವಿತಾ ಮಾಟೂರು, ಬಿಜೆಪಿ ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ್, ಅಮರೇಶ ಮಾಟೂರ್ ಇದ್ದರು.

Don`t copy text!