ರೈತರ ವಿಚಾರದಲ್ಲಿ ರಾಜಕೀಯ ಮಾಡಲ್ಲ, ನೀರಾವರಿ ಯೋಜನೆ ಜಾರಿಗಾಗಿ ಪ್ರಯತ್ನ-ಪ್ರತಾಪ್‍ಗೌಡ ಪಾಟೀಲ್

ರೈತರ ವಿಚಾರದಲ್ಲಿ ರಾಜಕೀಯ ಮಾಡಲ್ಲ, ನೀರಾವರಿ ಯೋಜನೆ ಜಾರಿಗಾಗಿ ಪ್ರಯತ್ನ-ಪ್ರತಾಪ್‍ಗೌಡ ಪಾಟೀಲ್

e-ಸುದ್ದಿ, ಮಸ್ಕಿ

ರೈತರ ಜಮೀನುಗಳಿಗೆ ನೀರಾವರಿ ಯೋಜನೆ ತರುವುದಕ್ಕಾಗಿ ಯಾರು ರಾಜಕೀಯ ಮಾಡಬಾರದು. ರೈತರ ಹಿತ ಕಾಪಾಡುವುದಕ್ಕಾಗಿ ನೀರಾವರಿ ಯೋಜನೆಗಳು ಜಾರಿಗೆ ತರಲು ಶತ ಪ್ರಯತ್ನ ಮಾಡುತ್ತಿರುವೆ ಎಂದು ಮಾಜಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ 5 ಎ ಕಾಲುವೆ ಜಾರಿಗಾಗಿ ರೈತರು ಕಳೆದ 12 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರ್ಕಾರವೂ ಕೂಡ ರೈತರ ಹಿತಕ್ಕಾಗಿ 5 ಎ ನಾಲೆಗೆ ಯೋಜನೆ ಜಾರಿ ಮಾಡಲು ರೈತರನ್ನೊಳಗೊಂಡ ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದೆ. ತಾಂತ್ರಿಕ ಸಮಿತಿಯಲ್ಲಿ ನಮ್ಮ ರೈತರು ಸಹ ಇದ್ದಾರೆ. ನೀರಾವರಿ ಹೊರಾಟಗಾರರು ವರದಿ ಬರುವವರೆಗೆ ಕಾಯುವದನ್ನು ಬಿಟ್ಟು ಮಸ್ಕಿ ಬಂದ್ ಆಚರಿಸಿರುವದು ಸರಿಯಲ್ಲ. ಹೋರಾಟದ ವಿಷಯಲ್ಲಿ ರಾಜಕೀಯ ಮಾಡುವದು ನನಗೆ ಬೇಕಾಗಿಲ್ಲ. ನಾನು ರೈತರ ಬೆನ್ನೆಲುಬಾಗಿ ಇರುತ್ತೇನೆ. ಆದ್ದರಿಂದ ರೈತರು ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉಪ ಚುನಾವಣೆ : ಕ್ಷೇತ್ರದ ಉಪಚುನಾವಣೆ ಮುಂದಿನ ಜನವರಿ 20ನೇ ರೊಳಗಾಗಿ ಘೋಷಣೆಯಾಗುವ ಸಾದ್ದ್ಯೆತೆ ಹೆಚ್ಚಿದೆ. ಬಸವಕಲ್ಯಾಣ ಮತ್ತು ಮಸ್ಕಿಗೆ ಮಾರ್ಚ ಮುಗಿಯುವದರೊಳಗೆ 6 ತಿಂಗಳಾಗುತ್ತದೆ. ಚುನಾವಣೆ ನಡೆಸುವದು ಅವಶ್ಯವಾಗಿದ್ದು ಕೇಂದ್ರ ಚುನಾವಣಾ ಆಯೋಗ ತನ್ನ ಕೆಲಸವನ್ನು ಕಾಲ ಮಿತಿಯೊಳಗೆ ಮಾಡಿ ಕ್ಷೇತ್ರದ ಚುನಾವಣಾ ದಿನಾಂಕ ಘೋಷಣೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆಗಾಗಿ ಕಳೆದ ಒಂದು ವರ್ಷದಿಂದಲೂ ನಾವೂ ಸಿದ್ಧತೆಯಲ್ಲಿದ್ದೇವೆ. ಆದರೆ ಇತ್ತಿಚಿಗೆ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲ್ಲೆಯಲ್ಲಿ ಸ್ವಲ್ಪ ಸ್ಥಗಿತವಾಗಿತ್ತು. ಮುಂದಿನ ವಾರದಿಂದ ಮತ್ತೆ ಪಕ್ಷ ಸಂಘಟನೆ ಮಾಡಲಾಗುವುದು. ಅಲ್ಲದೇ ರಾಜ್ಯ ಮಟ್ಟದ ನಾಯಕರ ನೇತೃತ್ವದಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಬೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಲಾಗುವುದು ಎಂದರು.
ಬಿಜೆಪಿ ಪಕ್ಷದವತಿಯಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೊಡ್ಡ ಮಟ್ಟದ ಕಾರ್ಯಕರ್ತರ ಸಭೆಯನ್ನು ಸಹ ಏರ್ಪಡಿಸಲಾಗುವದು ಎಂದರು. ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತದೆ. ನಾಯಕರು ನನ್ನನ್ನು ಸಚಿವರನ್ನಾಗಿ ಮಾಡುತ್ತಾರೆಂಬ ಭರವಸೆ ಇದೆ. ಸದ್ಯ ಈಗ ಸಚಿವರನ್ನಾಗಿ ಮಾಡಲು ಕಾನೂನು ತೊಡಕು ಇರುವುದರಿಂದ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಡಾ:ಬಿ.ಎಚ್.ದಿವಟರ್, ದೊಡ್ಡಪ್ಪ ಕಡಬೂರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೋಪ್ಪಿಮಠ ಇದ್ದರು.

 

Don`t copy text!