ಬಸವ ಚಿಂತನ ತಾಯಿ ಕರುಳು

ಬಸವ ಚಿಂತನ ತಾಯಿ ಕರುಳು


ಸುಖವನರಸಿ ಬಸವ ಭೂಮಿಗೆ
ಬರುವ ಜನರು ನೂರು ನೂರು
ಆಧ್ಯಾತ್ಮಕೆ ಆನಂದಕೆ
ಮಹಾಮನೆಯು ತವರು !

ವಚನ ಪಠನ ನಿತ್ಯ ನೂತನ
ಬಸವ ಪ್ರಜ್ಞೆಯ ಚೇತನ
ಬಳಸಿಕೊಂಡರೆಪೊಡವಿ ಐಸಿರಿ
ಪರುಷ ಮುಟ್ಟಿದ ಕಲ್ಲು ಸಿರಿಯು

ಸಿಪ್ಪೆ ತಿಂದು ಉಳಿದು ಹೋಗದೆ
ಕಬ್ಬುತಿನ್ನುವ ಜಾಣ್ಮೆ ಬೇಕು
ಧರ್ಮ ಶೋಷಣೆ ಕೊನೆಗೊಳಿಸಲು
ಲಿಂಗ ಜಂಗಮ ದೀಕ್ಷೆ ಸಾಕು

ವಿಶ್ವ ತುಂಬ ಬಸವಬೆಳಕು
ಮಠದಿ ಅಂಧಕಾರ ನೆರಳು
ಮರ್ತ್ಯಲೋಕದ ಮುಕುಟಮಣೀಯು
ಬಸವ ಚಿಂತನ ತಾಯಿ ಕರುಳು

ಡಾ ಶಶಿಕಾಂತ ಪಟ್ಟಣ -ರಾಮದುರ್ಗ ಪೂನಾ

Don`t copy text!