ಅಮರವಾಡಿ ನುಡಿ ಜಾತ್ರೆಯೂ ಸಾಹಿತ್ಯ ಸಮ್ಮೇಳನವೂ 

ಅಮರವಾಡಿ ನುಡಿ ಜಾತ್ರೆಯೂ ಸಾಹಿತ್ಯ ಸಮ್ಮೇಳನವೂ 

ನಾಡು – ನುಡಿ ಸಂಸ್ಕೃತಿಯ ರಕ್ಷಣೆ ಮತ್ತು ವಿಕಾಸಕ್ಕಾಗಿ ಕಂಕಣಬದ್ಧವಾಗಿರುವ ಕನ್ನಡ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಾಗಿದೆ. ಇದು ಕನ್ನಡ ಸಾಹಿತ್ಯ ಮತ್ತು ಕನ್ನಡಿಗರ ಬಹುಮುಖಿ ಆಯಾಮಗಳಿಗೆ ಆಲೋಚನೆ, ಅಕ್ಷರ, ಕ್ರಿಯೆಗಳ ಮೂಲಕ ಸ್ಪಂದಿಸುತ್ತಿಲೇ ಬಂದಿದೆ.

ಇದರ ವಿಸ್ತಾರ ರಾಜ್ಯದ ಜಿಲ್ಲೆ, ತಾಲೂಕು
ಹಾಗೂ ವಲಯ ಮಟ್ಟದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹರಡಿದೆ. ಇಂತಹ ಕನ್ನಡ ನಾಡಿನ ಹೆಮ್ಮೆಯ ಸಂಸ್ಥೆಯ ತಾಲೂಕು ಘಟಕ ಔರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ನಮ್ಮೆಲ್ಲರ ಹೆಮ್ಮೆ.
ಸದಾ ಕಲೆ ಸಂಸ್ಕೃತಿ, ಸಾಹಿತ್ಯದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು ಗಡಿಭಾಗದಲ್ಲಿ ಕನ್ನಡ ಕಟ್ಟುವ ಮಹೋನ್ನತ ಕಾರ್ಯ ವ್ಯಾಪಕವಾಗಿ ಮಾಡುತ್ತಿರುವುದು ಶ್ಲಾಘನೀಯ.

ಇಂದು”ಔರಾದ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನ“ವನ್ನು ಸಂತಪೂರ ಗ್ರಾಮದ ಜಾನಪದ ಸಾಹಿತಿ ಶ್ರೀ ‘ಸಂಜೀವಕುಮಾರ ಜುಮ್ಮಾ’ ಅವರ ಸರ್ವಾಧ್ಯಕ್ಷತೆಯಲ್ಲಿ ಔರಾದ ಪಟ್ಟಣದ ಡಾ.ಗುರುಪ್ಪಾದಪ್ಪಾ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ‌.* ಈ ಸಮ್ಮೇಳನದಲ್ಲಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು, ಜಿಲ್ಲೆ ಮತ್ತು ತಾಲೂಕಿನ ಸಮಸ್ಯೆಗಳನ್ನು, ತಲ್ಲಣಗಳನ್ನು ಚರ್ಚಿಸುವುದು, ಚಿಂತನ – ಮಂಥನ ಮಾಡುವುದಾಗಿದೆ.

ಈ ಹಿನ್ನೆಲೆಯಲ್ಲಿ ಔರಾದನಲ್ಲಿ ನಾಳೆ ನಡೆಯುತ್ತಿರುವ ಔರಾದ ತಾಲೂಕು ಆರನೇ ಸಮ್ಮೇಳನದಲ್ಲಿ ನಾಡಿನ ಚಿಂತಕರು, ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು ಆಗಮಿಸಲ್ಲಿದ್ದಾರೆ. ಇದು ಎಲ್ಲರನ್ನೂ ಒಳಗೊಳ್ಳುವ ಸಮ್ಮೇಳನವಾಗಲು ಜಿಲ್ಲಾ ಹಾಗೂ ತಾಲೂಕಿನ ಎಲ್ಲಾ ಕನ್ನಡದ ಸಹೃದಯಿ ಮನಸ್ಸುಗಳು ಪಾಲ್ಗೊಂಡು ಸಮ್ಮೇಳನವು ಹೊಸ ಸಾಧ್ಯತೆಗಳಿಗೆ ನಾಂದಿಹಾಡಲು ನಾವೆಲ್ಲರೂ ಶ್ರಮಿಸೋಣ ಬನ್ನಿ…..!!

*ತಮಗಿದು ಪ್ರೀತಿಯ ಕರೆಯೋಲೆ

– ಜಗನ್ನಾಥ ಮೂಲಗೆ
*ಅಧ್ಯಕ್ಷರು, ತಾಲೂಕು ಕಸಾಪ ಔರಾದ*

-ಬಾಲಾಜಿ ಕುಂಬಾರ ಚಟ್ನಳ್ಳಿ

Don`t copy text!