ಸವಿತಾ ಮಹರ್ಷಿ ಜಯಂತಿ

ಸವಿತಾ ಮಹರ್ಷಿ 

ಪೌರಾಣಿಕ ಹಿನ್ನೆಲೆಯಲ್ಲಿ ವೇದಗಳಲ್ಲಿ ಕಂಡುಬರುವ ದೇವ ಪುರುಷ ಬ್ರಹ್ಮದೇವರ ಮಗ ಮಾರೀಚಿ. ಮಾರಿಚಿಯ ಮಗ ಕಶ್ಯಪ. ಕಶ್ಯಪ ಮುನಿಗೆ ಅದಿತಿಯಲ್ಲಿ ಜನಿಸಿದ ಮಗನೇ ಸವಿತಾ ಮಹರ್ಷಿ.

ಪುರಾಣದ ಪ್ರಕಾರ ಶಿವನು ಅತಿಯಾಗಿ ಬೆಳೆದ ಕೂದಲುಗಳಿಂದ ತೊಂದರೆ ಅನುಭವಸುತ್ತಿದ್ದಾಗ ಪಾರ್ವತಿ ದೇವಿಯ ಸಲಹೆಯಂತೆ ತನ್ನ ಎಡಗಣ್ಣಿನಿಂದ ಕ್ಷೌರಿಕರ ಮುಲಪುರುಷರಾದ ಸವಿತಾ ಮಹರ್ಷಿಯನ್ನು ಸೃಷ್ಠಿ ಮಾಡಿದರೆಂದು.ಸವಿತಾ ಮಹರ್ಷಿಯು ಶಿವನಿಗೆ ಆಯುಸ್ಕರ್ಮ ವನ್ನು ಪೂರೈಸಿದರೆಂದು.ನಂತರ ಇತರೆ ದೇವರಿಗೂ ಸೇವೆ ಮಾಡಿದರೆಂದು ತಿಳಿಯುತ್ತದೆ. ಶಿವನ ನಯನದಿಂದ ಜನಿಸಿದ್ದರಿಂದ ಈ ಜನಾಂಗವನ್ನು ನಾಯಿ,ನಾಯಿಂದ,ನಾಯನಜ ಕ್ಷತ್ರಿಯ,ನಾಪಿತ,ನಾವೀಕ್ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ.ಮಹರ್ಷಿಯ ಸೇವೆಯಿಂದ ತೃಪ್ತನಾದ ಶಿವನು ಸಂಗೀತ ಸಾಧನಗಳನ್ನು ನೀಡಿದನೆಂದು ಆದ್ದರಿಂದ ಈ ಜನಾಂಗಕ್ಕೆ ಸಂಗೀತಾ ಮತ್ತು ವಾದ್ಯಗಳು ಉಪಕಬಂದಿದೆಸುಬಾಗಿ ಬಂದಿದೆ ಎಂದು ಹೇಳಲಾಗುತ್ತದೆ.ಸವಿತಾ ಮಹರ್ಷಿಯು ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವನ್ನು(ಸಾಮ ಎಂದರೆ ಸಂಗೀತಾ ಹಾಗೂ ವೇದ ಎಂದರೆ ಜ್ಞಾನ) ರಚಿಸಿದರು.ಸವಿತಾ ಮಹರ್ಷಿಯು ವೇದಮಾತೆ ಹಾಗೂ ಗಾಯಿತ್ರಿ ಮಂತ್ರದ ಖ್ಯಾತಿ ಗಾಯಿತ್ರಿದೇವಿಯ ತಂದೆ. ಗಾಯಿತ್ರಿ ದೇವಿಯು ಸಾಮಬ್ರಹ್ಮನನ್ನು ವಿವಾಹವಾಗಿ 12 ಜನ ಮಕ್ಕಳಿಗೆ ಜನ್ಮ ನೀಡಿದರೆಂದು ಗಂಡು ಮಕ್ಕಳಾದ ಸರಸ್ವತಿಯು ಇವರ ಮಗಳೆಂದು ತಿಳಿದಿದೆ.ಗಾಯಿತ್ರಿ ದೇವಿಯ ಅಳಿಯ ಸೋಮಬ್ರಹ್ಮನು ಆಯುರ್ವೇದದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರೆಂದು ಆದ್ದರಿಂದ ಆಯುರ್ವೇದವು ಈ ಜನಾಂಗದ ಉಪಕಸುಬಾಗಿ ನಡೆದುಕೊಂಡು ಬಂದಿದೆಯೆಂದು ಹೇಳಲಾಗುತ್ತದೆ.

Don`t copy text!