ಭಾವೈಕ್ಯತೆ

ಭಾವೈಕ್ಯತೆ

ಹುಟ್ಟಿ ಬಂದಿಹೆವಿಲ್ಲಿ
ಒಂದೇ ಮಣ್ಣಿನಲಿ
ಒಂದೇ ಬಣ್ಣದ ರಕ್ತ
ಎಲ್ಲ ರ ಧಮನಿಯಲಿ..

ಬೆಳೆದೆವು ಆಡುತಲಿ
ಓಣಿ ‘ ಗಲೀ ‘ಗಳಲಿ
ಜಾತಿ-ಮತಗಳ ಗೊಡವೆ
ಬರಲಿಲ್ಲ ಮನದಲ್ಲಿ..

‘ ಉರುಸು ‘ ಜಾತ್ರೆಗಳೆಲ್ಲ
ಕೂಡಿ ವಿಜೃಂಭಿಸಿರಲು
ಶ್ಯಾವಿಗೆ ಹೋಳಿಗೆಯ
ಸಂತಸದಿ ಸವಿದಿರಲು..!

ಮತಭೇದವೆಲ್ಲಿಯದು
ಹೃದಯಗಳೊಂದಾಗಿರಲು
ಸ್ನೇಹಪ್ರೀತಿಯ ಮಧುರ ಗಾನವದು
*ಭಾವೈಕ್ಯತೆಯ* ನಿರ್ಮಲ ಭಾವವಿರಲು..!

ಹಮೀದಾಬೇಗಂ ದೇಸಾಯಿ. ಸಂಕೇಶ್ವರ. 

—-_———-_———————————————————–ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆ
ವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏

Don`t copy text!