ಶರಣಬಸವೇಶ್ವರ ಸಹಕಾರಿ ವಾರ್ಷಿಕೋತ್ಸವ- ಶೇ 15 ರಷ್ಟು ಲಾಭಾಂಶ ವಿತರಣ

ಮಸ್ಕಿ : ಪಟ್ಟಣದ ಶರಣಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಪ್ರಸಕ್ತ ವರ್ಷ ೧ ಕೋಟಿ ೮೧ ಲಕ್ಷಕ್ಕೂ ಹೆಚ್ಚು ಷೇರು ಬಂಡವಾಳ ಹೊಂದಿದ್ದು ೧೭ ಕೋಟಿ ೪೨ ಲಕ್ಷ ೯೦ ೭೪೮ ರೂ.ಗಳನ್ನು ಠೇವಣಿ ಸಂಗ್ರಹಿಸಿದ್ದು ಪ್ರಸಕ್ತ ವರ್ಷ ಶೇರುದಾರರಿಗೆ ಶೇ.೧೫ ರಷ್ಟು ಲಾಭವನ್ನು ವಿತರಣೆ ಮಾಡುವದಾಗಿ ಸಹಕಾರಿಯ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ ತಿಳಿಸಿದರು.

ಹಕಾರಿಯ ಆವರಣದಲ್ಲಿ ನಡೆದ ೧೩ ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಳೆದ ಆರು ತಿಂಗಳಲ್ಲಿ ಕರೋನಾ ಮಹಾಮಾಗಿ ವ್ಯವಹಾರದ ಚಿತ್ರಣವನ್ನೇ ಬದಲಿಸಿದೆ. ಆದರು ನಮ್ಮ ಸಹಕಾರಿಯ ಸಾಲಗಾರರು ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡುವ ಮೂಲಕ ಸಹಕಾರಿ ಬೆಳವಣಿಗೆಗೆ ಸಹಕರಿಸಿದ್ದಾರೆ ಎಂದು ಅಂದಾನಪ್ಪ ಗುಂಡಳ್ಳಿ ತಿಳಿಸಿದರು.ಸಹಕಾರಿ ಸದಸ್ಯರಿಗೆ ಟ್ರಾವಲಿಂಗ್ ಬ್ಯಾಗ್ ಗಳನ್ನು ಉಚಿತವಾಗಿ ವಿತರಿಸಿದರು.ಕಾರ್ಯಕ್ರಮದಲ್ಲಿ ಮೌನೇಶತಾತ ಜಂಗಮರಹಳ್ಳಿ, ಮಲ್ಲಪ್ಪ ಕುಡತನಿ, ವೀರೇಶಪ್ಪ ಯಂಬಲದ, ಮಹಾದೇವಪ್ಪ ಬ್ಯಾಳಿ, ಶಿವಪ್ಪ ಉದ್ಬಾಳ, ಶಿವಶಂಕರಪ್ಪ ಹಳ್ಳಿ ಹಾಗೂ ಇತರರು ಭಾಗವಹಿಸಿದ್ದರು. ಸಹಕಾರಿಯ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಪಂಪಾಪತಿ ಅಮಕ್ಕುಂದಿಮಠ ಕಾರ್ಯಕ್ರಮ ನಿರ್ವಹಿಸಿದರ.

Don`t copy text!