ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ-ಲಿಂಗನಗೌಡ

ಮಸ್ಕಿ : ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಬೇಕಾಗಿದ್ದು ಅದರಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಅತ್ಯವಶ್ಯಕವಾಗಿದೆ ಎಂದು ಲಿಂಗಸುಗುರು ಸಿಡಿಪಿಒ ಲಿಂಗಬಗೌಡ ಪಾಟೀಲ ಹೇಳಿದರು.
ಸಂತೇಕೆಲ್ಲೂರಿನ ಘನಮಠೇಶ್ವರ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ರಾಷ್ಟ್ರೀಯ ಪೋಷಣಾ ಮಾಸಾಚರಣೆ ಅಂಗವಾಗಿ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾ.ಪಂ.ಸದಸ್ಯ ಗವಿಸಿದ್ದಪ್ಪ ಸಾಹುಕಾರ ಮಾತನಾಡಿ ಪ್ರತಿಯೊಬ್ಬರಿಗೂ ಆರೋಗ್ಯ ಅತಿ ಮುಖ್ಯವಾದ ಸಂಪತ್ತು. ಅದನ್ನು ಕಾಪಾಡಿಕೊಂಡು ಉತ್ತಮ ಕುಟುಂಬ ನಿರ್ವಹಣೆ ಮಾಡಬೇಕು ಎಂದರು.

ಮುಸ್ಲಿಕಾರ್ಲಕುಂಟಿಯಲ್ಲಿ ೨೫ ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಮುಕ್ತಾಯಮ್ಮ ಅವರನ್ನು ವಿಶೇಷವಾಗಿ ಸತ್ಕರಿಸಿದರು.

ಬಾಣಂತಿಯರು , ಗ್ರಾ.ಪಾಂ.ಪಿಡಿಒ ತಿಮ್ಮನಗೌಡ, ಸಂರಕ್ಷಣೆ ಅಧಿಕಾರಿ ರಾಜೇಶ್ವರಿ, ವೃತ್ತ ಮೇಲ್ವಿಚಾರಕಿ ನಿಂಗಮ್ಮ, ಆರೋಗ್ಯ ಇಲಾಖೆಯ ನಾಮದೇವ, ಬಸವರಾಜ ಇದ್ದರು.

Don`t copy text!