ಮಸ್ಕಿ ತಾಲೂಕು ವಾಲ್ಮೀಕಿ ನೌಕರರ ಸಂಘ ಅಸ್ಥಿತ್ವಕ್ಕೆ

  • ಮಸ್ಕಿ : ನೂತನ ಮಸ್ಕಿ ತಾಲೂಕಿಗೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಸಂಘ ಅಸ್ತಿತ್ವಕ್ಕೆ ತರಲಾಗಿದ್ದು ನೂತನ ಅಧ್ಯಕ್ಷರಾಗಿ ಜೆಸ್ಕಾ ಸಂಸ್ಥೆಯ ಪ್ರಭಾರಿ ಶಾಖಾಧಿಕಾರಿ ತಿರುಪತಿ ನಾಯಕ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.ಪ್ರವಾಸಿ ಮಂದಿರದಲ್ಲಿ ಭಾನುವಾರ ಪರಿಶಿಷ್ಟ ಪಂಗಡದ ನೌಕರರು ಸಭೆ ನಡೆಸಿದರು. ಸಭೆಯಲ್ಲಿ ಗೋವಿಂದಪ್ಪ ನಾಯಕ, ಬಿ.ಜಿ.ನಾಯಕ, ರಾಮಣ್ಣ ಗವಿಗಟ್ಟು, ಬಸವರಾಜ, ವೆಂಕಟೇಶ ನಾಯಕ ಹಾಗೂ ಇತರರು ಭಾಗವಹಿದ್ದರು.ಪದಾಧಿಕಾರಿಗಳು : ಗೌರವ ಅಧ್ಯಕ್ಷರಾಗಿ ಗೋಪಿನಾಥ್, ಅಧ್ಯಕ್ಷ ರಾಗಿ ತಿರುಪತಿ ನಾಯಕ, ಉಪಾಧ್ಯಕ್ಷರಾಗಿ ಮುದಕನಗೌಡ ಗುಂಡಾ, ವೆಂಕೊಬ ನಾಯಕ ಉದ್ಬಾಳ, ಪ್ರಧಾನ ಕಾರ್ಯದರ್ಶಿ ಯಾಗಿ ಜಿ.ತಿರುಪತಿ ನಾಯಕ, ಕಾರ್ಯದರ್ಶಿಗಳಾಗಿ ಮೌನೇಶ ತುಗ್ಗಲದಿನ್ನಿ, ಗೊವಿಂದರಾಜ ಹೊಸುರು, ಸಂಘಟನಾ ಕಾರ್ಯದರ್ಶಿ ಯಾಗಿ ಚಂದ್ರಯ್ಯ, ಸಹಕಾರ್ಯದರ್ಶಿಗಳಾಗಿ ಲಕ್ಷ್ಮೀ, ಶಾಂತ, ಧಶವಾನಪ್ಪ, , ಸದಸ್ಯರಾಗಿ ನಾಗರಾಜ, ಬಸವರಾಜ, ಭದ್ರಪ್ಪ ಇವರುಗಳು ಆಯ್ಕೆಯಾಗಿದ್ದಾರೆ.
Don`t copy text!