ಮಸ್ಕಿ : ನ್ಯಾ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಸಾರ್ವಜನಿಕವಾಗಿ ಚರ್ಚಿಸದೆ ವರದಿ ಜಾರಿಗೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಅಖಿಲ ಕರ್ನಾಟಕ ಶ್ರೀ ಸಿದ್ಧರಾಮೇಶ್ವರ ಭೋವಿ (ವಡ್ಡರ್) ಸಂಘದ ಪಾದಾಧಿಕಾರಿಗಳು ಒತ್ತಾಯಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ರವಿಕುಮಾರ ಚಿಗರಿ ಮಾತನಾಡಿ ರಾಜ್ಯದ ಪರಿಶಿಷ್ಟ ಜಾತಿ- ಪಂಗಡಗಳ ಐಕ್ಯತೆ ಉಳಿಸಿಕೊಳ್ಳುವುದು ಒಕ್ಕೂಟದ ಉದ್ದೇಶವಾಗಿದೆ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಲು ಸರ್ಕಾರ ಪಾರದರ್ಶಕ ಅವಕಾಶ ನೀಡಬೇಕು ಎಂದರು.
ಕೆಲ ಶಕ್ತಿಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಮುದಾಯಗಳಲ್ಲಿ ಪರಸ್ಪರ ದ್ವೇಷ ಹುಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ರವಿ ಚಿಗರಿ ಆರೋಪಿಸೊದರು.
ಸರ್ಕಾರ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗಿತರದಂತೆ ತಡೆ ಹಿಡಿಯಬೇಕೆಂದು ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಸೀಲ್ ಕಚೇರಿಯ ಶಿರಸ್ತೆದಾರ ಅಕ್ತರ ಅಲಿ ಅವರಿಗೆ ಸಮಾಜದ ಮುಖಂಡ ಸಾರಪ್ಪ ಬಂಗಾಲಿ ಸಲ್ಲಿಸಿದರು.
ಪುರಸಭೆ ಸದಸ್ಯ ರಂಗಪ್ಪ ಅರಕೇರಿ, ಮುಖಂಡರಾದ ಆನಂದ ಬೆನಗಲ್, ಅಪ್ಪಯ್ಯ, ಬಸವರಾಜ, ಬುಕ್ಕಣ್ಣ, ಯಮನೂರು,ನಾಗರಾಜ ರಾಯಚೂರು ಇದ್ದರು.