ಮಸ್ಕಿ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ರಣಕಹಳೆ


e-ಸುದ್ದಿ, ಮಸ್ಕಿ
ಮಸ್ಕಿ; ಏ.17ರಂದು ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಘಟಾನುಘಟಿಗಳು ಅಖಾಡದಲ್ಲಿ ಭಾನುವಾರ ಪ್ರಚಾರದ ರಣಕಹಳೆ ಮೊಳಗಿಸಿದರು.
ಬೆಳಗ್ಗೆಯಿಂದಲೇ ನಾನಾ ಕಡೆ ರೋಡ್‍ಶೋ ಸೇರಿ ಆಂತರಿಕ ಸಭೆ ನಡೆಸಿದ ಕಾಂಗ್ರೆಸ್ ನಾಯಕರು ಸಂಜೆ ಮಸ್ಕಿಯಲ್ಲಿ ನಡೆದ ಬಹಿರಂಗ ಅಧಿವೇಶದನಲ್ಲಿ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರಕಾರ ಭ್ರಷ್ಟಾಚಾರ ಸರಕಾರ, ಅತ್ಯಂತ ಕೆಟ್ಟ ಸರಕಾರ ಸಿಎಂ ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗಳು ಮುಂದಿನ ರಾಜಕೀಯದ ದಿಕ್ಸೂಚಿಗಳಾಗಿವೆ. ಬಸವಕಲ್ಯಾಣ, ಮಸ್ಕಿ, ಬೆಳಗಾವಿಯ ಉಪಚುನಾವಣೆಗಳು ಅತಿ ಮಹತ್ವದ ಚುನಾವಣೆಗಳು. ಹೈಕ ಭಾಗದಲ್ಲಿರುವ ಮಸ್ಕಿ ಸೇರಿ ಇಲ್ಲಿನ ಆರು ಜಿಲ್ಲೆಗಳಿಗೆ 371 ಜೆ ಕಾಯಿದೆಯನ್ನು ಅನುಷ್ಠಾನ ಮಾಡಿದ್ದು ಕಾಂಗ್ರೆಸ್ ಸರಕಾರ. ಈ ಕಾಯಿದೆ ಜಾರಿ ಬಳಿಕ ಈ ಭಾಗದಲ್ಲಿ ಶೈಕ್ಷಣಿಕ, ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ. ಮೀಸಲಾತಿ ಕೊಟ್ಟಿದ್ದು ಹೆಚ್ಚೇ? ಬಿಜೆಪಿ ಸರಕಾರ ಚುನಾವಣೆಗಾಗಿ ಹಂಚುತ್ತಿರುವ ದುಡ್ಡು ಹೆಚ್ಚೋ? ನೀವೆ ಆಲೋಚನೆ ಮಾಡಿ. ಸರಕಾರಿ ಉದ್ಯೋಗದಲ್ಲಿ ನೇಮಕಾತಿಯಲ್ಲಿ ತೀವ್ರ ಕಷ್ಟಕರವಾಗಿತ್ತು. ಆದರೆ 371 ಕಾಯಿದೆ ಜಾರಿ ಬಳಿಕ ಸಾವಿರಾರು ಉದ್ಯೋಗಗಳು ಸೃಷ್ಠಿಯಾಗಿವೆ. ಹೈಕ ಭಾಗದ ಯುವಕರು ಎಲ್ಲ ಇಲಾಖೆಯಲ್ಲೂ ಸರಕಾರಿ ನೌಕರಿಗೆ ಸೇರುತ್ತಿದ್ದಾರೆ. ಶೇ.8ರಷ್ಟು ಮೀಸಲಾತಿ ಅನ್ಯ ರಾಜ್ಯಗಳ ನೇಮಕಾತಿಯಲ್ಲೂ ಇಲ್ಲಿನವರಿಗೆ ಆದ್ಯತೆ ಸಿಕ್ಕಿದೆ. ಎಲ್ಲ ವಲಯಗಳಲ್ಲೂ ಅಭಿವೃದ್ಧಿ ಕ್ರಾಂತಿಯಾಗುತ್ತಿದೆ. ಈ ಕಾನೂನು ಜಾರಿ ಬಳಿಕ ಬೇರೆ ರಾಜ್ಯಗಳೂ ತಿರುಗಿ ನೋಡುತ್ತಿವೆ. ಆದರೆ ಇಂತಹ ಕಾನೂನು ಜಾರಿಯಾದರೂ ಬಿಜೆಪಿ ಸರಕಾರ ಮೀಸಲು ಅನ್ವಯ ಈ ಭಾಗಕ್ಕೆ ಸರಿಯಾದ ಅನುದಾನ ಸಿಗುತ್ತಿಲ್ಲ. ಆರ್ಥಿಕತೆ ದಿವಾಳಿ ಕಾರಣ ಬಿಜೆಪಿ ಸರಕಾರದಲ್ಲಿ ರಸ್ತೆಗಳಿಗೆ ಒಂದು ಪುಟ್ಟಿ ಮಣ್ಣು ಹಾಕಲು ದುಡ್ಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿ, 213 ಮತಗಳ ಅಂತದಿಂದ ಸೋತಿರುವ ಆರ್.ಬಸನಗೌಡ ತುರುವಿಹಾಳನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕೆಂದರು.
ಆರ್.ಬಸನಗೌಡ ತುರುವಿಹಾಳ ಮಾತನಾಡಿದರು. ಶಾಸಕರಾದ ಅಮರೇಗೌಡ ಬಯ್ಯಾಪೂರು, ಡಿ.ಎಸ್.ಹೂಲಗೆರಿ, ಬಸನಗೌಡ ದದ್ದಲ್, ಎನ್,ಎಸ್,ಬೋಸರಾಜ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ವಿ.ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಇದ್ದರು.
11-ಎಂಎಸ್‍ಕೆ-11
ಮಸ್ಕಿ ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ಭಾಗವಹಿಸಿದ ಜನಸ್ತೋಮ
11-ಎಂಎಸ್‍ಕೆ-11 ಎ
ಮಸ್ಕಿ ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

 

Don`t copy text!