ಬ್ಯಾಂಕ್ ಕಳ್ಳರ ಬಂಧನ , ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಕೊಪ್ಪಳ : ಯಲಬುರ್ಗಾ ತಾಲೂಕು ಬೇವೂರು ಕರ್ನಾಟಕ ಬ್ಯಾಂಕ್ ನಲ್ಲಿ ಕಳುವಾದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಬಂಧಿಸಿ ಉಳಿದವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಕೊಪ್ಪಳ ಎಸ್.ಪಿ. ಜಿ.ಸಂಗೀತಾ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪ್ರಶಾಂತ ಹಾಗೂ ಹರಿದಾಸರನ್ನು ಬಂಧಿಸಲಾಗಿದೆ. ಇವರು ಸೇರಿದಂತೆ ನಾಲ್ವರು ಮತ್ತು ಉತ್ತರ ಪ್ರದೇಶದ ಆರು ಜನ ಸೇರಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.
ಸೆರೆ ಸಿಕ್ಕವರಿಂದ ೧೩.೧೬ ಲಕ್ಷ ರೂ. ಮೌಲ್ಯದ ೩೭೦ ಗ್ರಾಂ. ಬಂಗಾರದ ಆಭರಣಗಳು, ೬೫ ಸಾವಿರ ರೂ. ನಗದು ಮತ್ತು ಸ್ಕಾರ್ಪಿಯೋ ಮತ್ತು ಸ್ವಿಪ್ಟ್ ಕಾರು ಹಾಗೂ ೩ ಮೊಬೈಲ್ ಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಕಳ್ಳರನ್ನು ಬಂಧಿಸಿದ ಪೊಲೀಸ್ ತಂಡ
*ಕಾರ್ಯಚರಣೆ*
ಸೆ.೨೩ ರಂದು ರಾತ್ರಿ ಬ್ಯಾಂಕ್ ದರೋಡೆ ಮಾಡಿದ್ದರು. ಕಂಟ್ರಿ ಪಿಸ್ತೋಲ್ ಹೊಂದಿದ್ದ ಇವರು ಬ್ಯಾಂಕ್ ಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ಹೊಡೆದು, ಗ್ಯಾಸ್‌ ಕಟರ್ ನಿಂದ ಬಾಗಿಲು ಮುರಿದು ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ.
ಈ ಪ್ರಕರಣವನ್ನು ಕಡಿಮೆ ಅವಧಿಯಲ್ಲಿ ಪತ್ತೆ ಹಚ್ಚುವಲ್ಲಿ ಶ್ರಮವಹಿಸಿದ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಎಂ.ನಾಗರೆಡ್ಡಿ, ಪಿಐ ಶಿವರಾಜ ಇಂಗಳಿಗಿ, ಪಿಎಸ್ ಐಗಳಾ್ ವೆಂಕಟೇಶ ಎನ್, ಅಮರೇಶ ಹುಬ್ಬಳ್ಳಿ, ಸೇರಿ ಶ್ರಮವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಬಹುಮಾನ ಕೊಡಲಾಗುವದು ಎಂದು ಎಸ್ಪಿ ಜಿ.ಸಂಗೀತಾ ಹೇಳಿದ್ದಾರೆ.

Don`t copy text!