ನಿತ್ಯ ನೆನೆಯೋ ಬಸವನ ಹೆಸರ

ನಿತ್ಯ ನೆನೆಯೋ ಬಸವನ ಹೆಸರ

ನಿತ್ಯ ನೆನೆಯೋ ಬಸವನ ಹೆಸರ !
ಸಾರಿ ಹೊಡೆಯೋ ನಿಜ ಢಂಗುರ !
ಅರಿತು ಕೂಡೋ ನೀ ಶಿವಶರಣರ !
ಸತ್ಯದ ಮಾತಿದು ಐತ್ಯಪ್ಪ ಜೋರ !!ಪ!!

ಅರಿವಿನ ಜನ್ಮವಿದು ಇರಬೇಕು ಎಚ್ಚರ!
ಶರಣರ ನೆನೆದು ಕಳಿಯಬೇಕು ಮತ್ಸರ!
ಸುಳ್ಳಿನ ಸಂತಿದು ಸಾಗಬ್ಯಾಡೋ ದೂರ
ಕೊನೆತನಕ ಎಳಿಯಪ್ಪ ಸಂಸಾರ ತೇರ !!

ಜ್ಞಾನದ ಅಡುಗೆ ಮಾಡಬೇಕು ಜೋರ !
‌ಸತ್ಯುಳ್ಳ ಶರಣರಿಗೆ ಅರ್ಪಿಸೋ ಪೂರ!
ಆತ್ಮದ ಶಾಂತಿಗೆ ವಚನ ಬುತ್ತಿ ಆಧಾರ!
ಮೈಲಿಗೆ ಮನಸು ಮೆಚ್ಚೋದಿಲ್ಲ ದೇವರ.

ಬಾಡಿಗೆಮನೆಯಿದು ಬರೀಬ್ಯಾಡೋ ಹೆಸರ
ಇಲ್ಲಿ ಬಂದವರು ನಾವೆಲ್ಲ ಬಾಡಿಗೆದಾರರು
ಸ್ವಂತದಲ್ಲೋ ತಮ್ಮ ಇಲ್ಲಿ ಯಾರ್ಯಾರ
ನೀ ಸತ್ತಾಗ ಹರಿದು ಒಗೀತಾರುಡದಾರ!!

ಹಿಂದಿನ ಜನ್ಮದ್ದು ಉಳದೈತಿ ಕೇಸರಿ !
ಮುಂದಿನ ಹಸನಕ್ಕ ಹಚ್ಚೋ ಕರ್ಪೂರ.
ದುಷ್ಟರ ದೋಸ್ತಿ ಬಿಡಬೇಕು ನಿರ್ಧಾರ!
ಶರಣರ ಸಂಗವೇ ಬದುಕಿಗೆ ಬಂಗಾರ !!

ವಿಶ್ವಗುರು ಬಸವನ ನಿತ್ಯ ಸ್ಮರಿಸಂಗಾರ !
ಸಂಸಾರದಲ್ಲಿ ಪಾರಾಗಿ ಗಳಿಸೋ ಹೆಸರ!
ಕಂದ ಪಂಪಯ್ಯನ ಕವನದ ನಿಜ ಸಾರ!
ಗುರುಬಸವನ ನೆನೆದು ಆಗಬೇಕು ಪಾರ!

*ಗೀತೆ ರಚನೆ*
-ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ,   ಜಿಲ್ಲಾಧ್ಯಕ್ಷರು ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ರಾಯಚೂರು.9980094144

One thought on “ನಿತ್ಯ ನೆನೆಯೋ ಬಸವನ ಹೆಸರ

  1. ಸತ್ಯ ಶರಣರ ಸಂಗವು ಹೆಜ್ಜೇನು ಸವಿದಂತೆ

    ಬದುಕು ಬಂಗಾರವದಂತೆ.

    ಆರ್.ಪ್ರಕಾಶ್.

Comments are closed.

Don`t copy text!