‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ ಬಿಡುಗಡೆ ಮಾಡಿದ
‘ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್-
ಕರೊನಾ ಮಣ್ಣಿನ ಕಡೆ ಸೆಳೆತಿದೆ ಹಗೆಯೇ ಬಂಗಾರದ ಮನುಷ್ಯ ಕೂಡ ಮಣ್ಣಿನ ಕಡೆಗೆ – ರಂಗನಾಥ
e-ಸುದ್ದಿ, ಬೆಂಗಳೂರು
ಮಹೇಶ ದೇವಶಟ್ಟಿ ಟಿ.ವಿ. ಪ್ರಪಂಚದಲ್ಲಿ ಮುಳುಗಿರುವ ವ್ಯಕ್ತಿ. ಈ ಕ್ಷೇತ್ರಕ್ಕೆ ಬಂದವರು ಟಿ.ವಿ ಭಾಷೆಯ ಬರಹಕ್ಕೆ ಹೊಂದುಕೊಳ್ಳುತ್ತಾರೆ. ಆದರೆ ಮಹೇಶ ದೇವಶಟ್ಟಿ ಪುಸ್ತಕ ಬರೆಯುವ ಗೀಳನ್ನು ಕಾಪಿಟ್ಟುಕೊಂಡ ವ್ಯಕ್ತಿ ಎಂದು ಪಬ್ಲಿಕ್ ಟಿ.ವಿ. ಮುಖ್ಯಸ್ಥ ರಂಗನಾಥ ಅಭಿಪ್ರಾಯ ಪಟ್ಟರು.
ಏ. ೨೪. ಶನಿವಡರ ಬಂಗಾರದ ಮನುಷ್ಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಡಾ.ರಾಜ್‌ಕುಮಾರ್ ಅವರ ೯೨ನೇ ಹುಟ್ಟು ಹಬ್ಬದಂದು ಅವರ ಬಂಗಾರದ ಮನುಷ್ಯ ಚಿತ್ರದ ಕತೆಯ ಒಳನೋಟವನ್ನು ಕುರಿತು ಮಹೇಶ ದೇವಶಟ್ಟಿ ಪುಸ್ತಕ ಬರೆದಿದ್ದಾರೆ.
ಕರೊನಾ ಹಾವಳಿ ನಗರ ಪ್ರದೇಶದಲ್ಲಿದ್ದವರನ್ನು ಮೂಲ ತಮ್ಮ ಊರುಗಳಿಗೆ ಹೋಗುವಂತೆ ಮಾಡಿದೆ. ಊರಿಗೆ ಹೋದವರು ತಮ್ಮ ಹೊಲ ಗದ್ದೆಗಳ ಕಡೆ ಮುಖ ಮಾಡುತ್ತಿದ್ದಾರೆ. ಹಾಗೆಯೇ ಬಂಗಾರದ ಮನುಷ್ಯ ಚಿತ್ರ ಪ್ರತಿಯೊಬ್ಬರು ಮಣ್ಣಿನ ಕಡೆ ಹೊಲಗಳ ಕಡೆ ಮುಖ ಮಾಡುವಂತೆ ಮಾಡಿದ ಸಿನಿಮಾ ಎಂದು ವ್ಯಾಖ್ಯಾನಿಸಿದರು.
ಮಹೇಶ ದೇವಶಟ್ಟಿ ಮಾತನಾಡಿ ಅಣ್ಣಾವರು ಮುಕ್ಕಾಗದ ಮೂರ್ತಿ. ಆಗಲೂ ಈಗಲೂ ಕೋಟಿ ಕೋಟಿ ಜನರಿಗೆ ಹುಮ್ಮಸ್ಸು ತುಂಬಿದ ಸಿನಿಮಾ. ಬಂಗಾರದ ಮನುಷ್ಯ. ಅದನ್ನೇ ನೆಪವಾಗಿಟ್ಟುಕೊಂಡು ಹೊರ ತಂದಿದ್ದೇನೆ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ. ‘
ಪಬ್ಲಿಕ್ ಟಿವಿ’ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಪುಸ್ತಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. ಡಾ.ಶಿವರಾಜ ಕುಮಾರ ವಿಡಿಯೋ ಮೂಲಕ ಶುಭ ಕೋರಿದ್ದಾರೆ.
ನನ್ನ ಹೊಕ್ಕಳ ಹುರಿ ಕತ್ತರಿಸುತ್ತಾ ಮತ್ತೊಂದು ಮಗುವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಸದಾ ತೂಗುತ್ತಿರಿ…ಈ ಕೈಗಳು ಇನ್ನಷ್ಟು ಜತನದಿಂದ ನಾಲ್ಕಾರು ಅಕ್ಷರ ಹೊಸೆದಾವು…ಬತ್ತಿ-ಹೊತ್ತಿ ಉರಿವ ಮುನ್ನವೇ ಈ ದೇಹ ಮಗದಷ್ಟು ಕಥನ ತೀಡಿಯಾವು.. ಎನ್ನುತ್ತಾರೆ
ಮಹೇಶ್ ದೇವಶೆಟ್ಟಿ.
—————
ಕೃತಿಗಾಗಿ ಸಂಪರ್ಕಿಸಿ…ಪ್ರಧಾನ ವಿತರಕರು : ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ದೂರವಾಣಿ ಸಂಖ್ಯೆ : (೦೮೩೬) ೪೨೫೨೪೯೮, ೯೪೪೮೧೧೦೦೩೪