ಪುಸ್ತಕ ಪರಿಚಯ
ಕೃತಿ…….ನಿನ್ನ ಧ್ಯಾನಿಸಿದ ಮೇಲೂ
ಲೇಖಕರು…… ಶ್ರೀ ಮತಿ ನಿರ್ಮಲಾ ಶೆಟ್ಟರ್
ಪ್ರಕಾಶಕರು……ಧಾರವಾಡ
ಗಜಲ್ ಶಬ್ದವು ಅರಬ್ಬೀ ಭಾಷೆಯಿಂದ ಬಂದಿದ್ದು ,ಆದರೆ ಅದು ಇರಾಣ ದೇಶಕ್ಕೆ ಹೋಗಿ ಅಲ್ಲಿ ಫಾಷಿ೯ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆಯಿತು.ಮುಂದೆ ಉದು೯ ಕಾವ್ಯ ಸಾಹಿತ್ಯ ದಲ್ಲಿ ಹೆಚ್ಚಿನ ಮನ್ನಣೆ ಪಡೆದು ಉದು೯ ಕಾವ್ಯ ರಾಣಿಯಾಗಿ ಎಲ್ಲರ ಮನ ಗೆದ್ದಿತು,ಇದು ಒಂದು ಹಾಡು ಗಬ್ಬವಾಗಿದೆ.ಗಜಲ್ದ ಸ್ಥಾಯಿಗುಣ ಪ್ರೇಮ,ಪ್ರೀತಿ,ವಿರಹ,ಕಾಯುವಿಕೆ,ನಿವೇದಿಸಿ ಕೊಳ್ಳುವಿಕೆ ,ಪ್ರೇಮದಲ್ಲಿ ಅಮಲೇರಿಸಿಕೊಂಡು ದೈವತ್ವಕ್ಕೇರಿಸುತ್ತದೆ,ಲೌಕಿಕದಿಂದ ಅಲೌಕಿಕಕಡೆ ಕರೆದುಕೊಂಡು ಹೋಗುತ್ತದೆ.ಗಜಲ್ ದಲ್ಲಿ ಆಧ್ಯಾತ್ಮಿಕ ಸ್ಪರ್ಶಇರುತ್ತದೆ.ದೇವರನ್ನು ಕಾಣುವ ,ದೇವರೊಂದಿಗೆ ಸಂವಾದಿಸುವ,ನೀವೇದಿಸಿ ಕೊಳ್ಳುವ ತುಡಿತ ವಿರುತ್ತದೆ.ತನ್ನನ್ನು ತಾ ಅರಿಯಲು ಧಾನ್ಯ ಕ್ಕೆ ಹಚ್ಚುತ್ತದೆ.ಹೃದಯಾಳದ ಪ್ರೇಮದ ತೀವ್ರತೆ ತೋರಿಸುತ್ತದೆ.ವಿರಹ,ಕಾಯುವಿಕೆ ,ಧ್ಯಾನಿಸುವಿಕೆ ಭಾವ ಗಳು ಕಣ್ಣಂಚಿನಲ್ಲಿ ಹನಿ ಮೂಡಿಸುತ್ತವೆ.ಹೃದಯ ನೋವಿನ ಭಾವದಿಂದ ನಲುಗಿದರೆ ಬರೆದ ಗಜಲ್ ಓದುಗನ ಮನ ಗೆಲ್ಲುತ್ತದೆ.ಮೊದ ಮೊದಲು ಈ ಸ್ಥಾಯಿಭಾವದಿಂದ ಗಜಲ್ ಗಳು ರಚನೆಯಾಗಿ ರಾಜಾಶ್ರಯದಲ್ಲಿ ಬೆಳೆಯುತ್ತಿತ್ತು .ನಂತರ ಅದು ಸಮಾಜ ಮುಖಿಯಾಗಿ ಸಮಾಜದ ನೋವಿಗೆ ಸ್ಪಂದಿಸಿ ಗಜಲ್ ಕಾರರು ವಿವಿಧ ವಿಷಯಗಳಲ್ಲಿ ಗಜಲ್ ಬರೆಯ ತೊಡಗಿದರು.ಇಂದು ಭಾರತದ ಎಲ್ಲಾ ಭಾಷೆಗಳಲ್ಲಿ ಗಜಲ್ ಗಳು ರಚನೆ ಯಾಗುತ್ತಿವೆ.ಕನ್ನಡ ನೆಲ ಜಲ ಸಂಸ್ಕೃತಿಗೆ ತಕ್ಕಂತೆ ಛಂದೋಬದ್ಧ ವಾಗಿ ಕನ್ನಡದಲ್ಲಿ ರಚನೆಯಾಗುತ್ತಿವೆ.ಗಜಲ್ ರಾಣಿಯ ಒನಪು ವೈಯ್ಯಾರಕ್ಕೆ ಮನ ಸೋತ ಕನ್ನಡ ಉತ್ಸಾಹಿ ಕವಿಗಳು ಗಜಲ್ ರಚನಾಕಾರ್ಯದಲ್ಲಿ ಭರದಿಂದ ಮುನ್ನುಗ್ಗುತ್ತಿದ್ದಾರೆ.ಕೆಲವರು ಎಡವಿಬೀಳುತ್ತಿದ್ದಾರೆ,ಗಜಲ್ ರಚನೆ ನೋಡಲು ಸುಲಭ ವೆಂದನಿಸಿದರೂಮಅದು ಎಲ್ಲರಿಗೆ ಒಲಿಯುವ ಸಾಹಿತ್ಯ ವಲ್ಲ ಬಹಳ ಧ್ಯಾನಿಸಿ ಬರೆಯ ಬೇಕಾಗುತ್ತದೆ.
ನಿರ್ಮಲಾ ಶೆಟ್ಟರ ,ಅವರು ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕಿಯರಾಗಿದ್ದು ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಈಗಾಗಲೇ ಸಾಹಿತ್ಯ ಲೋಕದಲ್ಲಿ ಕವಿತೆ ಕತೆ ಲೇಖನ ವಿಮಶೆ೯ ಮಾಡಿ ಎಲ್ಲರಿಗೂ ಚಿರಪರಿಚಿತ ರಾಗಿದ್ದಾರೆ,ಕನ್ನಡ ಗಜಲ್ ಲೋಕಕ್ಕೆ”ನಿನ್ನ ಧ್ಯಾನಿಸಿದ ಮೇಲೂ” ಎಂಬ ಗಜಲ್ ಸಂಕಲನ ಪ್ರಕಟಿಸಿ ತಮ್ಮದೆ ಛಪಾ ಮೂಡಿಸಿದ್ದಾರೆ,ಹಿಂದಿ ಭಾಷಾ ಪ್ರೌಢತೆ ಹೊಂದಿದ್ದಾರೆ
ಈ ಸಂಕಲನದಲ್ಲಿ ಒಟ್ಟು ೫೪ ಗಜಲ್ ಗಳಿದ್ದು ಮುನ್ನುಡಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಹಾಗೂ ಬೆನ್ನುಡಿಯನ್ನು ಚಿದಾನಂದ ಸಾಲಿ ಸರ್ ಅವರು ಬರೆದಿದ್ದಾರೆ.
ಈ ಸಂಕಲನದ ಗಜಲ್ ಓದುತ್ತಾ ಹೋದಂತೆ ಇವರ ಮಾಗಿದ ಮನಸ್ಸು ಮತ್ತು ಗಜಲ್ಗಳಲ್ಲಿ ಬಳಿಸಿದ ರೂಪಕಗಳು, ಹಾಗೂ ಗಜಲ್ ರಚನೆಗೆ ಬೇಕಾಗುವ ಛಂದೋ ಬದ್ಧತೆ ನಿಯಮಿತ ವಾಗಿದ್ದು ಎದ್ದು ಕಾಣುತ್ತವೆ.ಗಜಲ್ ರಚನೆಗೆ ಬೇಕಾಗುವ ಮೃದು ಭಾಷೆ,ಪ್ರತಿಮೆಗಳ ಬಳಿಕೆ ಓದುಗರ ಮನ ಗೆಲ್ಲು ತ್ತವೆ”ನಿನ್ನ ಧ್ಯಾನಿಸಿದ ಮೇಲೂ”ಸಂಕಲನದ ಗಜಲ್ ಗಳಲ್ಲಿಪದೇ ಪದೇ ಧ್ಯಾನದೊಳಗಿನ ಆಧ್ಯಾತ್ಮಿಕ ಜ್ಞಾನ ಎದ್ದು ತೋರಿಸುತ್ತವೆ,ಲೌಕಿಕ ದಿಂದ ಅಲೌಕಿಕ ಕಡೆ ತಿರಿಗುತ್ತವೆ. ಇವರ ಗಜಲ್ ಗಳು ಹಿಂದಿ ಗಜಲ್ ಗಳ ಮಾದರಿಯಲ್ಲಿದ್ದು ಕನ್ನಡ ಭಾಷೆಗೆ ಒಗ್ಗುವಂತೆ ಜೀವ ತುಂಬಿದ್ದಾರೆ.
*ಇವರ ಸಂಕಲನದಲ್ಲಿ ನನ್ನ ಗಮನ ಸೆಳೆದ ಕೆಲವು ಮಿಸ್ರಾ ಗಳು*
*ಅದೇನು ಮೋಹವೋ ತೀರಿಸಿದಷ್ಟು ಹೆಚ್ಚುತಿದೆ ದಿನವೂ
ನಿನ್ನ ಸ್ಪರ್ಶಿಸಿದಮಮೇಲೆ ಮುಟ್ಟುವುದು ಏನು ಉಳಿದಿದೆ*
*ಎಷ್ಟು ಹೊತ್ತು ಹೀಗೆ ಇರಲಿ ಆ ಚಂದ್ರ ಸರಿಯುವ ಹೊತ್ತಾಯಿತು
ತೀರಿಸದ ಋಣವಿದು ಹೊರಡು ಆ ಜೀವ ಕರಗುವ ಹೊತ್ತಾಯಿತು*
*ಜಗವ ಪ್ರೀತಿಸಲು ಅದಾವ ಅರ್ಹತೆ ಪಡೆಯಬೇಕು
ಜೀವ ಸುಖದ ಎಲ್ಲೇ ಮೀರಿದ ನಡತೆ ಪಡೆಯಬೇಕು*
ಕತ್ತಲಲ್ಲಿರುವೆ ಎಂದು ಯಾಕಳುವೆ ಅಲ್ಲಿಯೇ ಆ ಬೆಳಕಿದೆ
ಕಷ್ಟ ಬಂದೀತೆಂದು ಯಾಕೆ ಕೊರಗುವೆ ಅಲ್ಲಿಯೇ ಆ ಸುಖವಿದೆ*
ಲೋಕ ಜಂಜಡದಲಿ ಮುಳಗಿದೆ ನಿನ್ನ ಮರೆತ ಕಾರಣ
ಕೊಟ್ಟಿದ್ದು ಅನುಭವಿಸಿದೆ ತಳಮಳಿಸದೆ ನಿನ್ನ ಮರೆತ ಕಾರಣ
*ಮೇಲಿಂದ ಮೇಲೆ ಎಲ್ಲಂದರಲ್ಲಿ ಯಾಕೆ ನೆನಪಾಗುತ್ತಿ
ಕಾರಣ ಕೇಳಬೇಡ ಗೊತ್ತಿದೆ ನಿನಗೆ ಅದಕೆ ನೆನಪಾಗುತ್ತಿ*
ಇವರ ಗಜಲ್ ಗಳಲ್ಲಿ ಮನದ ತಳಮಳ ನೋವು ವಿರಹಾ ಕಾಯುವಿಕೆ ಪ್ರೀತಿ ಅಧ್ಯಾತ್ಮಿಕ ಸ್ಪರ್ಶ ,ಸಾಮಾಜಿ ಕಳಕಳಿ ರಾಜಕೀಯ ವಿಡಂಬನೆ ಇಂಥಹ ಎಲ್ಲಾ ವಿಷಯವು ಇವರ ಗಜಲ್ ಗಳ ರಚನಾ ದ್ರವ್ಯ ವಾಗಿದ್ದು ಓದುಗರ ಮನ ತಣಿಸುತ್ತವೆ,
“ನಿನ್ನ ಧ್ಯಾನಿಸಿದ ಮೇಲೂ” ಗಜಲ್ ಸಂಕಲನವು ಪ್ರೌಢ ತೆಯಿಂದ ಕೂಡಿದ ಒಂದು ಉತ್ತಮ ಸಂಕಲನವಾಗಿದೆಂದು ಹೇಳಲು ಸಂತೋಷ ವಾಗುತ್ತದೆ ಇವರಿಂದ ಇನ್ನೂ ಉತ್ತಮ ಕನ್ನಡ ಗಜಲ್ ಸಂಕಲನಗಳು ಕನ್ನಡಾಂಬೆಯ ಉಡಿ ತುಂಬಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆ.
–ಪ್ರಭಾವತಿ ಎಸ್ ದೇಸಾಯಿ ವಿಜಯಪುರ
ಮೊ.೮೪೦೮೮ ೫೪೧೦೮