ಬಸವಣ್ಣನಿಂದ ಬದುಕಿತ್ತು ಈ ಲೋಕ

ಬಸವಣ್ಣನಿಂದ ಬದುಕಿತ್ತು ಈ ಲೋಕ

ಬಸವಣ್ಣನಿಂದ ಬದುಕಿತ್ತು ಈ ಲೋಕ
ಬಸವ ಬಸವ ಎಂದು ಎನುತ್ತಿದ್ದರಯ್ಯ,!

ಬದುಕಿನ ನಡೆಯನು ಕಲಿಸಿದ ಬಸವ
ನುಡಿದಂತೆ ನಡೆಯಲು ಹೇಳಿದ ಬಸವ
ವಿಚಾರಬೋಧೆಯ ನಿತ್ಯಕಲಿಸಿದ ಬಸವ
ನಿಜ ತತ್ವವಿಚಾರ ಸದಾ ಕಲಿಸಿದ ಬಸವ!!

ಶುದ್ದ ಕಾಯಕ ವೃತ್ತಿ ಕಲಿಸಿದ ಬಸವ
ದಾಸೋಹ ನಿಷ್ಠೆಯ ತಿಳಿಸಿದ ಬಸವ
ಧರ್ಮದ ಹಾದಿಯ ತೋರಿದ ಬಸವ
ಮನಶುದ್ದಿ ಮಾಡಿದ ನಮ್ಮಯ ಬಸವ!!

ಲಿಂಗದ ಮಹಿಮೆ ತಿಳಿಸಿದ ಬಸವ
ವಿಭೂತಿ ವಿಚಾರ ಹೇಳಿದ ಬಸವ
ರುದ್ರಾಕ್ಷಿ ಧಾರಣೆ ಮಾಡಿದ ಬಸವ
ಪ್ರಸಾದದ ಮಹತ್ವ ತಿಳಿಸಿದ ಬಸವ!!

ಗುರುವಿನ ವಿಚಾರ ಹೇಳಿದ ಬಸವ
ನಮ್ಮ ಅಂಗದ ಕಿಂಕರ ಕಳೆದ ಬಸವ
ಅರಿವೇ ಗುರುವೆಂದು ತಿಳಿಸಿದ ಬಸವ
ಪ್ರಸನ್ನನಾದನು ನಾವು ನೆನೆದಲ್ಲಿ ಬಸವ

ಜನಸಾಮಾನ್ಯರಿಗಾಗಿ ಬದುಕಿದ ಬಸವ
ಜನರಲ್ಲಿ ಸರಳತೆಯ ಕಲಿಸಿದ ಬಸವ
ಕಲ್ಯಾಣ ಕ್ರಾಂತಿಯ ಬೆಳಗಿದ ಬಸವ
ವಚನ ಸಾಹಿತ್ಯವ ಬರೆದಿಟ್ಟನು ಬಸವ!!

ಶರಣರ ಸಂತತಿಯ ಬೆಳೆಸಿದ ಬಸವ
ಅಮರಗಣಂಗಳ ದಾಸೋಹಿ ಬಸವ
ನಮ್ಮ ದ್ವೇಷ ಭಾವನೆ ಕಿತ್ತಿಸೆದ ಬಸವ
ಜನರಲ್ಲಿ ಸ್ವಚ್ಛ ಮನಸ್ಸು ಕಟ್ಟಿದ ಬಸವ

ಜಾತಿ ಭೇದವ ಮರೆಸಿದೆ ಬಸವ
ನೀತಿ ಬೀಜವನ್ನು ಬಿತ್ತಿದ ಬಸವ
ವಿಚಾರ ಬೆಳೆಯ ಬೆಳೆದನು ಬಸವ
ಕರ್ಮದ ಕಸವನ್ನು ಕಿತ್ತಿದ ಬಸವ !!

ಲಿಂಗ ತಾರತಮ್ಯ ಕಳೆದನು ಬಸವ
ಹೆಣ್ಣಿಗೆ ಪ್ರಥಮಾದ್ಯತೆ ನೀಡಿದ ಬಸವ
ಮೇಲು ಕೀಳೆಂಬುದನು ಕಳೆದ ಬಸವ
ಶರಣರ ಮಹಿಮೆಯ ತಿಳಿಸಿದ ಬಸವ

ಅನುಭವ ಮಂಟಪ ಕಟ್ಟಿದ ಬಸವ
ಶರಣರ ಕ್ರಾಂತಿಯ ಬೆಳಗಿದ ಬಸವ
ಕೂಡಲ ಸಂಗಯ್ಯನ ಕೂಡಿದ ಬಸವ
ಕಂದ ಪಂಪಯ್ಯನ ಕವನದೊಳ್ ಬಸವ

ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು

One thought on “ಬಸವಣ್ಣನಿಂದ ಬದುಕಿತ್ತು ಈ ಲೋಕ

  1. ಸರ್ವರೊಳಗು ಒಂದಾಗು ಎಂದು ಸಾರಿದ ಮಹಾನ್ ಶರಣ ಶ್ರೀ ಬಸವಣ್ಣನವರಿಗೆ ನಮಿಸುತ

    ಶ್ರಿ ಪಂ ಪಯ್ಯಸ್ವಾಮಿಯವರಿಗೆ ಶರಣು ಶರಣಾರ್ಥಿ.

    ಆರ್.ಪ್ರಕಾಶ್

Comments are closed.

Don`t copy text!