ಕೊವಿಡ್ ಸೆಂಟರ್ ಆದ ವಸತಿ ನಿಲಯ

ಕೊವಿಡ್ ಸೆಂಟರ್ ಆದ ವಸತಿ ನಿಲಯ

e-ಸುದ್ದಿ, ಕೊಪ್ಪಳ

ಕೋವಿಡ್ ನ 2ನೇ ಅಲೆಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಸಂಕಷ್ಟದ ಸಂದರ್ಭದಲ್ಲಿ ಕೊಪ್ಪಳದ ಗವಿಶ್ರೀ ಮಠದಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ನ್ನು ತೆರೆಯಲು ಮಠದ ಶ್ರೀಗಳಾದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ‌ ನಿರ್ಧರಿಸಿದ್ದಾರೆ.
ಪೂಜ್ಯರು ಮಠದ ವಸತಿ ನಿಲಯವನ್ನು 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಿ, ಸಂಪೂರ್ಣವಾಗಿ ಕೋವಿಡ್ ರೋಗಿಗಳಿಗೆ ಮೀಸಲಿಟ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಮಠದ ವೈದ್ಯಕೀಯ ಕಾಲೇಜಿನ ಡಾಕ್ಟರ್ ಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಸಜ್ಜುಗೊಳಿಸಿದ್ದಾರೆ.
ಸಮಾಜದ ಸೇವೆಗೆ ಸದಾ ಮುಂದಿರುವ ಪೂಜ್ಯರು ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ನಿಜವಾದ ಮಾನವೀಯತೆ ಮೆರೆದಿದ್ದಾರೆ.
ಸ್ವಾಮೀಜಿಯ ಈ ಕಾರ್ಯಕ್ಕೆ ರಾಜ್ಯದ ಜನತೆ ಅಭಿನಂದಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಮೀಜಿಯ ಕಾರ್ಯಕ್ಕೆ ತಲೆ ಬಾಗಿದ್ದಾರೆ.

Don`t copy text!