ಮಸ್ಕಿ : ಕರೊನಾ ಹಾವಳಿಯಿಂದಾಗಿ ಈ ಬಾರಿ ಭ್ರಮರಾಂಬ ಪುರಾಣ ಹಾಗೂ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು.
ಪಟ್ಟಣದ ಭ್ರಮರಾಂಬ ದೇವಸ್ಥಾನ ದಲ್ಲಿ ಶನಿವಾರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಬಾರಿ ಕರೊನಾ ಹಿನ್ನಲೆಯಲ್ಲಿ ಬೆಳಿಗ್ಗೆ ಕೇವಲ ದೇವಿ ಪುರಾಣ ಪಠಣ ಮಾಡಲಾಗುತ್ತದೆ. ಪ್ರಸಾದ ವ್ಯವಸ್ಥೆ ಇರುವುದಿಲ್ಲ.
ಪುರಾಣದಲ್ಲಿ ದೆವಸ್ಥಾನ ಸಮಿತಿಯವರು ಮತ್ತು ಅರ್ಚಕರು ಹಾಗೂ ಕೇಲವೆ ಜನರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗುವದು. ದೈಹಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸಿಕೊಳ್ಳುವಂತೆ ಕಡ್ಡಾಯ ಮಾಡಲಾಯಿತು.
ನವರಾತ್ರಿ ಉತ್ಸವದ ಕೊನೆಯ ದಿನ ಸಾಂಕೇತಿಕವಾಗಿ 21 ಪೂರ್ಣ ಕುಂಭ ಹಾಗೂ ಸಂಜೆ ಸಾಂಕೇತಿಕ ವಾಗಿ ರಥೋತ್ಸವ ನಡೆಸಲಾಗುವುದು ಎಂದರು.
ಮುಖಂಡರಾದ ūಮಹಾದೇವಪ್ಪ ಗೌಡ ಪೋಲಿಸ್ ಪಾಟೀಲ್, ಪ್ರಕಾಶ ದಾರಿವಾಲ್, ಅಂದಾನಪ್ಪ ಗುಂಡಳ್ಳಿ, ಇದ್ದರು.