ಬಸವ ಜಯಂತಿ ಹಾಗೂ ಡಾ.ಮಹಾಂತಪ್ಪಗಳ ಪುಣ್ಯಸ್ಮರಣೆ
ಆನ್ ಲೈನ್ ನಲ್ಲಿ ಶರಣ ಈಶ್ವರ ಮಂಟೂರು ಅವರಿಂದ ಅನುಭಾವ
e-ಸುದ್ದಿ,ಇಲಕಲ್ಲ
ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ ಇಲಕಲ್ಲ, ಬಸವ ಕೇಂದ್ರ, ಶ್ರೀ ವಿಜಯ ಮಹಾಂತೇಶ ತರುಣ ಸಂಘ, ಅಕ್ಕನ ಬಳಗ ಹಾಗು ಯುವ ಸೇವಾ ಬಳಗದಿಂದ ಬಸವ ಜಯಂತಿ ಹಾಗೂ ಲಿಂ.ಮ.ನಿ.ಪ್ರ.ಡಾ. ಮಹಾಂತಪ್ಪಗಳ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ ೧೯-೦೫-೨೦೨೧ ಬುಧವಾರ ಸಂಜೆ ೬-೩೦ ರಿಂದ ೮-೩೦ ರವರೆಗೆ ಆನ್ ಲೈನ್ ನಲ್ಲಿ ಜೂಮ್ ಮೀಟ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ. ಮ.ನಿ.ಪ್ರ.ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ. ನಮ್ಮ ನಾಡಿನ ಪ್ರಮುಖ ಪ್ರವಚನಕಾರ ಶರಣ ಶ್ರೀ ಈಶ್ವರ ಮಂಟೂರು ಅನುಭಾವ ನೀಡಲಿದ್ದಾರೆ.
ಶರಣೆ ವಿನಯಾ ಎನ್ ಹರಿಹರ ಪ್ರಾರ್ಥನೆ ಹಾಡು ಹಾಡುತ್ತಾರೆ. ಬಸವ ಕೇಂದ್ರದ ಅಧ್ಯಕ್ಷ ಶರಣ ಶಿವಾನಂದ ರುಳಿ ಸ್ವಾಗತ ಮಾಡಲಿದ್ದಾರೆ.
ಅಕ್ಕನ ಬಳಗದ ಅಧ್ಯಕ್ಷೆ ಶರಣೆ ಗಿರಿಜಾ ಶಿವಬಲ್ ಆಶಯ ನುಡಿ ಮಂಡಿಸುವರು. ಅಕ್ಕನ ಬಳಗದ ಕಾರ್ಯದರ್ಶಿ ಶರಣೆ ಸುನಿತಾ ಎಸ್ ಅಂಗಡಿ ಪರಿಚಯ ಕಾರ್ಯಕ್ರಮ ನಡೆಸುವರು. ಅಕ್ಕನ ಬಳಗದ ಮತ್ತೊಬ್ಬ ಕಾರ್ಯದರ್ಶಿ ಸವಿತಾ ಮಾಟೂರು ಕಾರ್ಯಕ್ರಮ ನಿರೂಪಣೆ ಮಾಡುವರು. ಶರಣ ಮಹಾಂತೇಶ ಅಂಗಡಿ ತಾಂತ್ರಿಕ ನಿರ್ವಹಣೆ ಮಾಡುವರು.
ಆಸಕ್ತರು ಜೂಮ್ ಮೀಟ್ ಐಡಿ ಬಳಸಿ ಕಾರ್ಯಕ್ರಮ ವೀಕ್ಷಿಸಬಹುದು.
ID:82387132336
Password : D2021