ಕೈವಲ್ಯ ಸಾಹಿತ್ಯ

ಕೈವಲ್ಯ ಸಾಹಿತ್ಯ


ಮದ್ಯಕಾಲೀನ ಭಕ್ತಿಸಾಹಿತ್ಯ ಕರ್ನಾಟಕ ಇತಿಹಾಸದಲ್ಲಿ ಅತಿ ಮಹತ್ವದ ಕಾಲ.ಜಗತ್ತಿನ ಧಾರ್ಮಿಕ ಆದ್ಯಾತ್ಮದ ಇತಿಹಾಸದಲ್ಲಿ ಕಂಡರಿಯದ ಶಿವಾನುಭವ ಸುವರ್ಣ ಕಾಲ.೧೫ ನೇ ಶತ
ಮಾನದ ನಿಜಗುಣ ಶಿವಯೋಗಿಗಳು ಭಾರತೀಯ
ದಾಶ೯ನಿಕ ಪರಂಪರೆಯ ಶ್ರೇಷ್ಠ ಜ್ಞಾನಿ.ವೈರಾಗ್ಯ ಮೂರ್ತಿ ಸಂಗೀತಗಾರ. ಜನ ಬದುಕಬೇಕೆಂದು ಲೋಕ ಕಲ್ಯಾಣ ಕ್ಕಾಗಿ ಕೈವಲ್ಯ ಭಕ್ತಿ ಸಾಹಿತ್ಯವನ್ನು ರಚಿಸಿದರು.

ಸರಳಗನ್ನಡದಲ್ಲಿ ಕಂದ ವೃತ್ತ
ಷಟ್ಪದಿ ಸಾಂಗತ್ಯ…..ಹಾಡು
ಗಬ್ಬ ಗದ್ಯಗಳಲ್ಲಿ ಮನೋಜ್ಞ
ವಾಗಿ ತಿಳಿಸಿದರು.

ಜೀವನು ಸಂಸಾರದಿಂದ ಬಿಡುಗಡೆ ಪಡೆಯುವ ಹಂತವನ್ನು ಕೈವಲ್ಯ ಎಂದು ಬಳಸಲಾಗುತ್ತದೆ. ಜೈನರಲ್ಲಿ
ಕೇವಲ ಎನ್ನುವ ಅರ್ಥ ಬರುತ್ತದೆ. ಅಂದರೆ ಮೋಕ್ಷ
ಹೊಂದುವುದು. ಅದ್ವೈತಲ್ಲಿ ಕೈವಲ್ಯ ವೆಂದರೆ ಆತ್ಮ ಪರ
ಮಾತ್ಮರ ಐಕ್ಯ. ಆತ್ಮ ಮಾಯಾ ಸಂಬಂದ ದಿಂದ ಕೇವಲತೆಯನ್ನು ಹೊಂದಿ ಪರಮಾತ್ಮನಾಗುವುದು.
ಕೈವಲ್ಯದ ಹಾಡುಗಳು ಗುರುಸ್ತುತಿಯ ಮೂಲಕ ಪ್ರಾರಂಬವಾಗುತ್ತವೆ. ಮುಂದೆ ಸ್ಥಲ ಗತಿಗಳಲ್ಲಿ
ವಿಂಗಡಣೆಯಾಗುತ್ತಾ ಸಂಗೀತ ಶಾಸ್ತ್ರ ದ ಮಾರ್ಗ
ವನ್ನು ತೋರಿಸುವುದು ಕಂಡುಬರುತ್ತದೆ.

ಶ್ರೀ ಗುರು ವಚನದಿಂದಧಿಕ
ಸುಧೆಯುಂಟೆ? ರಾಗದಿಂ ಬೇರಿನ್ನು ಭವಬೀಜ ಉಂಟೆ
ನರಜನ್ಮದಿಂದಿಹದೊಳು ಮಿಗಿಲುಂಟೆ?
ಕೈವಲ್ಯ ಸಾಹಿತ್ಯದಲಿ ಗುರು ಮುಖ್ಯ ವಾಗುತ್ತಾನೆ. ಈ ನರ
ಜನ್ಮಕ್ಕೆ ಮುಕ್ತಿ ದೊರಕ ಬೇಕಾದರೆ ಮೋಕ್ಷ ಹೊಂದಬೇಕಾದರೆ
ಗುರುವೆನ್ನುವ ಮೌಲ್ಯ ಗಳು ಅಂದಿನ ಭಕ್ತನ ನಿಷ್ಠತೆಯನ್ನು
ತಿಳಿಸುತ್ತವೆ.

ನಿಜಗುಣರು ಜೀವಿಯ ಕರ್ಮ ಸಿದ್ದಾಂತಗಳನ್ನು ನೀತಿ
ಮಾರ್ಗದಲ್ಲಿ ಹೇಳಿದರು. ವಚನಗಳಾಗಲಿ ಕೈವಲ್ಯ ಸಾಹಿತ್ಯವಾಗಲಿ ಭಿನ್ನವಾದ ಐತಿಹಾಸಿಕ ಸಂದರ್ಭ ಗಳಲ್ಲಿ
ನಿರ್ಮಾಣ ವಾದಂಥವುಗಳು.
ಜನಮುಖಿಯಾಗಿ ಶ್ರವಣ ಸಂವಹನದಲ್ಲಿ ಹಾಡುವ ಪಠ್ಯಗಳೆಂಬುದನ್ನು ಗಮನಿಸ ಬೇಕು.

ಶ್ರೀ ಗುರು ವಚನೋಪದೇಶವನಾಲಿಸಿದಾಗಳಹುದು ನರರಿಗೆ ಮುಕುತಿ….
ದುರಿತ ಕರ್ಮವನೊಲ್ಲದಿರು
ಪುಣ್ಯ ವನೆ ಮಾಡು ಹರನ
ಡಿವಿಡಿ ಶಾಂತರೊಡನಾಡು
ಕರುಣವಿರಲಿ ಜೀವರೊಳು
ಪೊರೆ ಪೊರ್ದಿದರನೆಂದು
ಬೆಸೆಸುವ.

ಗು .ಎಂದರೆ ಮಾಯೆ ರು. ಎಂದರೆ ನಿರೋಧಿಸುವವನು.
ಸಂಸಾರದ ಮಾಯಾ ಬ್ರಾಂತಿ
ಯನ್ನು ನಿವಾರಿಸುವವನೆ ಗುರು. ಗುರುವಿನ ವಚನ
ಮಾತ್ರದಿಂದ ಕಾಮ ಕ್ರೋಧ ಗಳು ನಶಿಸುತ್ತವೆ. ಆತನ
ಉಪದೇಶದಿಂದ ನಿನಗೆ ಮುಕ್ತಿ ಸಿಗುತ್ತದೆ. ಆದ್ದರಿಂದ ಗುರು ಜೀವನ್ಮುಕ್ತನು.

ಕನ್ನಡದ ಪ್ರಮುಖ ಕೈವಲ್ಯ
ಕಾರರಾಗಿ ನಿಜಗುಣರು, ಸರ್ಪಭೂಷಣ, ಬಾಲಲೀಲ ಮಹಾಂತ, ಮುಪ್ಪಿನ ಷಡಕ್ಷರಿ ಶಿವಯೋಗಿಗಳು ಕಾಣಿಸಿಕೊಳ್ಳುತ್ತಾರೆ.
ಸಕಲಕ್ಕೆಲ್ಲಕೆ ನೀನೆ ಅಕಳಂಕ ಗುರುವೆಂದು ನಿಖಿಲ ಶಾಸ್ತ್ರವ ಪೇಳುತಲಿರೆ ಅವರವರ ದರುಶನಕ್ಕೆ ಅವರವರ ವೇಷದಲ್ಲಿ ಅವರಿಗೆಲ್ಲಾ ಗುರು ನೀನೊಬ್ಬನೆ‌ ಹೋರಾಟ ವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಎಲೆ ದೇವನೆ
ಆರೂ ಅರಿಯರು ನೀನು
ಬೇರಾದ ಪರಿಗಳನು ಮಾರಾ
ರೆ ಶಿವ ಷಡಕ್ಷರಿಲಿಂಗವೆ ಕಲರಿಗೆಲ್ಲ ಶಿವನಾದವನು

ಶಾಸ್ತ್ರದ ಅರ್ಥವನ್ನು ಹೇಳುವವನು . ದೇಹಾಂತ ಕರಣಗಳ ಮೊತ್ತವೆ ನೀನು. ಲೋಕ ಸಂಗ್ರಹ ನಿರತನು. ಶಿಷ್ಯರಿಗೆ ಕೃಪೆ ತೋರುವ ಮಹಾಂತನು ಸಮರ್ಥನು.ಅನುಭಾವವನ್ನು ಶಿಷ್ಯರಿಗೆ ನೀಡಬಲ್ಲ ದೈವಾಂಗ ಗುರು ಶಿವನೇ ಎನ್ನುವ ನಿವೇದನೆ.

ಕೈವಲ್ಯದ ನಿರೂಪಣೆಯ ಅರ್ಥಗಳಾಗಿವೆ.ಅರ್ಥ ಜೀವ
ವಾದರೆ ಶಬ್ದ ದೇಹ ವಾಗುತ್ತದೆ. ಜೀವ ಮತ್ತು ದೇಹಗಳ ಸಂಬಂದ
ಕೈವಲ್ಯ ಸಾಹಿತ್ಯದಲ್ಲಿ ಮಾತ್ರ
ಕಾಣಲು ಸಾದ್ಯವಾಗುತ್ತದೆ.

ಪಲ್ಲವಿ ಅನುಪಲ್ಲವಿ ಗಳಿಂದ ಕೂಡಿದ ಇಲ್ಲಿಯ ಹಾಡುಗಳನ್ನು ಜೀವ ಸಂಬೋಧನಾ ಹಾಡುಗಳೆಂದು ಮೋಕ್ಷದ ಹಾಡುಗಳೆಂದು ಭಕ್ತಿ ಸಾಹಿತ್ಯದಲ್ಲಿ ಕರೆಯಲಾಗುತ್ತದೆ.

ಡಾ. ಸರ್ವಮಂಗಳ ಸಕ್ರಿ
ರಾಯಚೂರು.

Don`t copy text!