19ನೇ ವಾರ್ಡಿನಲ್ಲಿ 12ಜನರಿಗೆ ಕೊರೊನಾ ಪಾಸಿಟಿವ್

19ನೇ ವಾರ್ಡಿನಲ್ಲಿ 12ಜನರಿಗೆ ಕೊರೊನಾ ಪಾಸಿಟಿವ್
e-ಸುದ್ದಿ, ಮಸ್ಕಿ

ಮಸ್ಕಿ: ಪಟ್ಟಣದ 19 ವಾರ್ಡಿನಲ್ಲಿ 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಅವರು ಕೊರೊನಾ ಸೊಂಕಿತ ಸ್ಥಳಕ್ಕೆ ಬೇಟಿ ನೀಡಿದರು. ಪುರಸಭೆಯ 19 ವಾರ್ಡಿನ ವ್ಯಾಪ್ತಿಯ ಮಸ್ಕಿ ತಾಂಡಾದಲ್ಲಿನ 60 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು, ಅದರಲ್ಲಿ 12 ಜನರಿಗೆ ಮಹಾಮಾರಿ ಕೊರೊನಾ ಸೊಂಕು ತಗುಲಿದೆ. ಅಲ್ಲಿನ ಜನರಿಗೆ ಹರಡಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳು ತಾಂಡಾಕ್ಕೆ ಬೇಟಿ ನೀಡಿ ಸೊಂಕು ತಗುಲಿದ ಜನರಿಗೆ ಸೊಂಕಿನ ಕುರಿತು ತಿಳಿವಳಿಕೆ ನೀಡಿದರು.
ಪಟ್ಟಣದ ದೂರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಸೊಂಕಿಗೆ ಬೇಕಾದ ಅಗತ್ಯ ಚಿಕಿತ್ಸೆ ಕೊಡಿಸುತ್ತೇವೆ ಎಂದು ಮನವಿ ಮಾಡಿದರು.
ಸೊಂಕು ತಗುಲಿದ ಜನರು ಪ್ರತಿಕ್ರಿಯೆ ನೀಡಿ ನಮಗೆ ಯಾವುದೇ ತರಹ ಜ್ವರ, ನಗಡಿ,ಕೆಮ್ಮು ಇಲ್ಲ. ಕೊರೊನಾ ಹೇಗೆ ಬರುತ್ತದೆ. ನೀವು ತಪ್ಪು ಮಾಹಿತಿ ನೀಡುವುದರ ಜನರಿಗೆ ಭಯ ಹುಟ್ಟಿಸುತ್ತಿದಿರಾ, ಎಂದು ತಾಂಡದ ಜನ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು.
ಸೊಂಕಿನ ಕುರಿತು ಆರೋಗ್ಯ ಇಲಾಖೆದಿಂದ ನಮಗೆ ಮಾಹಿತಿ ಬಂದಿದೆ.‌
ನಾವೇನು ಸುಳ್ಳು ಹೇಳುತ್ತಿಲ್ಲ ಮನೆಯಲ್ಲಿ ಚಿಕ್ಕ ಪುಟ್ಟ ಮಕ್ಕಳು ಇರುತ್ತಾರೆ, ಒಬ್ಬರಿಂದ ಒಬ್ಬರಿಗೆ ಕೊರೊನಾ ಸೊಂಕು ತಗುಲುವ ಸಾಧ್ಯಗಳು ಇರುತ್ತವೆ, ನಮ್ಮ ಮಾತು ಕೇಳಿ ಎಂದು ಅಧಿಕಾರಿಗಳು ಮನವಿ ಮಾಡಿದರು.
ಮನವಿಗೆ ಸ್ಥಳೀಯ ಜಗ್ಗಲಿಲ್ಲ ನಮಗೆ ಯಾವುದೇ ರೀತಿ ಕೊರೊನಾ ಬಂದಿಲ್ಲ, ನಾವೂ ದಿನಾಲು ಹೊಲ ಮನೆ ಕೆಲಸ ಮಾಡುತ್ತಿದ್ದೇವೆ ನಿಮ್ಮ ಮನವಿಗೆ ಸ್ಪಂದಿಸಿ
ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಗದ್ಯೆಪ್ಪ, ಸ್ಥಳೀಯ ಮುಖಂಡ ಕೃಷ್ಣಮೂರ್ತಿ ಜಾಧವ, ಶಿವಪ್ಪ, ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿ ವರ್ಗದವರಿದ್ದರು.

Don`t copy text!