ಹೆಣ್ಣೇ ನಿನೇಕೆ ಬೇಡವಾದೆ ಈ ಜಗಕೆ?
ಮನೆಯಲ್ಲಿ ಮಗಳಾಗಿ
ತಾಯಿಗೆ ಆಸರೆಯಾಗಿ
ಅಪ್ಪನಿಗೆ ನೆರವಾಗಿ
ಅಣ್ಣನ
ಅಕ್ಕಳಿಗೆ ಪರವಾಗಿ
ತಮ್ಮ, ತಂಗಿಗೆ ಪೂರಕವಾಗಿ
ಬೆಳೆದ ಹೆಣ್ಣೇ,
ನೀನೇಕೆ ಬೇಡವಾದ
ಈ ಜಗಕೆ
ಗಂಡನಿಗೆ ಸ್ನೇಹಿತೆಯಾಗಿ
ಮಗನಿಗೆ ವಾತ್ಸಲ್ಯ ಎರೆದು,
ಮೊಮ್ಮಕ್ಕಳಿಗೆ ಪ್ರೀತಿ ಧಾರೆಯರೆದು
ಹೆಣ್ಣೇ ನೀನೇಕೆ
ಬೇಡವಾದೆ ಈ ಜಗಕೆ
ನೀನಿಲ್ಲದೇ ಬದುಕಲಾಗದು
ಎಂಬ ಕಠೋರ
ಸತ್ಯವನು ತಿಳಿದರೂ,
ನೀನಿಲ್ಲದೇ
ಸಂತಾನ
ಮುಂದುವರಿಯದು
ಎಂದು
ತಿಳಿದರೂ
ಬ್ರೂಣದಲ್ಲಿಯೇ ನಿನ್ನನ್ನು ಹೊಸಕಿದರು
ಹೆಣ್ಣೇ ನೀನೇಕೆ
ಬೇಡವಾದೆ ಈ ಜಗಕೆ
-ಡಾ ದಾನಮ್ಮ ಝಳಕಿ ಬೆಳಗಾವಿ