ನೀ ಇಲ್ಲದಿರುವಾಗ

ನೀ ಇಲ್ಲದಿರುವಾಗ

ಆವಾಗ
ನೀನು ತಬ್ಬಿಕೊಂಡದ್ದಕಷ್ಟೆ
ಇಷ್ಟುಂದು ಜನರು
ಜೀವ ಉಳಿಯಿತು…!

ಈಗ …
ನಿನ್ಹಾಗೆ
ಅಪ್ಪಿಕೊಳ್ಳುವವರಾರು…?
ಕೊಡಲಿಗೆ ಕೊರಳ ಕೊಡಲು
ಮುಂದೆ ಬರುವರಾರು..?
ಜನರಿಗೆ ಕೂಗಿಕೂಗಿ
ಹೇಳುವವರಾರು….!

ಗಾಳಿಯಿಲ್ಲದೆ ಉಸಿರುಗಟ್ಟಿ
ಸಾಯುತ್ತೀದ್ದಾರೆ…!
ಶುದ್ದಗಾಳಿಯನು ಭರಣಿಯಲಿ
ತುಂಬಿ ಉಸಿರಾಡಲು ಹಣ ಕೊಟ್ಟು
ಹೆಣಗುತ್ತಿದ್ದಾರೆ…!

ಅವರೊಂದು
ಮರ ನೆಡುವ
ಸಂಸ್ಕಾರ ಕಲಿಯುವವರೆಗಾದರು
ನೀನು ಬದುಕಿರಬೇಕಿತ್ತು….!

ಮಗುವಂತೆ ಅಪ್ಪಿಕೊಂಡು
ಕಾಪಾಡುವುದನು ಕಾಣುವುದಕ್ಕಾದರು
ನೀನಿರಬೇಕಿತ್ತು….!

ಹಾದಿ ಬೀದಿ ಯು
ಮರಗಳೆಲ್ಲಾ ಅಭಿವೃದ್ದಿ ಯ
ಪಾಲಾಗುತ್ತೀವೆ
ಆಸ್ಪತ್ರೆಗಳಲ್ಲಿ ಆಮ್ಲಜನಕ
ಉತ್ಪಾದನಾ ಘಟಕಗಳು
ಉದ್ಘಾಟನೆ ಗೊಳ್ಳುತ್ತಿವೆ….!

ಈ ವರ್ಷದ ಪರಿಸರ
ದಿನಾಚರಣೆ ದಿನವಾದರೂ
ಒಂದಷ್ಟು ಮರಗಳನ್ನು
ಮತ್ತೆ ನೆಡುವುದಕ್ಕಾದರು
ನೀನು ಇರಬೇಕಿತ್ತು…!

ಮಗುವೊಂದು
ಮನೆಗೊಂದು ವರವಂತೆ
ಮರವೊಂದು ಮನೆಗೆ
ಆಮ್ಲಜನಕದ ವರತೆಯಂತೆ
ಎಂದು ಅರಿವಾಗಿದೆ
ಮರವೊಂದು ಬೆಳೆಸುವ
ಸುಂದರ
ಸಂಕಲ್ಪಕ್ಕೆ ನಾಂದಿಗೀತೆ
ಶುರುವಾಗಿದೆ
ಅದನ್ನು ಕೇಳಿ ಸಂಭ್ರಮಿಸಲಾದರೂ
ನೀನು ಇರಬೇಕಾಗಿತ್ತು
ಬಹುಗುಣ ಅಜ್ಜಾ…‌!!

ಡಾ. ನಿರ್ಮಲಾ ಬಟ್ಟಲ

Don`t copy text!