ಓಡುತ್ತಿವೆ
ಓಡುತ್ತಿವೆ
ಹುಲಿ ಸಿಂಹ ಚಿರತೆಗಳು
ಮಾಂಸ ಆಹಾರ
ಹುಡುಕಿಕೊಂಡು
ನೆಗೆದು ಜಿಗಿಯುತ್ತವೆ
ಓಡುತ್ತಿವೆ ಜಿಂಕೆ
ಮೊಲ ಹರಿಣಗಳು
ಬದುಕುಳಿಯಲು
ರಭಸದ ಓಟ ಆನೆ
ಕಾಡೆಮ್ಮೆ ಕೋಣಗಳು
ಹಸಿರು ಹುಲ್ಲಿನ ಸುಗ್ಗಿ
ಹಸಿದು ಮೇಯಲು
ಓಡುತ್ತಿವೆ ನಾಯಿ
ಬೆಕ್ಕುಗಳು ಹಸಿವಿನಿಂದ
ಕಂಗೆಟ್ಟ ಹಳಸಿದ
ಅನ್ನಕ್ಕಾಗಿ
ಓಡುತ್ತಿವೆ ಮಂಗಗಳು
ಮರದ ಹಣ್ಣು ಕೀಳಲು
ಓಡುತ್ತಿವೆ
ಅಳಿಲು ಇರುವೆ ಮುಂಗಲಿ
ಓತಿಕ್ಯಾತ ಹಾವುಗಳು
ಮಳೆಗೆ ಬಿಲವ
ಹುಡುಕಿಕೊಂಡು
ಓಡುತ್ತಿವೆ ಕಾರು ಟ್ರೈನ್
ಹಾರುತ್ತಿವೆ ವಿಮಾನ
ಕ್ಷಿಪಣಿಗಳು
ವೈದ್ಯರು ಸಲಹೆ ನನಗೆ
ಓಡಲು
ನಾನು ಓಡುವದಿಲ್ಲ
ಹುಟ್ಟಿದ್ದು ಓಡುವದಕ್ಕಲ್ಲ
ಸತ್ಯದ ನಿಲುವನರಿತು
ದಿಟ್ಟ ನಡೆ ನಡೆಯಲು
ಓಡುತ್ತಿವೆ ಪ್ರಾಣಿಗಳು
ಹಸಿವಿನಿಂದ
ಪ್ರಾಣ ಭೀತಿಯಿಂದ
-ಡಾ.ಶಶಿಕಾಂತ.ಪಟ್ಟಣ ಪುಣೆ